ಇಜೇರಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಜಗನಾಥ ಬಿರಾದಾರ ಅಮಾನತು

ಜೇವರ್ಗಿ :ಡಿ.25:ತಾಲೂಕಿನ ಇಜೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು. ಲಕ್ಷ್ಮೀ ನರಸಿಂಗಪ್ಪ ಸಗರ ಎಂಬ ಬಾಲಕಿಂ-ರು ಮೇಲೆ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವು ಮಧ್ಯಾಹ್ನ 12 ಗಂಟೆ ಸುಮಾರಿಗೆ ವೇಗವಾಗಿ ಬಂದು ವಿದ್ಯಾರ್ಥಿನಿಗೆ ಗುದ್ದಿದ ಪರಿಣಾಮ ಬಲಗಾಲನ್ನು ಸಂಪೂರ್ಣವಾಗಿ ಕಳೆದು ಕೊಂಡಿದ್ದು ಈ ಘಟನೆಯನ್ನು ಖಂಡಿಸಿ 2 18-12-2025 0 ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಇಜೇರಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ರಸ್ತಾ ರೋಕೊ ಮಾಡಿ ಬೃಹತ್ ಪ್ರತಿಭಟನೆ ಮಾಡಿ ಅವಧಿಯಲ್ಲಿ ಒಂದನೇ ತರಗತಿ ವಿದ್ಯಾರ್ಥಿಯಾದ ಕು:ಲಕ್ಷ್ಮೀ ತಂದೆ ನರಸಿಂಗಪ್ಪ ಎಂಬ ವಿದ್ಯಾರ್ಥಿನಿಯನ್ನು ರಸ್ತೆಗೆ ನೀರು ಕುಡಿಯಲು ಬಿಟ್ಟು ರಸ್ತೆ ಅಪಘಾತದಲ್ಲಿವಿದ್ಯಾರ್ಥಿಯೂ ಶಾಶ್ವತವಾಗಿ ಕಳೆದುಕೊಳ್ಳಲು ನೇರವಾಗಿ ಕಾರಣಿಭೂತ ರಾಗಿರುವ ಮುಖ್ಯ ಗುರುಗಳು ಮತ್ತು ದೈಹಿಕ ಶಿಕ್ಷಕ ಜಗನ್ನಾಥ ಬಿರಾದಾರ ರವರನ್ನು ವಜಾಗೊಳಿಸಬೇಕು ಮತ್ತು ವಿದ್ಯಾರ್ಥಿನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಹೋರಾಟ ಮಾಡಲಾಗಿತ್ತು.

ಹೋರಾಟದ ಪ್ರತಿಫಲವಾಗಿ ಮುಖ್ಯಶಿಕ್ಷಕ ಮತ್ತು ದೈಹಿಕ ಶಿಕ್ಷಕ ಜಗನಾಥ ರವರನ್ನು ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ರವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ವಿದ್ಯಾರ್ಥಿನಿಗೆ ಸೂಕ್ತ ಪರಿಹಾರ ನೀಡುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಬಗ್ಗೆ ನನಗೆ ಸ್ಪಷ್ಟನೆ ನೀಡಿ ಪರಿಹಾರ ಕೊಡಿಸುವುದುದಾಗಿ ಭರವಷೆ ಕೊಟ್ಟಿದ್ದಾರೆ ಎಂದು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ರಾಜ್ಯಧ್ಯಕ್ಷ ಶ್ರವಣಕುಮಾರ ಡಿ ನಾಯಕ ತಿಳಿಸಿದ್ದಾರೆ