ಕಲಬುರಗಿ:ಸೆ.೬:ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣನವರ ೧೩೭ನೇ ಜಯಂತಿಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ವಿಜ್ರಂಭಣೆಯಿAದ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರಂಗಾಯಣದ ವಿಶ್ರಾಂತ ನಿರ್ದೇಶಕರಾದ ಶ್ರೀ. ಪ್ರಭಾಕರ ಜ್ಯೊಶಿ ಸ್ಥಾನಿಕ ಸಂಪಾದಕರು ಸಂಯುಕ್ತ ಕರ್ನಾಟಕ ಕಲಬುರಗಿ ನೆರವೇರಿಸಿ, ನಮ್ಮ ಶೂನ್ಯದಲ್ಲಿ ಯಾರೂ ಇರುವುದಿಲ್ಲ, ಬ್ರಹ್ಮಾಂಡ ಶೂನ್ಯದಲ್ಲಿ ಎಲ್ಲರೂ ಇರುತ್ತಾರೆ. ಕೇಳುವುದು, ಆಲಿಸುವುದರಲ್ಲಿ ವ್ಯತ್ಯಾಸವಿದೆ. ಬೆಲೆ ಇರುವುದು ವಿಷಯ ತಿಳಿದುಕೊಳ್ಳುವುದರಲ್ಲಿ ಅಲ್ಲಮಪ್ರಭುಗಳ ಶೂನ್ಯ ಸಂಪಾದನೆ ವಿವರಿಸುತ್ತಾ ವಿದ್ಯಾರ್ಥಿಗಳಲ್ಲಿ ಬರೆಯುವುದು ಕಡಿಮೆಯಾಗಿದೆ. ಪ್ರತಿದಿನ ಹತ್ತು ಪುಟಗಳಷ್ಟು ಬರೆಯಬೇಕು, ಅಂದಾಗ ಮಾತ್ರ ಸಾಧಿಸಲು ಸಾದ್ಯ ಎಂದು ಹೇಳಿದರು.























