Home ಜಿಲ್ಲೆ ಕುವೈತನಲ್ಲಿರುವ ನಮ್ಮ ಜನರಿಗೆ ಮರಳಿ ಭಾರತಕ್ಕೆ ತರುವೆ : ಭಗವಂತ ಖೂಬಾ

ಕುವೈತನಲ್ಲಿರುವ ನಮ್ಮ ಜನರಿಗೆ ಮರಳಿ ಭಾರತಕ್ಕೆ ತರುವೆ : ಭಗವಂತ ಖೂಬಾ

ಬೀದರ:ಎ.೧:ಇಸ್ರೇಲ್, ಅಮೇರಿಕಾ ಮತ್ತು ಇರಾನ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಯುದ್ಧದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ, ಕುವೈತ್‌ನಲ್ಲಿ ನೆಲೆಸಿರುವ ಹಾಗೂ ಉದ್ಯೋಗಕ್ಕಾಗಿ ತೆರಳಿರುವ ಕರ್ನಾಟಕದ ಬೀದರ್ ಲೋಕಸಭಾ ಕ್ಷೇತ್ರದ ಜನರು ಆತಂಕಕ್ಕೊಳಗಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಪ್ರಸ್ತುತ ಕೇರಳ ಪ್ರವಾಸದಲ್ಲಿರುವ ಅವರು, ಅಲ್ಲಿಂದಲೇ ಕುವೈತ್‌ನಲ್ಲಿರುವ ತಮ್ಮ ಕ್ಷೇತ್ರದ ಜನರೊಂದಿಗೆ ವಾಟ್ಸಾಪ್ ಕರೆ ಮೂಲಕ ಸುದೀರ್ಘವಾಗಿ ಮಾತನಾಡಿ ಧೈರ್ಯ ತುಂಬಿದರು. “ಯಾರೂ ಭಯಪಡುವ ಅಗತ್ಯವಿಲ್ಲ, ನಿಮ್ಮ ಸುರಕ್ಷತೆಯ ಬಗ್ಗೆ ನಮಗೆ ಕಾಳಜಿಯಿದೆ” ಎಂದು ಅವರು ಅಭಯ ನೀಡಿದ್ದಾರೆ. ನಾನು ಅಧಿಕಾರದಲ್ಲಿದ್ದಾಗಲೂ ಹೊರದೇಶದಲ್ಲಿ ನಮ್ಮ ದೇಶದ ಜನರು ಸಂಕಷ್ಟದಲ್ಲಿದ್ದಾಗ ಅನೇಕ ಜನರನ್ನು ಭಾರತಕ್ಕೆ ಮರಳಿ ಕರೆ ತಂದಿರುವೆ, ಇವಾಗಲೂ ನಿಮ್ಮ ಜೊತೆ ಇರುವೆ ನಿವ್ಯಾರು ಆತಂಕ ಪಡುವ ಅವಶ್ಯಕತೆ ಇಲ್ಲಾ ಎಂದು ಅವರೆಲ್ಲರಿಗೂ ಧೈರ್ಯ ತುಂಬಿದ್ದಾರೆ.

ಮುAದುವರಿದು ಮಾತನಾಡಿದ ಅವರು, “ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ವಿದೇಶದಲ್ಲಿ ಸಂಕಷ್ಟಕ್ಕೀಡಾದ ಭಾರತೀಯರನ್ನು ರಕ್ಷಿಸುವಲ್ಲಿ ಸದಾ ಬದ್ಧವಾಗಿದೆ. ಈಗಾಗಲೆ ಹಲವಾರು ದೇಶದಿಂದ ಭಾರತಿಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿರುತ್ತದೆ. ಜೊತೆಗೆ ನಾನು ಅಧಿಕಾರದಲ್ಲಿರದೆ ಇದ್ದರು ಸಹ ತಾವು ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಕರೆ ಮಾಡಿದ್ದಿರಿ ನಾನು ನಮ್ಮ ಸಂಬAಧಪಟ್ಟ ಮಂತ್ರಾಲಯಕ್ಕೆ ಮತ್ತು ಅಧಿಕಾರಿಗಳಿಗೆ ತಮ್ಮ ಬಗ್ಗೆ ಮಾಹಿತಿ ನೀಡಿ, ತಮ್ಮನ್ನು ಕುವೈತ್‌ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ಸರ್ಕಾರದಿಂದ ಕೊಡಿಸಲಾಗುವುದು,” ಎಂದು ಭರವಸೆ ನೀಡಿದರು.

ಕುವೈತನಿಂದ ರಾಜೇಶ್ವರ ಗ್ರಾಮದ ದಿಲಿಪ್ ಮಿತ್ರಾರವರು ಈಗಾಗಲೆ ನಮ್ಮ ಆಪ್ತಸಹಾಯಕರ ಜೊತೆ ಸಂಪರ್ಕದಲ್ಲಿದ್ದು, ಒಟ್ಟು ೪೩ ಜನರ ಮಾಹಿತಿ ನೀಡಿದ್ದಾರೆ ಮತ್ತು ಇನ್ನು ಬೇಕಾಗಿರುವ ಅವಶ್ಯಕ ಮಾಹಿತಿಗಳು ಅವರಿಗೆ ನೀಡುವಂತೆ ತಿಳಿಸಲಾಗಿದೆ, ಎಲ್ಲಾ ಮಾಹಿತಿಗಳು ಸಂಗ್ರಹಿಸಿಕೊAಡು ಭಾರತ ಸರ್ಕಾರದ ಗಮನಕ್ಕೆ ತಂದು, ನಮ್ಮೆಲ್ಲಾ ಜನರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.