ಇಂಗ್ಲಿಷ್ ಭಾಷಾ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸಿ: ಮಮದಾಪುರ

ಕಲ್ಬುರ್ಗಿ:ಅ.18: ಇಂಗ್ಲಿಷ್ ಭಾಷಾ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಶಾಲಾ ಮಕ್ಕಳಲ್ಲಿ ಇಂಗ್ಲಿಷ್ ಮಾತನಾಡುವ, ಬರೆಯುವ ಸಾಮಥ್ರ್ಯವನ್ನು ವೃದ್ಧಿಸುವ ಉದ್ದೇಶವನ್ನು ಪ್ರಶಿಕ್ಷಣಾರ್ಥಿಗಳು ಇಟ್ಟುಕೊಳ್ಳಬೇಕು ಎಂದು ವಿಜಯಪುರದ ಸಂಪನ್ಮೂಲ ವ್ಯಕ್ತಿಗಳಾದ ಹಾಗೂ ಆಂಗ್ಲ ಭಾಷೆಯ ಉಪನ್ಯಾಸಕರಾದ ಪೆÇ್ರಫೆಸರ್ ಶಿವಸಾಯಿ ಮಮದಾಪುರ ಹೇಳಿದರು. ಅವರು ಜೀವಗಿ ನಗರದ ಬಾಲಕರ ಪ್ರೌಢ ಶಾಲಾ ವಿಭಾಗದಲ್ಲಿ ಹಮ್ಮಿಕೊಂಡ ಪ್ರೌಢ ಶಾಲಾ ಆಂಗ್ಲ ವಿಷಯ ಬೋಧಿಸುವ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡುತ್ತಾ ಮಾತನಾಡಿದ ಅವರು ಇಂಗ್ಲಿಷ್ ಬೋಧನೆಗೆ ಹೊಸ ತಂತ್ರಗಳು, ಕ್ರಿಯಾತ್ಮಕ ವಿಧಾನಗಳು ಮತ್ತು ಮಕ್ಕಳನ್ನು ಪೆÇ್ರೀತ್ಸಾಹಿಸುವ ಮಾರ್ಗಗಳನ್ನು ಕುರಿತು ಸಲಹೆಗಳನ್ನು ನೀಡಿದರು.
ಪ್ರಶಿಕ್ಷಣಾರ್ಥಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೆಚ್ಚು ಸಂವಹನ ನಡೆಸಿ, ದಿನ ನಿತ್ಯದ ಚಟುವಟಿಕೆಗಳಲ್ಲಿ ಇಂಗ್ಲಿಷ್ ಬಳಸುವಂತೆ ಪೆÇ್ರೀತ್ಸಾಹಿಸಲು ಸೂಚಿಸಿದರು. ಅವರು “ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಭಾಣ ಕಲಿಕೆಯ ಮೊದಲ ಹೆಜ್ಜೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ನಿಕಟ ಸೇವಾ ತರಬೇತಿಯ ಎಲ್ಲಾ ಶಿಕ್ಷಕರು ಹಾಜರಿದ್ದರು.