
ವಿಜಯಪುರ,ಜ.16:ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಹಳೆಯ ಪಾಳುಬಿದ್ದ ಮನೆಯಲ್ಲಿ ಗೃಹ ಬಳಕೆ ಸಿಲಿಂಡರ್ ಬಳಸಿ ಅಕ್ರಮವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ತುಂಬಿಸುತ್ತಿದ್ದ ಸ್ಥಳಕ್ಕೆ ಆಹಾರ ಹಾಗೂ ಪೆÇಲೀಸ್ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ,41 ಗೃಹ ಬಳಕೆ ಸಿಲಿಂಡರ್ , 21 ವಾಣಿಜ್ಯ ಬಳಕೆ ಸಿಲಿಂಡರ್, ಮೋಟಾರ್ ಯಂತ್ರ ಮತ್ತು ತೂಕದ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡು, ಗೋಲ್ ಗುಂಬಜ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ ಹಾಗೂ ಗೋಲ್ ಗುಂಬಜ್ ಠಾಣೆ ಪಿಎಸ್ ಐ ಎಮ್.ಡಿ. ಘೋರಿ, ಎಎಸ್ ಐ ಎ.ಎ. ಹಾದಿಮನಿ , ಪೆÇಲೀಸ್ ಸಿಬ್ಬಂದಿಗಳಾದ ಗೋಪಾಲ ದಾಸರ, ಮಹಾದೇವ ಅಡಿಹುಡಿ,ಬಿ.ಬಿ. ಮಖಾನಾಪುರ, ಕುಶ ರಾಠೋಡ, ಮಲ್ಲಿಕಾರ್ಜುನ ಚಾವರ್, ಮೌನೇಶ ನೆಲವಾಸಿ, ಅಪ್ಪು ಕೋಟ್ಯಾಳ ಇದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























