
ಕಮಲನಗರ :ನ.೧೦:ತಾಲೂಕಿನ ಡೋಣಗಾಂವ(ಎA) ಗ್ರಾಮದಲ್ಲಿ ಶುಕ್ರವಾರ ಟೆಕೋಳಿ ನಾಗಣ್ಣಾ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಭವ್ಯ ಪಲ್ಲಕಿ ಮೆರವಣಿಗೆಗೆ ಹಾವಗಿಸ್ವಾಮಿ ಮಠದ ಪೀಠಾಧಿಕಾರಿ ಶಂಭುಲಿAಗ ಶಿವಾಚಾರ್ಯ ಅವರು ಚಾಲನೆ ನೀಡಿದರು.ಅಲಂಕೃತ ಪಲಕ್ಲಿ ಯಲ್ಲಿ ಬೆಳ್ಳಿಯ ನಾಗ ಮೂರ್ತಿಯನ್ನು ಇರಿಸಲಾಯಿತ್ತು.
ಮೆರವಣಿಗೆ ಹಾವಗಿಸ್ವಾಮಿ ಮಠದಿಂದ ಹೊರಟು ಬಸವೇಶ್ವರ ವೃತ್ತ, ಹನುಮಾನ ಮಂದಿರ, ಡಾ.ಅಂಬೇಡ್ಕರ ವೃತ್ತದ ಮೂಲಕ ಸಾಗಿ ಪ್ರಮುಖ ಬೀದಿಗಳ ಮೂಲಕ ಡೋಣಗಾಂವ ಕ್ರಾಸ್ ಬಳಿ ಬಂದು ತಲುಪಿತ್ತು.
ಪೂರ್ಣ ಕುಂಭ ಕಳಸ ಹೊತ್ತು ಸುಮಂಗಲೆಯರು ದಾರಿಯುದ್ದಕ್ಕೂ ಸಾಗಿತ್ತು.ಮೆರವಣಿಗೆ ಔರಾದ್- ಕಮಲನಗರ ಮುಖ್ಯರಸ್ತೆಯಲ್ಲಿ ಇರುವ ಟೆಕೋಳಿ ಮಂದಿರಕ್ಕೆ ಬಂದು ತಲುಪಿತ್ತು.ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತ್ತು.
ಗ್ರಾಮದ ಅಪ್ಪಾಸಾಬ್ ದೇಶಮುಖ, ಮಲ್ಲಿಕಾರ್ಜುನ ಬಂಡೆಪ್ಪ ಗಂದಗೆ, ಶಾಲಿವಾನ ಗಂದಗೆ, ಧನರಾಜ ಗಂದಗೆ, ವಿಜಯಕುಮಾರ, ಸೋಮು ದೇಶಮುಖ, ಪ್ರಸಾದÀ ದೇಶಮುಖ, ಪ್ರದೀಪ ಚಿಂಚನಸೂರೆ ಸೇರಿದಂತೆ ಕೋಟಗ್ಯಾಳ, ರಂಡ್ಯಾಳ, ತೋರಣಾ, ಮುರ್ಕಿ ಗ್ರಾಮದ ಭಕ್ತರು ಆಗಮಿಸಿ ದರುಶನ ಪಡೆದರು.

























