Home ಜಿಲ್ಲೆ ವಿಶ್ವಶಾಂತಿಗಾಗಿ ಮಹಾಶಿವಯೋಗ ಅನುಷ್ಠಾನ

ವಿಶ್ವಶಾಂತಿಗಾಗಿ ಮಹಾಶಿವಯೋಗ ಅನುಷ್ಠಾನ

ವಿಜಯಪುರ,ಮೇ.21:ತಾಲೂಕಿನ ಬುರಣಾಪೂರದ ಶ್ರೀ ಮಲ್ಲಿಕಾರ್ಜುನ ದೇವಾಲಯದ ಧರ್ಮದರ್ಶಿ ಪೂಜ್ಯಶ್ರೀ ಲಕ್ಷ್ಮಣ ಶಿವಶರಣರು ಲೋಕಕಲ್ಯಾಣಕ್ಕಾಗಿ ಮಹಾಶಿವಯೋಗ ಅನುಷ್ಠಾನವನ್ನು ಪ್ರಾರಂಭಿಸಿದ್ದಾರೆ.
ವಿಶ್ವದಲ್ಲಿ ಉತ್ತಮವಾದ ಮಳೆಯಾಗಿ ಬೆಳೆ ಬಂದು ಸರ್ವರೂ ಶಾಂತಿಯುತವಾದ ಜೀವನವನ್ನು ಸಾಗಿಸಬೇಕು. ಎಲ್ಲರೂ ಧರ್ಮದ ಮಾರ್ಗದಲ್ಲಿ ನಡೆಯಬೇಕೆಂದು ಜಗದೊಡೆಯನಾದ ಶ್ರೀಗಿರಿಯ ಶ್ರೀ ಮಲ್ಲಿಕಾರ್ಜುನನಿಗೆ ಸಹಸ್ರನಾಮಾವಳಿಯ ಮಹಾಶಿವಪೂಜೆಯನ್ನು ಸಲ್ಲಿಸಿ ಧರ್ಮ ಜಾಗೃತಿಗಾಗಿ ದಿನಾಲೂ 12 ಜ್ಯೋತಿರ್ಲಿಂಗಗಳ ಸಾಮೂಹಿಕ ಲಿಂಗಾರ್ಚನೆಯನ್ನು ನೆರವೇರಿಸುವ ಸದುದ್ದೇಶವನ್ನು ಇಟ್ಟುಕೊಂಡು ಲೋಕೋದ್ಧಾರಕ್ಕಾಗಿ 208 ಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞವನ್ನು ಪೂರ್ಣಗೊಳಿಸುವ ಶುಭಸಂಕಲ್ಪವನ್ನು ಮಾಡಿ ವಿಶ್ವಶಾಂತಿಗಾಗಿ ಮಹಾಶಿವಯೋಗ ಅನುಷ್ಠಾನವನ್ನು ಪ್ರಾರಂಭಿಸಿದ್ದಾರೆ ಎಂದು ಸಮಾಜ ಸೇವಕ ಹನಮಂತ ಪುಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.