ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಜಪ್ತಿ

ಕಲಬುರಗಿ,ಮೇ.26-ಇಲ್ಲಿನ ತಾಜ್ ನಗರದ ಮುಖಾಂತರ ಗೂಡ್ಸ್ ವಾಹನದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕರಾದ ವಿದ್ಯಾಶ್ರೀ ಪಾಟೀಲ, ಚೌಕ್ ಪೊಲೀಸ್ ಠಾಣೆ ಎಎಸ್‍ಐ ಗಣಪತಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಗೂಡ್ಸ್ ವಾಹನ ಮತ್ತು ಅಕ್ಕಿ ಸೇರಿ 13,53,600 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಗೂಡ್ಸ್ ವಾಹನ ಚಾಲಕ ವಿರೇಶ ಡೋಲೆ ಮತ್ತು ಅಕ್ಕಿಯ ಮಾಲಿಕ ಜೇವರ್ಗಿಯ ಚಂದ್ರಕಾಂತ ಎಂಬುವವರ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.