ಕಲಬುರಗಿ,ಅ.16: ತಾಲೂಕಿನ ಖಣದಾಳ ಗ್ರಾಮದಲ್ಲಿ ಅ. 21 ಹಾಗೂ 22 ರಂದು ಮಹಾತ್ಮಾ ಹುಣಚೇಶ್ವರರ ಜಾತ್ರಾ ಮಹೋತ್ಸವ ನಡೆಯಲಿದೆ.
ಅ.21. ರಂದು ಬೆಳಿಗ್ಗೆ 7 ಗಂಟೆಗೆ ರುದ್ರಾಭಿಷೇಕ, 9 ಗಂಟೆಗೆಗಂಗಾಸ್ನಾನ ಹಾಗೂ ಕುಂಭ ಕಾರ್ಯಕ್ರಮ, 11
ಗಂಟೆಗೆ ಗುಗ್ಗುಳ ಕಾರ್ಯಕ್ರಮ ಹಾಗೂ ರಾತ್ರಿ 10ಗಂಟೆಗೆ ಕಲಾವಿದಆರ್ಕಿಸ್ಟ್ರಾ ಚನ್ನವೀರ ತಳವಾರ ಬೆಳಗುಂಪಾ ತಂಡದವರಿಂದ ರಸ ಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 22 ರಂದು ಬೆಳಿಗ್ಗೆ7 ಗಂಟೆಗೆ ರುದ್ರಾಭಿಷೇಕ, 9 ಗಂಟೆಗೆ ಈಶ್ವರದೇವಾಲಯದಿಂದ ಹನುಮಾನದೇವಸ್ಥಾನ ವರೆಗೆ ಡೊಳ್ಳು ಬಾಜಿ ಭಜಂತ್ರಿಯೊಂದಿಗೆಗ್ರಾಮ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ, 11ಗಂಟೆಗೆ ಲಾಗದ ಕಾರ್ಯಕ್ರಮ ಹಾಗೂ ಸಾಯಂಕಾಲ 5 ಗಂಟೆಗೆ ಧರ್ಮಸಭೆ ಮುಗುಳನಾಗಾಂವ ಪೂಜ್ಯ ಅಭಿನವಸಿದ್ಧಲಿಂಗ ಶಿವಾಚಾರ್ಯರು ಮತ್ತು ಹುಣಚೇರಾಯಲಿಂಗ ಮಹಾರಾಜರು (ಆನಂದ ಆಶ್ರಮ(ಗುಂಪಾ, ಖಣದಾಳ )ಮತ್ತು ಸುನೀಲ ಸಾಹುಕಾರ ಶರಣರುಹಾಗೂವಿಶ್ವನಾಥ ಸ್ವಾಮಿಗಳು ಹಿರೇಮಠ ಅವರ ನೇತೃತ್ವದಲ್ಲಿ ಜರುಗಲಿದೆ ಎಂದು ಸಮಸ್ತ ಸದ್ಭಕ್ತಮಂಡಳಿ ಪರವಾಗಿ ವಸಂತ ರಾಠೋಡ ತಿಳಿಸಿದ್ದಾರೆ.

























