
ಕಲಬುರಗಿ,ಜೂ.10: ಪತ್ನಿಯ ಶೀಲದ ಬಗ್ಗೆ ಶಂಕೆ ಇಟ್ಟುಕೊಂಡಿದ್ದ ಪತಿಯೊಬ್ಬ ಆಕೆಯನ್ನು ರಸ್ತೆ ಮಧ್ಯೆ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಶಹಾಬಜಾರ್ ಬಡಾವಣೆಯಲ್ಲಿ ನಡೆದಿದೆ.
ಕಲಬುರಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದ ರೂಪಾ (32) ಕೊಲೆಯಾಗಿರುವ ಗೃಹಿಣಿ. 10 ವರ್ಷಗಳ ಹಿಂದೆ ವೆಂಕಟೇಶ್-ರೂಪಾ ಮದುವೆಯಾಗಿತ್ತು. ಮೂರು ತಿಂಗಳ ಹಿಂದೆ ಪತ್ನಿಯ ಶೀಲ ಶಂಕಿಸಿ ಆಕೆಯೊಂದಿಗೆ ವೆಂಕಟೇಶ್ ಜಗಳವಾಡಿದ್ದರಿಂದ ಬೇಸತ್ತ ಆಕೆ ಗಂಡನನ್ನು ಬಿಟ್ಟು ತನ್ನ ಮಕ್ಕಳೊಂದಿಗೆ ಶಹಾಬಜಾರ್ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಜೀವನ ನಿರ್ವಹಣೆಗಾಗಿ ಹೋಟೆಲ್‍ನಲ್ಲಿ ಸಮೋಸ ಮಾಡುತ್ತಿದ್ದ ರೂಪಾ ಇಂದು ಬೆಳಗ್ಗೆ ಸುಮಾರು 8.30ರ ಆಸುಪಾಸಿನಲ್ಲಿ ನಡೆದುಕೊಂಡು ಹೋಟೆಲ್‍ಗೆ ತೆರಳುತ್ತಿದ್ದಾಗ ಅಲ್ಲಿಗೆ ಬಂದ ಆಕೆಯ ಪತಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಈ ಮಧ್ಯೆ, ಪತ್ನಿಗೆ ಚಾಕು ಇರಿದು ವೆಂಕಟೇಶ್ ಬೈಕ್ ಮೇಲೆ ಪರಾರಿಯಾಗುತ್ತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಯ ಆಧಾರದ ಮೇಲೆ ವೆಂಕಟೇಶ್ ವಿರುದ್ಧ ಚೌಕ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೆÇಲೀಸರು ಜಾಲ ಬೀಸಿದ್ದಾರೆ.
ಇನ್ನು, ಘಟನಾ ಸ್ಥಳಕ್ಕೆ ಪೆÇಲೀಸ್ ಕಮಿಷನರ್ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.