ಕಬ್ಬು ಸರಬರಾಜು ಹಣ ಜಮೆ ಮಾಡಿದಿದ್ದರೆ ಬೀದಿಗಿಳಿದು ಹೋರಾಟ

ಬೀದರ,ಜೂ.13: ಜಿಲ್ಲೆಯ ರೈತರು ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿ ಸುಮಾರು 6-7 ತಿಂಗಳು ಗತಿಸಿದರೂ ಇಲ್ಲಿಯವರೆಗೆ ಕಬ್ಬು ಸರಬರಾಜು ಮಾಡಿರುವ ರೈತರ ಖಾತೆಗೆ ಹಣ ಜಮೆ ಮಾಡಿರುವುದಿಲ್ಲ. ಜಿಲ್ಲಾ ರೈತ ಸಂಘದ ವತಿಯಿಂದ ಉಸ್ತುವಾರಿ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಹಲವಾರು ಸಲ ಭೇಟಿಯಾಗಿ ಮನವಿ ಪತ್ರಗಳು ಕೊಟ್ಟರೂ ಪ್ರಯೋಜನವಾಗಿಲ್ಲ. ಈವಾಗ ಮುಂಗಾರು ಹಂಗಾಮಿನ ಬಿತ್ತು ಸಮಯ ಇರುವುದರಿಂದ ರೈತರಿಗೆ ಹಲವಾರು ಖರ್ಚು ವೆಚ್ಚಗಳು ಇರುತ್ತವೆ. ಆದರೆ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರಗಳಾಗಲೀ, ಚುನಾಯಿತ ಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಯಾರಿಗೂ ರೈತರ ಕಾಳಜಿ ಇಲ್ಲದಿರುವುದು ಬಹಳ ವಿಷಾದದ ಸಂಗತಿ.
ಅಂತೂ ಜಿಲ್ಲೆಯ ರೈತರು ತಮ್ಮಲ್ಲಿ ಕೇಳುತ್ತಿರುವುದು ಭಿಕ್ಷೆ ಅಲ್ಲ, ಅವರ ಹಕ್ಕು. ಆದಕಾರಣ ಶೀಘ್ರದಲ್ಲಿ ಈ ಕೆಳಕಂಡ ಕಬ್ಬಿಣ ಕಾರ್ಖಾನೆಗಳ ವಿಷಯದಲ್ಲಿ ಗಂಭೀರವಾಗಿ ಪರಿಗಣಿಸಿ, ರೈತರಿಗೆ ದೊರೆಯಬೇಕಾದ ಹಣ ಶೀಘ್ರದಲ್ಲಿ ಅವರ ಖಾತೆಗಳಿಗೆ ಜಮೆ ಮಾಡಿಸಬೇಕು .ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವದು
ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಮ್ಮಲ್ಲಿ ಒತ್ತಾಯಿಸಿ ಇಂದು ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಪ್ರ.ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಶ್ರೀಮಂತ ಬಿರಾದಾರ, ಶಂಕ್ರೆಪ್ಪಾ ಪಾರಾ, ಶೇಷರಾವ ಕಣಜಿ, ಚಂದ್ರಶೇಖರ ಜಮಖಂಡಿ, ಬಾಬುರಾವ ಜೋಳದಾಬಕಾ, ಸುಭಾಷ ರಗಟೆ, ನಾಗಯ್ಯಾ ಸ್ವಾಮಿ, ಪ್ರವೀಣ ಕುಲಕರ್ಣಿ, ಪ್ರಕಾಶ ಬಾವಗೆ, ಸತೀಶ ನನ್ನೂರೆ, ರೇವಣಸಿದ್ದಪ್ಪ ಯರಬಾಗ, ಮಲ್ಲಿಕಾರ್ಜುನ ಬಿರಾದಾರ, ಸುಮಂತ ಗ್ರಾಮಲೆ, ವಿಠಲ ಪಾಟೀಲ, ಧೂಳಪ್ಪಾ ಆಣದೂರ, ಮಲ್ಲಿಕಾರ್ಜುನ ಚಕ್ಕಿ, ವಿಶ್ವನಾಥ ಧರಣಿ, ಬಸಪ್ಪಾ ಆಲೂರ, ರಾಜಕುಮಾರ ಪಾಟೀಲ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.