ಸಾತ್ವಿಕ ವಿಚಾರಗಳೊಂದಿಗೆ ಕಾರ್ಯ ಕೈಗೊಂಡರೆ ಯಶಸ್ಸು ಶತಸಿದ್ಧ; ಬಸವರಾಜ ಕೌಲಗಿ

ಸಂಜೆವಾಣಿ ವಾರ್ತೆ,
ವಿಜಯಪುರ,ಅ.೮:೨೦೨೫ನೇ ಸಾಲಿನ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು ನಿರೀಕ್ಷೆಯಂತೆ ವಿಜಯಪುರದ ಪ್ರತಿಷ್ಠಿತ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಕಳೆದ ಬಾರಿಗಿಂತಲೂ ಹೆಚ್ಚಿನ ಸೀಟುಗಳನ್ನು ಪಡೆಯುವ ಮೂಲಕ ಸಾಧನೆಯ ಹಾದಿಯಲ್ಲಿನ ತನ್ನ ಹೆಜ್ಜೆ ಗುರುತುಗಳನ್ನು ಹಾಗೆ ಉಳಿಸಿಕೊಂಡು ಸಾಗಿದೆ. ಕಳೆದ ಬಾರಿಗಿಂತ ಈ ಬಾರಿಯ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕಠಿಣವಾಗಿತ್ತು ಎಂಬುವುದು ವಿದ್ಯಾರ್ಥಿಗಳ ಅಭಿಮತವಾಗಿತ್ತು. ಅಂತಹ ಕಷ್ಟಕರವಾಗಿರುವ ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಎಕ್ಸಲಂಟ್ ವಿದ್ಯಾರ್ಥಿಗಳು ೧೦೦ ಎಂಬಿಬಿಎಸ್ ಸೇರಿದಂತೆ ಒಟ್ಟು ೧೮೨ ಸೀಟುಗಳನ್ನು ಪಡೆದುಕೊಳ್ಳುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿತಂದಿದ್ದಾರೆ. ಸರ್ಕಾರಿ ಕೋಟಾದಡಿಯಲ್ಲಿ ೧೦೦ ಎಂಬಿಬಿಎಸ್ ಸೀಟುಗಳನ್ನು ಪಡೆದರೆ ೧೦ ಬಿಡಿಎಸ್ ಹಾಗೂ ೭೨ ಬಿಎಎಂಎಸ್ ಹಾಗೂ ಬಿಹೆಚ್‌ಎಂಎಸ್ ಸೀಟುಗಳನ್ನು ಪಡೆಯುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ವೈದ್ಯರಾಗಬೇಕೆನ್ನುವ ತಮ್ಮ ಕನಸನ್ನು ಈಡೇರಿಸಿಕೊಳ್ಳುವುದರೊಂದಿಗೆ ಮಹಾವಿದ್ಯಾಲಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಈ ಕುರಿತು ಮಾಹಿತಿಯನ್ನು ಹಂಚಿಕೊAಡು ಹರ್ಷ ವ್ಯಕ್ತ ಪಡಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್ ಬಸವರಾಜ್ ಕೌಲಗಿ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯುತ್ತಮವಾದ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎನ್ನುವ ಉದ್ಧೇಶದಿಂದ ಪ್ರಾರಂಭಗೊAಡ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳು ತಾನಂದುಕೊAಡ ಕಾರ್ಯದಲ್ಲಿ ಹಂತ ಹಂತವಾಗಿ ಯಶಸ್ಸು ಸಾಧಿಸುತ್ತ ಬೆಳೆಯುತ್ತಿದೆ. ಪ್ರತಿ ವರ್ಷವೂಕೂಡ ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ಪಡೆಯುವ ಮೂಲಕ ಜನರ ಮನೆ ಮಾತಾಗಿದೆ. ಹೆಸರಿಗೆ ತಕ್ಕಂತ ಸೇವೆಯನ್ನು ನೀಡುತ್ತಿರುವ ನಮ್ಮ ಸಂಸ್ಥೆಯು ಈ ಬಾರಿಯೂ ಪಾಲಕರು ಇಟ್ಟ ನಿರೀಕ್ಷೆಯನ್ನು ಹುಸಿಗೊಳಿಸದೆ ಉತ್ತಮ ಫಲಿತಾಂಶ ನೀಡಿ ೧೮೨ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ದೊರಕಿಸಿಕೊಟ್ಟಿದ್ದು ನಮ್ಮ ಸಂಸ್ಥೆಯ ಗುಣಮಟ್ಟಕ್ಕೆ ಸಾಕ್ಷö್ಯಒದಗಿಸುತ್ತದೆ ಎಂದರು.
ಯಾವುದೇ ಕಾರ್ಯವಾದರೂ ಸರಿ. ಅಲ್ಲಿ ಸಾತ್ವಿಕವಾದ ವಿಚಾರವನ್ನಿಟ್ಟುಕೊಂಡು ಮಾಡಲು ಹೊರಟರೆ ಅದು ಫಲ ಕೊಟ್ಟೇಕೊಡುತ್ತದೆ. ಹಾಗೆಯೇ ಮಕ್ಕಳಲ್ಲಿ ನೈತಿಕ ಶಿಕ್ಷಣದ ಜೊತೆಯಲ್ಲಿ ಅವರ ಕನಸುಗಳಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದರೆ ಸಾಧನೆ ಎನ್ನುವುದು ಸವಾಲಾಗಿ ಪರಿಣಮಿಸದೆ ಸುಲಭದಲ್ಲಿ ಸಾಧಿಸಬಹುದು ಎನ್ನುವ ಭಾವನೆಯನ್ನುಂಟು ಮಾಡುತ್ತದೆ. ಆ ನಿಟ್ಟಿನಲ್ಲಿ ನಮ್ಮ ವಿದ್ಯಾಲಯದಲ್ಲಿ ಈ ವಿದ್ಯಾರ್ಥಿಗಳ ಅವಿರತ ಪರಿಶ್ರಮದ ಜೊತೆಯಲ್ಲಿ ಕಾಲೇಜಿನ ಬೋಧಕ ವರ್ಗದವರು ನಿರಂತರ ಶ್ರಮಿಸಿದ್ದರ ಪರಿಣಾಮ ಈ ಫಲಿತಾಂಶ ದೊರೆತಿದೆ. ಮುಂದೆ ಇವರು ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದಾಗ ನಾವಂದುಕೊAಡ ಕಾರ್ಯ ಯಶಸ್ವಿಯಾದಂತಾಗುತ್ತದೆ. ಹಾಗೆಯೇಒಂದು ಗೆಲುವಿಗೆ ಸುಮ್ಮನಾಗಿ ಕುಳಿತರೆ ಮುಂದಿನ ಗೆಲವು ಮರೀಚಿಕೆಯಾಗುತ್ತದೆ ಎನ್ನುವ ಮಾತಿನಂತೆ ಈ ಮಕ್ಕಳ ಸಾಧನೆಯನ್ನು ಪ್ರಸ್ತುತ ಕಲಿಯುವ ಮಕ್ಕಳು ಅರಿತುಕೊಂಡು ಅವರ ದಾರಿಯಲ್ಲಿ ನಡೆದಿದ್ದೇ ಆದರೆ ಇನ್ನೂ ಹೆಚ್ಚಿನ ಫಲಿತಾಂಶವನ್ನು ಪಡೆಯುತ್ತೇವೆ. ಆ ಭರವಸೆ ಇದೆ ಎಂದು ಹೇಳುವ ಮೂಲಕ ಇಷ್ಟು ಸೀಟುಗಳನ್ನು ಪಡೆದುಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿತಂದ ವಿದ್ಯಾರ್ಥಿಗಳಿಗೆ ಅಭಿನಂದೆನ ಸಲ್ಲಿಸಿದರು.
ಫಲಿತಾಂಶದ ಕುರಿತು ಹರ್ಷ ವ್ಯಕ್ತಪಡಿಸಿದ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್., ಈ ಸಾಧನೆಯ ಶ್ರೇಯಸ್ಸು ನಮ್ಮ ಆಡಳಿತ ಮಂಡಳಿಗೂ ಹಾಗೂ ಎಲ್ಲ ಬೋಧಕ ಬೋಧಕೇತರ ವರ್ಗಕ್ಕೆ ಸಲ್ಲಬೇಕು ಎಂದು ಹೇಳಿದರು. ಮಕ್ಕಳ ಈ ಸಾಧನೆಗೆ ಆಡಳಿತ ಮಂಡಳಿಯ ಸರ್ವ ಸದಸ್ಯರು, ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದರು.