
ವಿಜಯಪುರ, ಜೂ. ೨೯:ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ಬರೀ ನೋಡಿದ್ದೇನೆ ಅಷ್ಟೇ. ಆ ಉಸಾಬರಿ ನನಗೆ ಬೇಡ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ನಾನು ಯಾರನ್ನು ಸಂಪರ್ಕಿಸಲು ಹೋಗಿಲ್ಲ. ಕೆಲವನ್ನು ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೇ. ನಾನು ಅಷ್ಟು ದೊಡ್ಡ ಲೀಡರ್ ಅಲ್ಲ, ನಮ್ಮ ಪಕ್ಷದಲ್ಲಿ ಹಿರಿಯರಿದ್ದಾರೆ. ಅವರು ಏನು ನಿರ್ಧಾರ ಮಾಡುತ್ತಾರೆ. ಅದಕ್ಕೆ ಸಮ್ಮತಿ ಇದೆ ಎಂದರು.
ಮಾಜಿ ಸಿಎಂ ಪುತ್ರ ಎಂದು ವಿಜಯೇಂದ್ರಗೆ ರಾಜಾಧ್ಯಕ್ಷರನ್ನಾಗಿ ಮಾಡಿದ್ದಾರೆ. ವಯಸ್ಸಿನಲ್ಲಿ ನಾನು ಅವರ ತಂದೆಗಿAತ ದೊಡ್ಡವನಿದ್ದೇನೆ. ಅದರೆ ವಿಜಯೇಂದ್ರನ್ನು ರಾಜ್ಯಾಧ್ಯಕ್ಷನನ್ನಾಗಿ ಹೈಕಮಾಂಡ್ ನೇಮಕದ ತೀರ್ಮಾನ ಒಪ್ಪಿದ್ದೇವೆಂದರು. ಅಷ್ಟೇಯಲ್ಲ ಯಾರನ್ನೆ ರಾಜ್ಯಾದ್ಯಕ್ಷರನ್ನಾಗಿ ಮಾಡಿದರು ಒಪ್ಪುತ್ತೇನೆ ಎಂದು ಹೇಳಿದರು.
ಪಕ್ಷದಲ್ಲಿನ ಒಳಜಗಳ ವಿಚಾರ ನನಗೆ ಗೊತ್ತಿಲ್ಲ. ನನ್ನ ಕೆಲಸವೇ ನನಗೆ ಸಾಕಾಗಿದೆ ಇವೆಲ್ಲ ಜಂಜಾಟದಿAದ ದೂರ ಇದ್ದೇನೆ ಎಂದರು.
ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಆಯ್ಕೆಯಾಗಿರುವ ಸಂಸದ ರಮೇಶ ಜಿಗಜಿಣಗಿ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು.
ತಮ್ಮ ಅಧಿಕಾರದ ಅವಧಿಯಲ್ಲಿ ೧೨ ರಸ್ತೆ ಅಂಡರ್ ಬ್ರಿಡ್ಜ್ ಗಳನ್ನು ೬೧ ಕೋಟಿ ರೂಪಾಯಿಗಳಲ್ಲಿ ನಿರ್ಮಿಸಿದ್ದಾಗಿ ಹೇಳಿದರು. ಜೊತೆಗೆ ಐದು ರೈಲ್ವೆ ಓವರ್ ಬ್ರಿಡ್ಜ್ ಗಳನ್ನು ೧೩೦ ಕೋಟಿ ರೂಪಾಯಿಗಳಲ್ಲಿ ನಿರ್ಮಿಸಿ ಜನರಿಗೆ ಸದುಪಯೋಗವಾಗುವಂತೆ ಮಾಡಿದ್ದಾಗಿ ಹೇಳಿದರು. ಇನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಆರು ರಾಷ್ಟ್ರೀಯ ಹೆದ್ದಾರಿಗಳನ್ನು ೨೨೫೭ ಕೋಟಿ ವೆಚ್ಚದಲ್ಲಿ ಹಾಗೂ ಎನ್ ಎಚ್ ಎ ಐ ಅಧೀನದಲ್ಲಿ ೨೩೦೯ ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಹೆದ್ದಾರಿಗಳನ್ನು ನಿರ್ಮಿಸಿದ್ದಾಗಿ ಹೇಳಿದರು. ರೈಲ್ವೆ ಅಂಡರ್ ಬ್ರಿಡ್ಜ್ ಗಳು, ರೈಲ್ವೇ ಓವರ್ ಬ್ರಿಡ್ಜ್ ಗಳು ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎನ್ ಹೆಚ್ ಎ ಐ ಹೆದ್ದಾರಿಗಳ ನಿರ್ಮಾಣದಿಂದ ಜಿಲ್ಲೆಯ ಜನರಿಗಷ್ಟೇ ಅಲ್ಲ ಇಡೀ ರಾಜ್ಯದ ಜನರಿಗೆ ಹಾಗೂ ಇತರೆ ರಾಜ್ಯಗಳ ಜನರಿಗೂ ಅನುಕೂಲವಾಗಿದೆ ಎಂದು ಮಾಹಿತಿ ನೀಡಿದರು. ಇನ್ನು ಹೊಸದಾಗಿ ವಿಜಯಪುರದಿಂದ ಹುಬ್ಬಳ್ಳಿ ಹಾಗೂ ವಿಜಯಪುರದಿಂದ ಹುಮನಾಬಾದ್ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ಹೆದ್ದಾರಿಗಳ ಕಾಮಗಾರಿಗಳಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರವೇ ಅದು ಅನುಮೋದನೆಗೊಳ್ಳಲಿದೆ ಎಂದು ಹೇಳಿದರು.
ಇದರ ಜೊತೆಗೆ ವಿಜಯಪುರ ನಗರಕ್ಕೆ ೪೭ ಕೋಟಿ ರೂಪಾಯಿ ಅಂತರದ ರಿಂಗ್ ರೋಡ್ ನಿರ್ಮಾಣಕ್ಕೆ ೭೫೦ ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಸಲಾಗಿದ್ದು ನೀಲಲಕ್ಷೆ ತಯಾರಿ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಇನ್ನು ಸಂವಿಧಾನದಲ್ಲಿ ಜಾತ್ಯತೀತ ಮತ್ತು ಸಮತಾವಾದ ಪದಗಳನ್ನ ತೆಗೆದು ಹಾಕಬೇಕೆ ಎನ್ನುವ ಚರ್ಚೆ ಆಗಬೇಕೆಂದು ಆರ್ ಎಸ್ ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿಕೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಸಮಾಜವಾದದ ವಿಚಾರದಲ್ಲಿ ದಲಿತ ಸಮಾಜದವರ ಅಧಿಕಾರಕ್ಕೆ ಕೈ ಹಾಕಿದರೆ ಅದು ಸರಿಯಲ್ಲ. ಇನ್ನು ಸಂವಿಧಾನದಲ್ಲಿ ಸಮಾಜವಾದ ಹಾಗೂ ಜಾತ್ಯತೀತತೆ ಪದಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ಆಗಬೇಕು. ಚರ್ಚೆ ಬಳಿಕ ನಮ್ಮ ಹಾಗೂ ಪಕ್ಷದ ನಿರ್ಧಾರ ತಿಳಿಸಲಾಗುತ್ತದೆ ಎಂದು ಹೇಳಿದರು. ಇದಕ್ಕೆ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ ಸಹ ಧ್ವನಿಗೂಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಪರಿಷತ್ ಸದಸ್ಯ ಅರುಣ ಶಹಾಪೂರ, ಮಾಜಿ ಶಾಸಕ ರಮೇಶ ಭೂಸನೂರ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.