
ಬೀದರ್: ಜ.20:ವಿದ್ಯಾರ್ಥಿಗಳಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಜಿ. ಸುರೇಶ್ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಲಹೆ ಮಾಡಿದರು.
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ನಗರದ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ರಾಜ್ಯಕ್ಕೆ ಕೀರ್ತಿ ತರುವ ಹಾಗೆ ತರಬೇತಿ ನೀಡಬೇಕು ಎಂದು ಹೇಳಿದರು.
ಪಠ್ಯದ ಜತೆಗೆ ಕ್ರೀಡೆ ಹಾಗೂ ಯೋಗ ಚಟುವಟಿಕೆಗಳು ವಿದ್ಯಾರ್ಥಿಗಳ ಸವಾರ್ಂಗೀಣ ಬೆಳವಣಿಗೆಗೆ ಪೂರಕವಾಗುತ್ತವೆ ಎಂದು ತಿಳಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರ ಕೌಶಲ ವೃದ್ಧಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಯೋಗ, ಎರೋಬಿಕ್ ನೃತ್ಯ, ಹ್ಯಾಂಡ್ ಬಾಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತವೆ ಎಂದು ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಬಿ. ಸೂರ್ಯವಂಶಿ ಹೇಳಿದರು.
ಬರುವ ದಿನಗಳಲ್ಲಿ ಎರಡು ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಕಾರ್ಯಾಗಾರ ಹಾಗೂ ಕ್ರೀಡಾ ವಸ್ತು ಪ್ರದರ್ಶನ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಯೋಗದ ಕುರಿತು ಡಾ. ಚಂದ್ರಕಾಂತ ಬಿರಾದಾರ, ಹ್ಯಾಂಡ್ ಬಾಲ್ ಕುರಿತು ದತ್ತಾತ್ರೇಯ, ಉಮೇಶ ಶರ್ಮಾ, ದೈಹಿಕ ಶಿಕ್ಷಣ ಶಿಕ್ಷಕರ ಕರ್ತವ್ಯಗಳು ಹಾಗೂ ಶಾಲೆಯಲ್ಲಿ ನಿರ್ವಹಿಸುವ ದಾಖಲೆಗಳ ಕುರಿತು ಎಸ್.ಎ. ಮುನಾಫ್, ರಾಷ್ಟ್ರೀಯ ಭಾವೈಕ್ಯತೆ ಕುರಿತು ಸಿದ್ದಣ್ಣ ಎಳಸಂಗೆ, ಮಾರುತಿ ಸೂರ್ಯವಂಶಿ ಹಾಗೂ ಎರೋಬಿಕ್ ನೃತ್ಯ ಕುರಿತು ವಿಜಯಕುಮಾರ ವಾಡೇಕರ್ ಉಪನ್ಯಾಸ ನೀಡಿದರು. ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯದ ಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಗುರುಪ್ರಸಾದ್, ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ರಾಜು ದೊಡ್ಡಮನಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ಸೂರ್ಯಕಾಂತ ಪಾಟೀಲ, ಮಹೆಬೂಬ್ ಪಟೇಲ್, ಪ್ರಶಾಂತ ರಾಗಾ, ಶಿವರಾಜ ಕಪಲಾಪುರೆ, ವೈಜಿನಾಥ ಸಾಗರ್, ರಾಜಕುಮಾರ ಬಿರಾದಾರ, ಬಸವರಾಜ ಜಕ್ಕಾ, ವಿಜಯಕುಮಾರ ಪಾಟೀಲ, ಪಾಂಡುರಂಗ ಬೆಲ್ದಾರ್, ದಯಾನಂದ ಮಮದೆ, ವಿಷ್ಣುಕಾಂತ ಠಾಕೂರ್, ಲಿಂಗರಾಜ ಭಾಲ್ಕೆ, ಶ್ರೀಪತಿ ಮೇತ್ರೆ, ಡಾ. ಚಂದ್ರಕಾಂತ ಬಿರಾದಾರ, ದತ್ತಾತ್ರೇಯ ಜೇವರ್ಗಿ, ವೆಂಕಟರಾವ್ ಡೊಂಬಾಳೆ, ಶಾಂತಕುಮಾರ ಜಯದೊಡ್ಡಿ, ಸಂಜಯ್ ವೈ. ಬಿರಾದಾರ, ಸುಧಾಕರ ಪೆÇೀಲಕಪಳ್ಳಿ, ಮಾಜಿದ್ ಅಲಿ, ಕ್ಲೆಮೆಂಟ್‍ರಾಜ್, ಗೋಪಾಲ್ ಜಮಾದಾರ್, ಶಿವಶಂಕರ ಪತಂಗೆ, ಯಶವಂತ ಡೊಂಬಾಳೆ, ಶಬ್ಬೀರ್ ಅಲಿ, ವಿಜಯಕುಮಾರ ಎಂ., ಹಾಜಿ ಸಾಬ್, ಗೀತಾ ನಾರಾ, ಗೋಪಾಲ್ ರೆಡ್ಡಿ, ಮೆಹಬೂಬ್ ಅಲಿ ಮತ್ತಿತರರು ಇದ್ದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳ ಒಟ್ಟು 400 ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.






















