ಬೀದರ, ನ.೨೯: ಹುಮನಾಬಾದ ತಾಲೂಕಿನ ಕನಕಟ್ಟಾ ಗ್ರಾಮದಲ್ಲಿ ವೈದ್ಯಕೀಯ ಪದವಿ ಪಡೆಯದೇ ಕ್ಲಿನಿಕ್ ನಡೆಸುತ್ತಿದ್ದ ಮ್ರಿನಲ್ ಕಾಂತಿ ಗೋಲ್ಡಾರ್ ಎನ್ನುವ ಬಂಗಾಳಿ ನಕಲಿ ವೈದ್ಯನ ಕ್ಲಿನಿಕ್‌ನ್ನು ಶುಕ್ರವಾರಂದು (ನ.೨೮) ಆರೋಗ್ಯ ಅಧಿಕಾರಿಗಳು ಸೀಜ್ ಮಾಡಿ ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆAದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ದಾಳಿ ಸಂದರ್ಭದಲ್ಲಿ ಹುಮನಾಬಾದ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಡಾ. ಸಿದ್ದೇಶ್ವರ, ಜಿಲ್ಲಾ ಕೆ.ಪಿ.ಎಂ.ಇ ನೋಡಲ್ ಅಧಿಕಾರಿ ಡಾ,ದಿಲೀಪ್ ಡೋಂಗ್ರೆ, ಕೆ.ಪಿ.ಎಂ.ಇ ವಿಷಯನಿರ್ವಾಹಕರು ಮಹೇಶ್ವರರೆಡ್ಡಿ ಹಾಗೂ ಸಿಬ್ಬಂದಿ ಸುನೀಲ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.























