ಸನ್ಮಾರ್ಗದಿ ಮುನ್ನಡೆದರೆ ಮೋಕ್ಷ ಪ್ರಾಪ್ತಿ: ಡಾ. ಶಿವುಕುಮಾರ ಶ್ರೀ

ಆಳಂದ:ಡಿ.13: ಗುರುವಿನ ಸಾನ್ನಿಧ್ಯದಲ್ಲಿ ಸನ್ಮಾರ್ಗದಿಂದ ಪ್ರತಿಯೊಬ್ಬರು ಮುನ್ನೆಡೆದರೆ ಭಗವಂತನ ಸಾಕ್ಷಾತಾರವಾಗಿ ಮೋಕ್ಷ ಪ್ರಾಪ್ತಿಗೆ ದಾರಿಮಾಡಿಕೊಡುತ್ತಿದೆ ಎಂದು ಬೀದರ ಚಿದಂಬರ ಆಶ್ರಮ ಸಿದ್ಧಾರೂಢ ಮಠದ ಡಾ. ಶಿವುಕುಮಾರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶರಣ ಮಂಟಪದ ಶ್ರೀ ರೇವಣಸಿದ್ದ ಶಿವಶರಣ ಮಹಾಸ್ವಾಮಿಗಳವರ 75ನೇ ವರ್ಷದ ಅಮೃತ ಮಹೋತ್ಸವ, ತೀರ್ಥಲಿಂಗ ಪಟ್ಟದೇವರ 19ನೇ ವರ್ಷದ ಪುಣ್ಯಾರಾಧನೆ ಹಾಗೂ ಪ್ರಸ್ತುತ ಪೀಠಾಧಿಪತಿ ಚೆನ್ನಬಸವ ಪಟ್ಟದೇವರ 19ನೇ ಪಟ್ಟಾಭಿμÉೀಕ ವಾರ್ಷಿಕ ಮಹೋತ್ಸವವು ಸಮಾರಂಭ ಶುಕ್ರವಾರ ಸಂಜೆ ಆಯೋಜಿಸಿದ್ ಮಾಲಲಿಲ್ಲವೇ ತಪವನನು ಮಾಡಲಿಲ್ಲವೇ ಎಂಬ ವಿಷಯದ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜಗದ್ಗುರು ಸಿದ್ಧರೂಢÀರು ತತ್ವಾದರ್ಶಗಳನ್ನು ಜನಮಾನಸಕ್ಕೆ ತಲುಪಿಸಿ ಭಕ್ತರನ್ನು ಉದ್ದರಿಸುವ ಕಾರ್ಯವನ್ನು ಅಕ್ಕಲಕೋಟದ ರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳು ತ್ಯಾಗ ಪರಿಶ್ರಮ ಅಪಾರವಾಗಿದೆ. ಎಂದರು. ಶರಣಮಂಟಪದ ಭಕ್ತರು ಮತ್ತು ಪೀಠದ ಚನ್ನಬಸವ ಸ್ವಾಮಿಗಳು ಧಾರ್ಮಿಕ ಸೇವೆ ಸಮಾಜಮುಖಿ ಕಾರ್ಯವನ್ನು ಅವರು ಶ್ಲಾಘಿಸಿದರು.
ಮಾನವ ಜೀವನದಲ್ಲಿ ತಪಸ್ಸು, ಶ್ರದ್ಧೆ ಮತ್ತು ಶುದ್ಧ ಮನಸ್ಸು ಅವಶ್ಯಕ. ಮನಸ್ಸಿನ ಶಾಂತಿ, ಸತ್ಪ್ರವೃತ್ತಿ ಮತ್ತು ಸೇವಾಭಾವನೆ ಇದ್ದರೆ ಅದು ನಿಜವಾದ ತಪಸ್ಸಿನ ಮಾರ್ಗವಾಗಿದೆ ಎಂದು ಹೇಳಿದರು.
ಮಠಗಳು, ಗುರುಗಳು ಮತ್ತು ಶರಣ ಪರಂಪರೆ ನಮಗೆ ಧರ್ಮ ನೈತಿಕತೆ ಸಾಧನೆಯ ದಾರಿ ತೋರಿಸುತ್ತವೆ. ತಪಸ್ಸು ಎಂದರೆ ಕೇವಲ ಕಾಡು ಕುಟೀರಗಳಿಗೆ ಹೋಗುವುದು ಅಲ್ಲ ಮನಸ್ಸನ್ನು ಪರಿಶುದ್ಧ ಗೊಳಿಸುವುದು, ಕರ್ತವ್ಯವನ್ನು ನಿμÉ್ಠಯಿಂದ ನಿರ್ವಹಿಸುವುದು, ಸತ್ಯ-ಅಹಿಂಸೆಯ ಮಾರ್ಗದಲ್ಲಿ ನಡೆಯುವುದು ಇದೇ ನಿಜವಾದ ತಪಸ್ಸು ಎಂದು ವಿವರಿಸಿದರು. ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ಅದರ ಹಿಂದೆ ಸಮಾಜೋಪಯೋಗಿ ಉದ್ದೇಶ ಇರಬೇಕು; ಇಲ್ಲದಿದ್ದರೆ ಅದು ತಪಸ್ಸಾಗುವುದಿಲ್ಲ ಎಂದು ಅವರು ತಿಳಿಸಿದರು. ಅವರು ಶರಣರ ವಚನಗಳನ್ನು ಉದಾಹರಿಸಿ, ತರಳ ಮನಸ್ಸು, ನಿμÉ್ಠ, ಗುರುಭಕ್ತಿ ಮತ್ತು ಸಮಾಜ ಸೇವೆ ಈ ನಾಲ್ಕು ಗುಣಗಳೇ ನಿಜವಾದ ತಪಸ್ಸಿನ ಮೂಲ ಎಂದು ಹೇಳಿದರು.
ಪೀಠಾಧಿಪತಿ ಶ್ರೀ ಚನ್ನಬಸವ ಪಟ್ಟದೇವರ ಸಮ್ಮುಖ ವಹಿಸಿದ್ದರು. ಶಿವಪ್ರಕಾಶನಂದಗಿರಿ ಮಹಾಸ್ವಾಮಿಗಳು, ಆಳಂದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಮೈಂದಗಿಯ ಮಠದ ಅಭಿನವ ರೇವಣಸಿದ್ಧ ಪಟ್ಟದೇವರು, ಕಲಬುರಗಿ ಸಿದ್ಧರೂಢ ಮಠದ ಲಕ್ಷ್ಮೀ ದೇವಿತಾ¬, ಜಯಶ್ರೀದೇವಿ ತಾಯಿ,ನಿಲಾಂಬಿಕಾ ತಾಯಿ, ನಂದಾದೇವಿ ಹುಲಮನಿ ತಾಯಿ ಸೇರಿದಂತೆ ಇನ್ನಿತರ ಮಾತನಾಡಿದರು.
ಐನಾಪೂರದ ಮಲ್ಲಿಕಾರ್ಜುನ ಶಾಸ್ತ್ರಿ ಪ್ರವಚನ ನಡೆಸಿಕೊಟ್ಟರು. ಗುರುನಾಥ ಶಾಸ್ತ್ರಿ ನಿರೂಪಿಸಿದರು. ಪಂಚಕಮೀಟಿ ಅಧ್ಯಕ್ಷ ಸೂರ್ಯಕಾಂತ ತಟ್ಟಿ, ಕಾರ್ಯದರ್ಶಿ ಶ್ರೀಶೈಲ ಉಳ್ಳೆ ಸೇರಿದಂತೆ ಸರ್ವ ಪದಾಧಿಕಾರಿಗಳು ಒಳಗೊಂಡು ನೂರಾರು ಮಂದಿ ಶರಣ ಶರಣಿಯರು ಭಾಗವಹಿಸಿದ್ದರು. ಡಿ.13 ಮತ್ತು 14ರಂದು ಎರಡು ದಿನಗಳ ಸಮಾರಂಭ ಜರುಗಲಿದೆ.