ಬೀದರ:ಸೆ.17:ನಗರದ ಬಿ.ವಿ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದಿಂದ ರಾಷ್ಟ್ರಕವಿ ಕುವೆಂಪು ವೀರಚಿತ ನಾಡಗೀತೆ “ಜಯ ಭಾರತ ಜನನೀಯ ತನುಜಾತೆ” ರಚಿಸಿ ನೂರು ವರ್ಷವಾದ ಪ್ರಯುಕ್ತ “ನಾಡಗೀತೆಗೆ ನೂರರ ಸಂಭ್ರಮ ಸಾವಿರ ಸ್ವರಗಳ ನಮನ” ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪ್ರಾಂಶುಪಾಲರಾದ ಡಾ. ಪಿ.ವಿಠ್ಠಲ ರಡ್ಡಿಯವರು ರಾಷ್ಟ್ರಕವಿ ಕುವೆಂಪು ಹಾಗೂ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ ನಾಡಗೀತೆ ಕನ್ನಡದ ಹೆಮ್ಮೆ ಸಾರುವ ಸಾಹಿತ್ಯ ಹೊಂದಿದೆ ಕರ್ನಾಟಕ ಹಿರಿಮೆ ಮಾತ್ರವಲ್ಲ ಭಾರತ ಮಾತೆಯ ಮಗಳು ಎಂಬ ಪರಿಕಲ್ಪನೆಯೊಂದಿಗೆ ಶಾಂತಿ ಸಹಬಾಳ್ವೆ ಸೌರ್ಹಾದತೆತೆಯನ್ನು ಸಾರುವ ಸಾಹಿತ್ಯ ಹೊಂದಿದ ಅಪ್ರತಿಮ ಸಾಹಿತಿ ಕುವೆಂಪುರವರ ಕೊಡುಗೆ ಎಂದು ನುಡಿದರು.
ಅತಿಥಿಗಳಾಗಿ ಆಗಮಿಸಿದ ಸತ್ಯಂ ಕಾಲೇಜಿನ ಅಧ್ಯಕ್ಷರಾದ ಶ್ರೀಯುತ ಶಿವಾಜಿ ಭೋಸ್ಲೆಯವರು ನಾಡಿನ ಹಿರಿಮೆ ಗರಿಮೆ ಸಂಸ್ಕøತಿ ಕುರಿತು ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೇಣುಕಾದೇವಿ ಮಳ್ಳಿ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಕುವೆಂಪುಯವರು ತಮ್ಮ 20ನೇ ವಯಸ್ಸಿನಲ್ಲಿಯೇ ನಾಡಗೀತೆಯಂಥಹ ಅದ್ಬುತ ಸಾಹಿತ್ಯವನ್ನು ರಚಿಸಿದ ಕನ್ನಡದ ಶ್ರೇಷ್ಠ ಸಾಹಿತಿ ಎಂದು ಹೇಳುತ್ತಾ ನಾಡಗೀತೆ ಇತಿಹಾಸ ವಿಶೇಷತೆ ಕುರಿತ ಮಾತನಾಡಿದರು.
ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪಾ ರಾಗರವರು ಗೌರವ ಉಪಸ್ಥಿತಿ ಸ್ಥಾನವನ್ನು ಅಲಂಕರಿಸಿದರು.
ವಿಶೇಷವೆಂದರೆ ಮಹಾವಿದ್ಯಾಲಯದ ವಿದ್ಯಾರ್ಥಿಗಳೆಲ್ಲರು ನಾಡಗೀತೆ ಹಾಗೂ ಕನ್ನಡ ಗೀತೆಗಳನ್ನು ಹಾಡುವುದರ ಮುಖಾಂತರ ಸಂಭ್ರಮಿಸಿ ಗಮನ ಸೆಳೆದರು.
ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ಕಾವೇರಿ ಖಂಡ್ರೆ ನಿರೂಪಿಸಿದರೆ, ಇತಿಹಾಸ ವಿಭಾಗದ ಉಪನ್ಯಾಸಕರಾದ ಶ್ರೀ ಬಸವರಾಜ ಬಿರಾದಾರ ಸ್ವಾಗತಿಸಿದರೆ ಶ್ರೀಮತಿ ರತಿದೇವಿ ವಂದಿಸಿದರು ಮಹಾವಿದ್ಯಾಲಯದ ಎಲ್ಲಾ ವಿಭಾಗದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು.























