
ಜಮಖಂಡಿ:ಫೆ.27: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 14980 ಕೆಜಿ ಪಡಿತರ ಅಕ್ಕಿ ಹಾಗೂ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿದರಿ ಚಿಕ್ಕಲಕಿ ಸಾವಳಗಿ ಮಾರ್ಗವಾಗಿ ತೆಲಸಂಗ ಕಡೆಗೆ ಹೋಗುವಾಗ ಸಾವಳಗಿ ಸರಕಾರಿ ಆಸ್ಪತ್ರೆಯ ಎದುರಿಗೆ ತೆಲಸಂಗ ರಸ್ತೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಂದಾಜು 518308 ಮೌಲ್ಯದ 14980 ಕೆಜಿ ಪಡಿತರ ಅಕ್ಕಿ ಸಹಿತ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಅನಧಿಕೃತವಾಗಿ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ಲೋಡ್ ಮಾಡಿಕೊಂಡು ಹೋಗುವ ಸಂಧರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಆಹಾರ ಇಲಾಖೆಯ ಶಿರಸ್ತೇದಾರ್ ಬಸವರಾಜ ತಾಳಿಕೋಟಿ, ಆಹರ ನೀರಿಕ್ಷಕ ಆನಂದ ರಾಠೋಡ ಹಾಗೂ ಸಾವಳಗಿ ಪೆÇೀಲಿಸರಾದ ಶಿವಾನಂದ ಭಜಂತ್ರಿ,ಉತ್ನಾಳ ಅವರು ದಾಳಿ ನಡೆಸಿ, ಪರಿಶೀಲಿಸಿದಾಗ ಪ್ಲಾಸ್ಟಿಕ್ ಚೀಲಗಳಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಕಂಡು ಬಂದಿವೆ.
ಲಾರಿಯ ಚಾಲಕ ಹಸನ ಮೋದಿನಸಾಭ ಜಮಾಧಾರನನ್ನು ವಿಚಾರಿಸಿದಾಗ ಅಕ್ಕಿಯ ಬಗ್ಗೆ ಯಾವುದೇ ದಾಖಲೆ, ರಶೀದಿ ಇರದಿದ್ದ ಕಾರಣದಿಂದಾಗಿ ಅನಧಿಕೃತವಾಗಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹೀಗಾಗಿ 518308 ಲಕ್ಷ ಮೌಲ್ಯದ 14989ಕೆಜಿ ಪಡಿತರ ಅಕ್ಕಿ ವಶಕ್ಕೆ ಪಡೆದು ಚಾಲಕನ ವಿರುದ್ಧ ಆಹಾರ ಇಲಾಖೆ ಸಿರಸ್ತೆದಾರ ಬಸವರಾಜ ತಾಳಿಕೋಟಿ ಅವರು ಸಾವಳಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.






















