
ಚಿಟಗುಪಾ :ಫೆ.20: ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಇಂದಿನ ಸಕಲ ಸಮಸ್ಯೆಗಳಿಗೆ ಮುಖ್ಯ ಕಾರಣ, ಮನುಷ್ಯನಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೆರೇಪಿಸುವುದೇ ಪುರಾಣ ಪ್ರವಚನಗಳ ಮುಖ್ಯ ಉದ್ದೇಶ ಎಂದು ಶ್ರೀ ಶಾಂತ ಶಿವಯೋಗಿಶ್ವರ ಸಂಸ್ಥಾಮಠ ಹೆಡಗಿಮುದ್ರ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ನುಡಿದರು
ಪಟ್ಟಣದ ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ಮಂದಿರದಲ್ಲಿ ಗುರುವಾರ ಸಾಯಂಕಾಲ ಮಾರ್ಚ್ 6ರಂದು ಜರುಗಲಿರುವ ಜಾತ್ರೆ ಹಾಗು ರಥೋತ್ಸವದ ಪ್ರಯುಕ್ತ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮೇಲಿನಂತೆ ಆಶೀರ್ವಾದಿಸಿದರು
ವಿಶ್ವಾಸ ಹಾಗು ತಾಳ್ಮೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮಳನ್ನು ಮಹಾತಾಯಿಯಾಗಿಸಿದವು.
ಸಂಸಾರಲ್ಲಿದ್ದಾಗ ಆತಾಯಿ ಎದುರಿಸಿದ ಕಷ್ಟವೇದನೆಗಳು
ಸಾವಿರಾರು,ಆದರೂ ಮಲ್ಲಮ್ಮಳ ಶ್ರೀಶೈಲ ಮಲ್ಲಿಕಾರ್ಜುನ ದೇವರ ಮೇಲಿನ ಅಪಾರ ವಿಶ್ವಾಸದಿಂದ ಅವಳು ಈ ಜಗತ್ತಿನ ಎಲ್ಲ ಹೆಣ್ಣುಮಕ್ಕಳಿಗೆ ಆದರ್ಶಪ್ರಾಯಳಾದಳು ಎಂದರು.
ಭಕ್ತಿ ಹೇಗಿರಬೇಕು ಎಂಬುದನ್ನು ಜಗತ್ತಿಗೆ ಮಹಾಸ್ವಾದಿ ಹೇಮರೆಡ್ಡಿ ಮಲ್ಲಮ್ಮ ತೋರಿಸಿದಳು, ಎಲ್ಲರೂ ದೇವರನ್ನು ಅರಸಿ ಹೋದರೆ ಆ ಮಹಾತಾಯಿಯ ಭಕ್ತಿಗೆ ಮೆಚ್ಚಿ ಆ ದೇವರೇ ಅವಳಿದ್ದಲ್ಲಿಗೆ ಬರಬೇಕಾಯಿತು ಎಂದು ಶ್ಯಾ0ಡಿಲೇಶ್ವರ್ ಹಿರೇಮಠ ಸಂಸ್ಥಾನ ಹಿರೇಮುನ್ನೋಳಿಯ ಶ್ರೀ ಶಂಭುಲಿಂಗ ಶಿವಾಚಾರ್ಯರು ಹೇಳಿದರು…
ಚಿಟಗುಪ್ಪ ಅಯ್ಯಪ್ಪ ಹಿರೇಮಠ ಸಂಸ್ಥಾನದ ಶ್ರೀ ಗುರುಲಿಂಗ ಶಿವಾಚಾರ್ಯ ರು, ಶ್ರೀ ಮರುಳಾರಾಧ್ಯ ಶಿವಾಚಾರ್ಯ ರು,
ಮುಕ್ತಿಮಠ ಬೆಳಗಾವಿ ಹಾಗು ಇಟಗಾ ದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷ ವಿಜಯಕುಮಾರ ಬೊಮ್ಮಣಿ ವಹಿಸಿದ್ದರು, ಅತಿಥಿಗಳಾಗಿ ನಿವೃತ್ತ ಶಿಕ್ಷಕ ಮಹಾರುದ್ರಪ್ಪ ಅಣದುರ್, ಚಿಟಗುಪ್ಪ ರೆಡ್ಡಿ ಸಮಾಜದ ಅಧ್ಯಕ್ಷ ಬಿ ಏನ್ ರೆಡ್ಡಿ, ಬಾಬುರೆಡ್ಡಿ ಗುತ್ತೇದಾರ, ಪತ್ರಕರ್ತ ಸಂಘದ ಅಧ್ಯಕ್ಷ ನವೀನ್ ಏನ್ ಗಂಜಿ, ಬಸವರಾಜ್ ಜಿ ಪಾಟೀಲ್ ಪುರಾಣಿಕರಾದ ಶ್ರೀ ಮಡಿವಾಳಯ್ಯ ಶಾಸ್ತ್ರಿ ಗಳು ವೇದಿಕೆ ಮೇಲಿದ್ದರು.
ಅನಿಲ ಶಿರಮುಂಡಿ ಪ್ರಾಸ್ತವಿಕ ಮಾತನಾಡಿದರು, ಅಮಿತ್ ತೊಗಲೂರು ವಂದಿಸಿದರು.

























