ಮಾನವನ ಸ್ವಾರ್ಥದಿಂದ ಪರಿಸರಕ್ಕೆ ಹಾನಿ : ಸಚಿವ ಖಂಡ್ರೆ

ಭಾಲ್ಕಿ :ಜೂ.11: ಮಾನವನು ತನ್ನ ಸ್ವಾರ್ಥದಿಂದ ಐμÁರಾಮಿ ಜೀವನ ನಡೆಸಿ ಪರಿಸರವನ್ನು ವೀಪರಿತವಾಗಿ ನಾಶ ಮಾಡುತ್ತಿದ್ದಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ಹೊರವಲಯದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ಮನೆಗಳ ಹಕ್ಕು ಪತ್ರ ವಿತರಣೆ, ಅರಣ್ಯ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಹಾನಿಯಿಂದ ಜಗತ್ತಿನಲ್ಲಿ ನಾನಾ ಸಮಸ್ಯೆಗಳು ಉದ್ಭವ ಆಗಿವೆ. ಪ್ರಕೃತಿ ವಿಕೋಪದಿಂದ ಗುಡ್ಡ ಕುಸಿತ, ಪ್ರವಾಹ, ಅತಿವೃಷ್ಟಿ ಅನಾವೃಷ್ಟಿ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ನಮ್ಮ ಪೂರ್ವಜರು ನೈಸರ್ಗಿಕ ಸಂಪತ್ತನ್ನು ಹಿತಮಿತವಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಈಗಿನವರು ನೈಸರ್ಗಿಕ ಸಂಪತ್ತನ್ನು ಅತಿಯಾದ ಉಪಯೋಗಿಸಿ ನಿಸರ್ಗವನ್ನು ಮನಬಂದಂತೆ ಹಾಳು ಮಾಡುತ್ತಿದ್ದಾನೆ ಎಂದು ತಿಳಿಸಿದರು.
ಕೆಮಿಕಲ್ ಕೈಗಾರಿಕೆ, ವಾಹನ ಸಂಖ್ಯೆಗಳಲ್ಲಿ ಹೆಚ್ಚಳದಿಂದಾಗಿ ನೀರು, ಆಹಾರ, ಪರಿಸರದಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಏಕೆ ಬಳಕೆ ಪ್ಲಾಸ್ಟಿಕ್ ಮಣ್ಣಲ್ಲಿ ಮಣ್ಣಾಗುವುದಿಲ್ಲ. ನೀರಿನಲ್ಲಿ ಕರಗುವುದಿಲ್ಲ. ಸುಟ್ಟಿದರೆ ಹವಾಮಾನ ಮಲೀನಗೊಳಿಸುತ್ತದೆ. ಹಾಗಾಗಿ, ಏಕೆ ಬಳಕೆ ಪ್ಲಾಸ್ಟಿಕ್ ನ್ನು ನಿಷೇಧಿಸಿದ್ದೇವೆ ಎಂದು ಹೇಳಿದರು.
ಭೂಭಾಗದ ಸರಾಸರಿ 33 ರಷ್ಟು ಅರಣ್ಯ ಪ್ರದೇಶ ಇರಬೇಕು. ನಮ್ಮ ರಾಜ್ಯದಲ್ಲಿ 21ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಕಲ್ಯಾಣ ಕರ್ನಾಟಕದಲ್ಲಿ ಹಸಿರು ಹೊದಿಕೆ ತುಂಬಾ ಕಡಿಮೆ ಇದೆ. ಬೀದರ್‍ನಲ್ಲಿ ಕೇವಲ 7ರಷ್ಟು ಹಸಿರು ಪ್ರದೇಶವಿದೆ.
ನಾನು ಸಚಿವನಾದಾಗಿನಿಂದ ಈ ವರ್ಷ ನೆಡುತ್ತಿರುವ 10ಲಕ್ಷ ಸಸಿಗಳು ಸೇರಿದಂತೆ ಸುಮಾರು 43 ಲಕ್ಷ ಸಸಿಗಳನ್ನು ಬೀದರ್ ಜಿಲ್ಲೆಯಲ್ಲಿ ನೆಡಲಾಗಿದೆ. ಪರಿಸರ ಪ್ರಕೃತಿ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಭೂಮಿಯ ಮೇಲೆ ಜೀವ ಪಡೆದಿರುವ ಎಲ್ಲ ಜೀವಿಗಳಿಗೂ ನಮ್ಮಂತೆ ಬದುಕುವ ಹಕ್ಕು ಇದೆ. ವೃಕ್ಷಗಳನ್ನು ನಾವು ರಕ್ಷಿಸಿದರೆ. ನಮ್ಮನ್ನು ವೃಕ್ಷಗಳು ರಕ್ಷಿಸುತ್ತವೆ ಎಂದು ತಿಳಿಸಿದರು.
ಪಟ್ಟಣದ ವಿವಿಧೆಡೆ, ರಸ್ತೆ ಅಕ್ಕಪಕ್ಕ ಸುಮಾರು ವರ್ಷಗಳಿಂದ ಸೂರಿಲ್ಲದೆ ಬದುಕುತ್ತಿದ್ದ ಜನರಿಗೆ ಸೂರು ಕಲ್ಪಿಸಲು ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ರಾಜ್ಯ ಸರಕಾರ 5.75 ಲಕ್ಷ ರೂಪಾಯಿ ವೆಚ್ಚದಲ್ಲಿ 400 ಮನೆಗಳನ್ನು ನಿರ್ಮಿಸಲಾಗಿದೆ. ಅನ್ನ, ವಸ್ತ್ರ, ವಸತಿ ನಾಗರಿಕರಿಗೆ ಕೊಡುವುದು ಸರಕಾರದ ಆದ್ಯ ಕರ್ತವ್ಯ. ನಮ್ಮ ಸರಕಾರ ಈ ಕಾರ್ಯವನ್ನು ಪರಿಪೂರ್ಣವಾಗಿ ಮಾಡುತ್ತಿದೆ. ನಾನು ಪೌರಾಡಳಿತ ಸಚಿವನಾಗಿದ್ದಾಗ ಸುಮಾರು 25,000 ಮನೆಗಳನ್ನು ತಾಲೂಕಿನ ಅರ್ಹ ಫಲಾನುಭವಿಗಳಿಗೆ ನೀಡಿದ್ದೇನೆ ಎಂದು ತಿಳಿಸಿದರು.
ಸುಮಾರು 70 ಅಲೆಮಾರಿ ಕುಟುಂಬ ಸದಸ್ಯರಿಗೆ ಮನೆಗಳ ಹಕ್ಕುಪತ್ರಗಳನ್ನು ನೋಂದಣಿ ಮಾಡಿಕೊಂಡು ವಿತರಿಸಲಾಯಿತು. ಈ ಮನೆಗಳನ್ನು 15 ವರ್ಷದವರೆಗೆ ಮತ್ತೊಬ್ಬರಿಗೆ ವರ್ಗಾಯಿಸಲು ಬರುವುದಿಲ್ಲ. ಅಲೆಮಾರಿ ಕುಟುಂಬದವರು ತಮ್ಮ ಮಕ್ಕಳಿಗೆ ಶಾಲೆಗೆ ಕಳಿಸಿ ಉತ್ತಮ ಶಿಕ್ಷಣ ಕೊಡಿಸಬೇಕು. ಭಿಕ್ಷಾಟನೆ ನಿಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪ್ರದೀಪ್ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ, ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ಪುರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ವಿಜಯಕುಮಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಮೇಶ್ ಕಣಕಟ್ಟಿ, ಮುಜೀಬ್, ವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಮೋರೆ, ಪ್ರಭುಲಿಂಗ ಭೊಯ್ಯಾರ ಸೇರಿದಂತೆ ಇತರರು ಇದ್ದರು.