ಕಲಬುರಗಿ:ಸೆ.20: ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ಹತ್ತನೇ/ಪಿ.ಯು.ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿದ ಅಲೆಮಾರಿ ಹೆಳವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಜಿ ಕಾರ್ಮಿಕ ಸಚಿವ ಹಾಗೂ ದೇವರಾಜ ಅರಸು ಪ್ರಶಸ್ತಿ ಪುರಸ್ಕøತ ಎಸ್.ಕೆ ಕಾಂತಾ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದುಡಿಯುವ ವರ್ಗಕ್ಕೆ ಸಮಾಜ ನಿರ್ಮಾಣ ಮಾಡುವ ಶಕ್ತಿ ಇರುತ್ತದೆ. ನಮ್ಮ ಹಕ್ಕನ್ನು ಪಡೆಯಲು ಸಮುದಾಯದ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶಂಕರಲಿಂಗ ಮಹಾಸ್ವಾಮಿಗಳು ಹಾಗೂ ಹೆಳವ ಸಮಾಜ ಮಠದ ಅಧ್ಯಕ್ಷ ಪೂಜ್ಯ ಬಸವಭೃಂಗೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.
ಆಶಿರ್ವಚನ ನಿಡುತ್ತಾ ಮಾತನಾಡಿದ ಪೂಜ್ಯ ಬಸವಭೃಂಗೇಶ್ವರ ಮಹಾಸ್ವಾಮಿಗಳು
ದುಡಿದು ತಿನ್ನುವವರಿಗೆ ಬಡತನ ಇಲ್ಲ. ನೂರಾರು ಮನೆತನದ ವಂಶಾವಳಿ ಸುಲಲಿತವಾಗಿ ಹೇಳುವ ಶ್ರೇಷ್ಠ ಸಮಾಜ ಹೆಳವ ಸಮಾಜ. ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಬೇಕು. ಶಿಕ್ಷಣ ಪಡೆದವರು ತಮ್ಮ ಜೀವನವನ್ನು ಮಾತ್ರವಲ್ಲ, ಸಮುದಾಯದ ಭವಿಷ್ಯವನ್ನೂ ಬೆಳಗಿಸುತ್ತಾರೆ.
ನಾವು ಒಟ್ಟಾಗಿ ಶಿಕ್ಷಣವನ್ನು ಪೆÇ್ರೀತ್ಸಾಹಿಸಿದರೆ, ನಮ್ಮ ಸಮುದಾಯದ ಪ್ರಗತಿ ಖಚಿತ ಎಂದರು.
ಮುಖ್ಯಅತಿಥಿಗಳಾಗಿ ವಿಧಾನ ಪರಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಹಾಂತೇಶ ಕೌಲಗಿ ಹಾಗೂ ಕುಮಾರ ಯಾದವ ವಹಿಸಿದ್ದರು.
ಈ ಸಂದರ್ಭದಲ್ಲಿ ಹೆಳವ ಸಮುದಾಯದ ಸರ್ಕಾರಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಬಿ. ಹೆಳವರ, ಬಸವರಾಜ ಹೆಳವರ ಯಾಳಗಿ ಹಾಗೂ ವಿಶೇಷ ಸಾಧನೆ ಮಾಡಿದ ಸಮಾಜದ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಬಿ. ಹೆಚ್. ಬಸವರಾಜ ಎಸ್. ಹೆಳವರ, ಎಚ್.ಎನ್ ಗೋಗಿ, ಶಿವಶರಣಪ್ಪ ಕನ್ನೊಳ್ಳಿ, ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ, ರಾಘು ಮಾಸ್ತರ, ಸಿದ್ದರಾಮ ಬೈರಾಮಡಗಿ, ಹಣಮಂತ್ರಾಯ ಹಳಿಸಗರ, ಮಲ್ಲಿಕಾರ್ಜುನ ಆರ್. ಹೆಳವರ, ಚಂದಪ್ಪ ಹೆಳವರ, ನಾಗಪ್ಪ ಹೆಳವರ, ಅಶೋಕ ಹೆಳವರ, ನೆಹರು ಹೆಳವರ, ಸಂತೋಷ ಹೆಳವರ, ತಿಪ್ಪಣ್ಣ ಹೆಳವರ ಹಾಗೂ ಸಮಾಜದ ಮಹಿಳೆಯರು ಮತ್ತು ಯುವಕರು ಭಾಗವಹಿಸಿದ್ದರು.

































