ಪತ್ನಿ ಜತೆ ಜಗಳ: ನೇಣಿಗೆ ಶರಣಾದ ಪತಿ

ಕಲಬುರಗಿ,ಜೂ.12-ಪತ್ನಿ ಜೊತೆ ಜಗಳವಾಡಿದ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಆಳಂದ ಚೆಕ್ ಪೋಸ್ಟ್ ಹತ್ತಿರ ಬಡಾವಣೆಯೊಂದರಲ್ಲಿ ಇಂದು ನಡೆದಿದೆ.
ಸಿದ್ರಾಮ ಢಗೆ (42) ಆತ್ಮಹತ್ಯೆ ಮಾಡಿಕೊಂಡವರು.
ಮೆಡಿಕಲ್ ರಿಪ್ರೆಸೆಂಟೆಟಿವ್ (ಎಂಆರ್) ಆಗಿ ಕೆಲಸ ಮಾಡುತ್ತಿದ್ದ ಸಿದ್ರಾಮ ಅವರು ಪತ್ನಿ ಜೊತೆಗೆ ಜಗಳವಾಡಿ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಚೌಕ್ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.