ಅನಧಿಕೃತ ತಂಬಾಕು ಮಾರಾಟ:ವ್ಯಾಪಾರಸ್ಥರಿಗೆ ದಂಡ

ಕಲಬುರಗಿ:ಅ.6: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತ್ನಾಳ ರವರ ನೇತೃತ್ವದಲ್ಲಿ ಕೊಟ್ಪಾ 2003 ರ ಅಡಿಯಲ್ಲಿ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಅನಧಿಕೃತ ತಂಬಾಕು ಮಾರಾಟ ವ್ಯಾಪಾರಸ್ಥರಿಗೆ ದಂಡ ವಿಧಿಸಲಾಗಿದೆ ಹಾಗೂ ಆಸ್ಪತ್ರೆ ಸುತ್ತ ಮುತ್ತ ಧೂಮಪಾನ,ತಂಬಾಕು, ಗುಟ್ಕಾ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.ಹೋಟೆಲ್ ಗಳಲ್ಲಿ ಧೂಮಪಾನ ನಿಷೇಧಿತ ಫಲಕಗಳನ್ನು ಪ್ರದರ್ಶಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಕೇಶ ಕಾಂಬ್ಳೆ, ಜಿಲ್ಲಾ ತಂಬಾಕು ನಿಯಂತ್ರಣಾ ಕೋಶದ ಸಲಹೆಗಾರರಾದ ಸುಜಾತಾ ಪಾಟೀಲ, ಸಮಾಜ ಕಾರ್ಯಕರ್ತರಾದ ಆರತಿ ಧನಶ್ರೀ,ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ವಿಜಯಕುಮಾರ,ಸಂತೋಷ ಮುಳಜೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ,ರವಿ ಪೂಜಾರಿ ಹಾಗೂ ಸುಧಾಕರ್ ಹಾಜರಿದ್ದರು.