ಸಾರ್ವಜನಿಕರು, ಉದ್ದಿಮೆದಾರರು ಕೈಜೋಡಿಸಿದರೆ ಪ್ಲಾಸ್ಟಿಕ್ ಮುಕ್ತವಾಗಲು ಸಾಧ್ಯ ; ರವಿಕಾಂತ ಮಿಸ್ಕಿನ್

ಅಫಜಲಪುರ :ಫೆ.28:ಪುರಸಭೆ ವ್ಯಾಪ್ತಿಯ ಸಾರ್ವಜನಿಕರು ಮತ್ತು ಉದ್ದಿಮೆದಾರರು ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಕೈಜೋಡಿಸಿದಾಗ ಮಾತ್ರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಾಧ್ಯವಾಗುತ್ತದೆ ಪರಿಸರ ಅಭಿಯಂತರರಾದ ರವಿಕಾಂತ ಮಿಸ್ಕಿನ್ ತಿಳಿಸಿದರು.

ಪಟ್ಟಣದ ಹಳೆಯ ಪಟ್ಟಣ ಪಂಚಾಯಿತಿ ಎದುರುಗಡೆ ಆಯೋಜಿಸಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು,ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಮೇಲೆ ದುಷ್ಪರಿಣಾಮ ಬೀಳುತ್ತಿರುವುದರಿಂದ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಿದೆ. ಪ್ಲಾಸ್ಟಿಕ್ ಕೊಳೆಯಬೇಕಾದರೆ ಹತ್ತಾರು ವರ್ಷಗಳು ಬೇಕಾಗುತ್ತದೆ.

ಸರಕಾರದ ಸೂಚನೆಯಂತೆ ಪ್ಲಾಸ್ಟಿಕ್ ಕವರ್ ಗಳು (ಕ್ಯಾರಿ ಬ್ಯಾಗ್),ನಾನ್ ವೊವೆನ್ ಚೀಲಗಳು, ಪ್ಲಾಸ್ಟಿಕ್ ಪ್ಲೇಟ್, ಥರ್ಮಾಕೋಲ್ ಬೌಲ್ ಗಳು, ಪ್ಲಾಸ್ಟಿಕ್ ಸ್ಪೂನ್ಸ್, ಪ್ಲಾಸ್ಟಿಕ್ ಗ್ಲಾಸ್, ಪ್ಲಾಸ್ಟಿಕ್ ಟೇಬಲ್ ರೋಲ್ಸ್, ಪ್ಲಾಸ್ಟಿಕ್ ಬಾವುಟಗಳು, ಪ್ಲಾಸ್ಟಿಕ್ ಪ್ಸೆಕ್ಸ್ ಬ್ಯಾನರ್ ಗಳು,ಪ್ಲಾಸ್ಟಿಕ್ ಕ್ಲಿಂಗ್ ಫಿಲ್ಮ್ ನಿಷೇಸಲಾಗಿದೆ. ಬದಲಾಗಿ ಕಾಟನ್,ಬಟ್ಟೆ ಅಥವಾ ಸೆಣಬು ಬ್ಯಾಗಗಳು,ಕಾಗದದ ಚೀಲಗಳು,ಬಾಳೆ ಎಳೆ ಮತ್ತು ಅಡಿಕೆ ಪ್ಲೇಟ್ ಬೌಲ್ ಗಳು, ಸ್ಟೀಲ್ ಪ್ಲೇಟ್,ಪಿಂಗಾಣಿ ಬೌಲ್ ಗಳು, ಸ್ಟೀಲ್ ಸ್ಪೂನ್,ಮರದ ಸ್ಪೂನ್ ಗಳು, ಸ್ಟೀಲ್ ಲೋಟ, ಪಿಂಗಾಣಿ ಲೋಟ,ಗಾಜಿನ ಲೋಟ, ಪೇಪರ್ ಟೇಬಲ್ ರೋಲ್ಸ್, ಬಟ್ಟೆ ಬಾವುಟಗಳು, ಕಾಟನ್, ಬಟ್ಟೆ ಬ್ಯಾನರ್ ಗಳು,ಕ್ಲಿಂಗ್ ಇಲ್ಲದ ಪ್ಯಾಕ್ ಬಳಕೆ ಮಾಡಲು ಸಲಹೆ ನೀಡಿದ್ದಾರೆ.

ಅಲ್ಲದೇ ಒಂದು ವೇಳೆ ನಿಷೇಧಿತ ಪ್ಲಾಸ್ಟಿಕ್ ಬಳಸಿದ್ದಲ್ಲಿ 200ರಿಂದ 20 ಸಾವಿರ ರೂ.ರವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ
ಕಛೇರಿ ವ್ಯವಸ್ಥಾಪಕ ಜಟ್ಟೆಪ್ಪಾ ಜಾಮಗೊಂಡ,ಸಂತೋಷ ಚಲವಾದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.