ಧೈರ್ಯವಿದ್ದರೆ ಜಾತ್ಯತೀತ, ಸಮಾಜವಾದಿ ಪದ ತೆಗೆಯಿರಿ

ಖರ್ಗೆ ಸವಾಲು

ಹೈದರಾಬಾದ್, ಜು.೫- ಭಾರತೀಯ ಸಂವಿಧಾನದ ಪೀಠಿಕೆಯಲ್ಲಿರುವ “ಜಾತ್ಯತೀತ ಮತ್ತು ಸಮಾಜವಾದಿ” ಪದಗಳನ್ನು ಮರು ಪರಿಶೀಲಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಲುವಿನ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ , ಧೈರ್ಯವಿದ್ದರೆ ಎರಡೂ ಪದಗಳನ್ನು ತೆಗೆದು ಹಾಕಿ ನೋಡೋಣ ಎಂದು ನೇರವಾಗಿಯೇ ಸವಾಲು ಹಾಕಿದ್ದಾರೆ

ಆರೆಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮತ್ತು ಕೇಂದ್ರದಲ್ಲಿರುವ ಆಡಳಿತ ಭಾರತೀಯ ಜನತಾ ಪಕ್ಷದ ಉನ್ನತ ನಾಯಕರು ಸಂವಿಧಾನ ಪೀಠಿಕೆಯಿಂದ “ಜಾತ್ಯತೀತ ಮತ್ತು ಸಮಾಜವಾದಿ” ಪದಗಳನ್ನು ತೆಗೆದು ಹಾಕುವ ಪ್ರಯತ್ನ ಮಾಡಿ , ಅದರ ಪರಿಣಾಮ ನೋಡುತ್ತೀರ ಎಂದು ಗುಡುಗಿದ್ದಾರೆ

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಭೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ
ಸಂವಿಧಾನದಲ್ಲಿ “ಸಮಾಜವಾದ ಮತ್ತು ಜಾತ್ಯತೀತತೆ” ಎಂಬ ಪದಗಳನ್ನು ಸೇರಿಸಿದ್ದನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಪ್ರಶ್ನಿಸಿದ್ಧಾರೆ. ಜಾತ್ಯತೀತತೆ ಮತ್ತು ಸಮಾಜವಾದ ಎಂಬ ಪದಗಳನ್ನು ತುಂಬಾ ದ್ವೇಷಿಸುತ್ತಿದ್ದರೆ, ನಿಮ್ಮ ಸಂವಿಧಾನದಲ್ಲಿ ಅವುಗಳನ್ನು ಏಕೆ ಉಲ್ಲೇಖಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ

“ದಿನಗಳ ಹಿಂದೆ, ಕೆಲವು ಆರೆಸ್ಸೆಸ್ ವ್ಯಕ್ತಿಗಳು ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆದುಹಾಕಬೇಕು ಎಂದು ಹೇಳಿದ್ದನ್ನು ಕೇಳಿದ್ದೆ.ಅವರಿಗೆ ಸವಾಲು ಹಾಕುತ್ತೇನೆ., ಅವರಾಗಿರಲಿ ಅಥವಾ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಾಗಿರಲಿ, ಅಥವಾ ಪ್ರಧಾನಿ ನರೇಂದ್ರ ಮೋದಿ ಅವರಾಗಲಿ ಈ ಎರಡೂ ಪದಗಳನ್ನು ತೆಗೆಯಲು ಪ್ರಯತ್ನಿಸಿ ನೋಡಿ ಎಂದು ಸವಾಲು ಹಾಕಿದ್ಧಾರೆ

ಜೂನ್ ೨೭ ರಂದು,ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆರೆಸ್‌ಎಸ್ ಮೇಲೆ ದಾಳಿ ಮಾಡಿ, ಸಂವಿಧಾನ ಬಯಸುವುದಿಲ್ಲ, ಮನುಸ್ಮೃತಿಯನ್ನು ದೇಶದ ಮೇಲೆ ಹೇರಿಕೆ ಮಾಡಲು ಬಯಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

ಬಿಜೆಪಿ ಮತ್ತು ಆರ್ ಎಸ್ ಎಸ್ ಅಂಚಿನಲ್ಲಿರುವವರು ಮತ್ತು ಬಡವರನ್ನು ಗುಲಾಮರನ್ನಾಗಿ ಮಾಡುವ ಮೂಲಕ ಅವರ ಹಕ್ಕುಗಳನ್ನು ಉಲ್ಲಂಘಿಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ “ಆರೆಸ್‌ಎಸ್‌ನ ಮುಖವಾಡ ಮತ್ತೆ ಕಳಚಿದೆ” ಎಂದು ಹೇಳಿದ್ದರು

“ಆರೆಸ್‌ಎಸ್-ಬಿಜೆಪಿಗೆ ಸಂವಿಧಾನ ಬೇಡ. ಅವರಿಗೆ ಮನುಸ್ಮೃತಿ ಬೇಕು. ಅವರು ಅಂಚಿನಲ್ಲಿರುವವರು ಮತ್ತು ಬಡವರ ಹಕ್ಕುಗಳನ್ನು ಕಸಿದುಕೊಂಡು ಮತ್ತೆ ಅವರನ್ನು ಗುಲಾಮರನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ. ಸಂವಿಧಾನದಂತಹ ಪ್ರಬಲ ಅಸ್ತ್ರವನ್ನು ಅವರಿಂದ ಕಸಿದುಕೊಳ್ಳುವುದು ಅವರ ನಿಜವಾದ ಕಾರ್ಯಸೂಚಿಯಾಗಿದೆ” ಎಂದು ವಾಗ್ದಾಳಿ ನಡೆಸಿದ್ಧಾರೆ

ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ತುರ್ತು ಪರಿಸ್ಥಿತಿಯ ೫೦ ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ದತ್ತಾತ್ರೇಯ ಹೊಸಬಾಳೆ ಅವರು ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ “ಸಮಾಜವಾದಿ” ಮತ್ತು “ಜಾತ್ಯತೀತ” ಪದಗಳನ್ನು ಸೇರಿಸುವ ನ್ಯಾಯಸಮ್ಮತತೆ ಪ್ರಶ್ನಿಸಿದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ