ಇಂಡಿ: ಬ್ರಹ್ಮನು ಸೃಷ್ಟಿಯನ್ನು ರಚಿಸಿದರೆ , ಶಿಕ್ಷಕ ಪ್ರಪಂಚದ ಶಿಲ್ಪಿಯಾಗಿದ್ದಾನೆ. ಶಿಕ್ಷಕರು ಮಕ್ಕಳ ಅಭಿರುಚಿಗೆ ಅನುಗುಣವಾಗಿ ಶಿಕ್ಷಣ ನೀಡಿ ಏಕೆಂದರೆ ಆತ್ಮಸಾಕ್ಷಿಗಿಂತ ಹಿರಿದು ಜಗತ್ತಿನಲ್ಲಿ ಯಾವುದು ಇಲ್ಲ ಅದನ್ನು ಅರಿತು ಶಿಕ್ಷಕರು ನಡೆದರೆ ಮಕ್ಕಳ ಭವಿಷ್ಯ ಉಜ್ವಲಗೊಳ್ಳುವದರಲ್ಲಿ ಸಂಶಯವೇ ಇಲ್ಲವೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ನಗರದ ಗುರುಭವನದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಅತಿಥಿ ಉಪನ್ಯಾಸಕರಾಗಿ ಡಾ.ಯಶವಂತ ಕೊಕ್ಕನವರ ಹಾಗು ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಶಿಕ್ಷಕರ ಮೌಲ್ಯಯುತ ಪವಿತ್ರ ಜೀವನದ ಕುರಿತು ಮಾತನಾಡಿದರು.
ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮುಜಾವರ ಮೆಡಂ ಮಾತನಾಡಿದರು. ಕರ‍್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ನೌಕರರ ಸಂಘದ ಅಧ್ಯಕ ಬಸವರಾಜ ರಾವೂರ,ಶಿಕ್ಷಕರಾದ ಆರ್.ವ್ಹಿ. ಪಾಟೀಲ, ವಾಯ್.ಟಿ, ಪಾಟೀಲ, ಎಸ್.ವ್ಹಿ.ಹರಳಯ್ಯ,ಎಸ್.ಡಿ ಪಾಟೀಲ, ನಿಜಣ್ಣ ಕಾಳೆ, ಕೊಳೇಕರ, ಪಬ್ಬು ಚಾಂದಕವಟೆ, ಬಿ.ಆಯ್.ಗೊರನಾಳ ಹಾಗೂ























