ಅಕ್ರಮ ಗಣಿಗಾರಿಕೆ, ಪಾಟೀಲ್ ಪತ್ರ ನಾಟಕ

(ಸಂಜೆವಾಣಿ ಪ್ರತಿನಿಧಿಯಿಂದ)


ಮಂಡ್ಯ,ಜೂ.೨೨:
ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕಾನೂನು ಹಾಗೂ ಸಂಸದೀಯ ಸಚಿವ ಎಚ್.ಕೆ ಪಾಟೀಲ್ ಈಗ ಪತ್ರ ಬರೆದಿರುವುದು ಒಂದು ನಾಟಕ ಅಷ್ಟೆ. ಪ್ರಸಕ್ತ ವಿಚಾರಗಳನ್ನು ಬೇರೆಡೆಗೆ ಸೆಳೆಯಲು ಈ ಪತ್ರ ಬರೆಯಲಾಗಿದೆ ಅಷ್ಟೆ ಎಂದು ಹೇಳಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಎಚ್.ಕೆ ಪಾಟೀಲ್ ಅವರು ಇಷ್ಟು ದಿನ ನಿದ್ದೆ ಮಾಡುತ್ತಿದ್ದರಾ. ಈಗ ನಿದ್ದೆಯಿಂದ ಎದ್ದಿದ್ದಾರಾ ಎಂದು ಪ್ರಶ್ನಿಸಿದ್ದಾರೆ.


ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಎಚ್.ಕೆ ಪಾಟೀಲ್ ಅವರು ೨೦೧೫-೧೬ರಲ್ಲೂ ಇದೇ ರೀತಿ ಪತ್ರ ಬರೆದಿದ್ದರು. ಇವರೆ ಸಚಿವ ಸಂಪುಟದ ಉಪಸಮಿತಿಯ ಅಧ್ಯಕ್ಷರಾಗಿದ್ದರು. ವರದಿ ಕೊಟ್ಟು ಎಚ್ಟು ವರ್ಷ ಆಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೨ ವರ್ಷದಿಂದ ಇವರು ಏನು ಮಾಡುತ್ತಿದ್ದರು. ಈಗ ಏಕೆ ಈ ವಿಚಾರ ಎತ್ತುತ್ತಿದ್ದಾರೆ ಎಲ್ಲವೂ ಗೊತ್ತಿದೆ. ಸರ್ಕಾರದ ವಿರುದ್ಧವಾಗಿರುವ ವಿಚಾರಗಳ ಗಮನವನ್ನು ಬೇರೆಡೆಗೆ ಸೆಳೆಯಲು ಪತ್ರ ಬರೆದಿದ್ದಾರೆ ಅಷ್ಟೆ ಎಂದು ಕುಟುಕಿದರು.


ಅಕ್ರಮ ಗಣಿಗಾರಿಕೆಯಿಂದ ಒಂದೂವರೆ ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದ್ದಾರೆ. ಇದನ್ನು ವಸೂಲಿ ಮಾಡಿದ್ದಾರೆ. ಜನರ ಮೇಲೆ ತೆರಿಗೆ ಹಾಕುವ ಹಾಗೆಯೇ ಇರಲಿಲ್ಲ. ಗ್ಯಾರಂಟಿ ಯೋಜನೆಯಲ್ಲಿ ಇನ್ನೂ ೨ ಸಾವಿರ ರೂ. ಕೊಡಬಹುದಿತ್ತು. ಪತ್ರ ಇವೆಲ್ಲ ಡ್ರಾಮ ಅಷ್ಟೆ ಎಂದರು.


ಅಚ್ಚರಿ ಇಲ್ಲ

ಹಣ ಕೊಟ್ಟವರಿಗೆ ಮನೆ ಎಂಬ ಶಾಸಕ ಬಿ.ಆರ್ ಪಾಟೀಲ್ ಅವರು ಮಾತನಾಡಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದು ಎಲ್ಲರಿಗೂ ಗೊತ್ತಿದೆ. ಸರ್ಕಾರದ ಇಲಾಖೆಗಳಲ್ಲಿ ಹಣ ಬಿಡುಗಡೆಮಾಡಲು ಶಾಸಕರು ಹಣ ಕೊಡಬೇಕು. ಕೆಲವರು ನಿಮ್ಮದೊಂದು ಲೆಟರ್ ಕೊಡಿ, ಹಣ ತರುತ್ತೇವೆ ಎಂದು ಹೇಳಳುತ್ತಾರೆ.ಹೆಸರಿಗೆ ಶಾಸಕರ ಲೆಟರ್ ಮಧ್ಯವರ್ತಿಗಳು ದುಡ್ಡು ಕೊಟ್ಟು ಹಣ ತರುತ್ತಾರೆ ಎಂದರು.


ವಿಧಾನಸೌಧದಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಸಚಿವರುಗಳೇ ಎಲ್ಲ ಶುರುಮಾಡಿಕೊಂಡಿದ್ದಾರೆ. ಆಯ ಇಲಾಖೆಗಳಲ್ಲಿ ಅವರೇ ಎಷ್ಟು ಕೊಡಬೇಕು ಎಂಬುದನ್ನು ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಹೇಳಿದರು.


ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿಗೆ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಮಾಡಲಿ ಯವಾಗ ಟೆನಲ್ ಮಾಡುತ್ತಾರೆ ಎಂದು ವ್ಯಂಗ್ಯವಾಡಿ ಅವರ ಮಾತುಗಳು ಯಾವೂ ಆಗಲ್ಲ ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ಮಾಡಿದರು.


೨೦೨೮ಕ್ಕೆ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕಾರಿಸುವುದಾಗಿ ಡಿಕೆಶಿ ಹೇಳಿಕೆಗೂ ಲೇವಡಿ ಮಾಡಿದ ಅವರು, ಡಿಕೆ ಶಿವಕುಮಾರ್ ಏನಿದ್ದರು ಕನಸು ಕಾಣಬೇಕು ಅಷ್ಟೆ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಬಿಟ್ಟುಕೊಡುತ್ತಾರೆ ಎಲ್ಲ ನಮ್ಮ ಕೈಯಲ್ಲಿ ಇಲ್ಲ ಭಗವಂತನ ಕೈಯಲ್ಲಿ ಎಂದರು.


ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂಬ ಕೈ ನಾಯಕರ ಟೀಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಜಿಲ್ಲೆಗೆಕಾಂಗ್ರೆಸ್‌ನವರ ಕೊಡುಗೆ ಏನು ಕೃಷಿ ವಿವಿಯನ್ನು ಎಷ್ಟು ವರ್ಷ ನಡೆಸುತ್ತಾರೆ ಬೀದರ್‌ನಲ್ಲಿ ಪಶು ವೈದ್ಯಕೀಯ ವಿವಿ ಮುಚ್ಚುವ ಹಂತಕ್ಕೆ ಬಂದಿದೆ. ವಿಶ್ವವಿದ್ಯಾನಿಲಯಗಳಿಗೆ ಎಷ್ಟು ಹಣ ಕೊಟ್ಟಿದ್ದಾರೆ. ಎಷಷ್ಟು ವಿಶ್ವವಿದ್ಯಾಲಯಗಳನ್ನು ಇವರು ಮುಚ್ಚಿದ್ದಾರೆ. ಎಲ್ಲವೂ ಗೊತ್ತಿದೆ ಪ್ರತಿ ಪ್ರಚಾರಕ್ಕೆ ಕೆಲಸ ಮಾಡಬಾರದು ಎಂದರು.


ಮಂಡ್ಯದಲ್ಲಿ ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲೆಮಾಡಬೇಕು ಎಂಬ ಕನಸಿದೆ.ಮೊದಲ ಹಂತವಾಗಿ ೮ ಕೋಟಿ ವೆಚ್ಚದಲ್ಲಿ ಶಾಲೆನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ಧವಾಗಿದೆ. ಮೂರು ಬಸ್ ಶೆಲ್ಟರ್ ನಿರ್ಮಾಣಕ್ಕೂ ಯೋಜನೆ ರೂಪಿಸಿದ್ದೇನೆ. ದೊಡ್ಡ ಕಾರ್ಖಾನೆಯನ್ನು ಮಂಡ್ಯಕ್ಕೆ ತರಬೇಕು ಎಂಬುದು ಜನರ ನಿರೀಕ್ಷೆಯಾಗಿದೆ. ರಾಜ್ಯಸರ್ಕಾರ ಸಹಕಾರ ನೀಡಿದರೆ ಅದನ್ನೂ ಮಾಡಬಹುದು. ನಾನು ಟೀಕೆಗಳಿಗಿಂತ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವತ್ತ ಗಮನ ಹರಿಸಿದ್ದೇನೆ ಎಂದರು.
ಮೈಶುಗರ್ ಶಾಲೆಯನ್ನು ಕಾಂಗ್ರೆಸ್ ಮುಖಂಡನ ವಿದ್ಯಾಸಂಸ್ಥೆಗೆ ಗುತ್ತಿಗೆ ನೀಡುವುದು ಸರಿಯಲ್ಲ. ಇದು ಹಗಲು ದರೋಡೆಯಾಗಿದೆ. ಮೈಶುಗರ್ ಶಾಲೆ ಅಭಿವೃದ್ಧಿಗೆ ನಾನು ಹಣ ಕೊಡಲು ಸಿದ್ಧ ಎಂದರು.