ಸಂಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದಾಗ ಮಾನವ ಜನ್ಮ ಸಾರ್ಥಕ

ಕರಜಗಿ:ಅ.2:ಸಂಕಷ್ಟದಲ್ಲಿ ಇರುವವರು ನೊಂದವರು ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಿದಾಗ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ ಹೇಳಿದರು ಅವರು ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಭೀಮಾ ನದಿ ಪ್ರವಾಹದಿಂದ ಸಂಕಷ್ಟಕೀಡಾದ ಗ್ರಾಮದ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ವತಿಯಿಂದ ಪರಿಹಾರ ಸಾಮಗ್ರಿ ಕಿಟ್‍ಗಳನ್ನು ವಿತರಿಸಿ ಮಾತನಾಡಿ ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಸುರಿದ ಅಪಾರ ಪ್ರಮಾಣದ ಮಳೆಯಿಂದ ಉಜನಿ ವೀರಭಟ್ಕರ ಜಲಾಶಯ ಹಾಗೂ ಶೀನಾ ನದಿಯಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿರುವುದರಿಂದ ಭೀಮಾ ನದಿಗೆ ಪ್ರವಾಹ ಬಂದು ಮಣ್ಣೂರ ಗ್ರಾಮದ ಕೆಲ ಬಡಾವಣೆಗಳಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.ಇಂತಹ ಸಂದರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ವತಿಯಿಂದ ಮಾತೋಶ್ರೀ ದ್ರಾಕ್ಷಾಯಣಿ ಅಮ್ಮನವರು ಸಹಾಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ ಬಾಕೆ ವಿಶ್ವನಾಥ ರೇವೂರ ರಾಜಕುಮಾರ ಜಿಡ್ಡಗಿ ಗ್ರಾ ಪಂ ಅಧ್ಯಕ್ಷ ಬಿ ರಾಜು ಸಾಯಬಣ್ಣ ಬೆನಕನಹಳ್ಳಿ ಉಪಾಧ್ಯಕ್ಷೆ ರಾಜೇಶ್ವರಿ ಭತಗುಣಕಿ ಮಹೇಶಚಂದ್ರ ಪಾಟೀಲ ಜಯಶ್ರೀ ಪ್ರಮೋದ, ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ನ ರಾಹುಲ ರಾಠೋಡ ವೈಶಾಲಿ ನಾಟಿಕಾರ,
ವೈದ್ಯಾಧಿಕಾರಿ ಡಾ !! ಸಂಜೀವಿನಿ ಜಾಧವ ಗ್ರಾ ಪಂ ಸದಸ್ಯರಾದ ಶಿವಪ್ಪ ಕರೂಟಿ ದೇವಪ್ಪ ಲಾಳಸಂಗಿ ಹಣಮಂತ ನಾವಾಡಿ ಲಾಡ್ಲೇಮಶಾಕ ಗೌರ ಸಂತೋಷ ಅವಟೆ ಶ್ರೀಶೈಲ ಚಾಂಬರ ಮುಖಂಡರಾದ ಚಂದು ಹಿರೇಕುರುಬರ ಸಾ ಸಿ ಬೆನಕನಹಳ್ಳಿ ಮಲಕಣ್ಣ ಹೊಸೂರಕರ ಪುಂಡಲೀಕ ಕಟ್ಟಿ ಉಮೇಶ ಭಾಸಗಿ ಶರಣಪ್ಪ ಸುತಾರ ಮಹಾದೇವ ಪ್ಯಾಟಿ ಶರಣು ತಾರಾಪೂರ ಮಲ್ಲಿಕಾರ್ಜುನ ಭತಗುಣಕಿ ಸಚಿನ ಕೊಪ್ಪಾ ಚಂದ್ರಕಾಂತ ದೈತನ ಕಾಶೀನಾಥ ಜೇವೂರ ಬಸವರಾಜ ಜನ್ನಾ ಶಿವಾನಂದ ಕಲಶೆಟ್ಟಿ ಹುಸೇನಬಾಷಾ ಬಡೆಘರ ಗುಳುರಾಯ ಬುರುಡ ಸುಭಾಷ ಚಿಕ್ಕಮಣೂರ ಶಾವರಸಿದ್ದ ಜಮಾದಾರ ಯಲ್ಲಾಲಿಂಗ ಬಂಡಗಾರ ಮಾಳಪ್ಪ ಸೇಜುಳೆ ಸಿದ್ದಾರಾಮ ಬದನಿಕಾಯಿ ಸಾತಪ್ಪ ಹಂಜಗಿ ಸಂತೋಷ ಜಮಾದಾರ ಆಶಾ ಕಾರ್ಯಕರ್ತೆಯರಾದ ಭೌರಮ್ಮ ಲೋಹಾರ ಕವಿತಾ ಹಡಪದ ಸುಜಾತಾ ಪತ್ತಾರ ಗೌರಾಬಾಯಿ ಮೋಸಲಗಿ ಮಾಯವ್ವ ಪೂಜಾರಿ ಶಬಾನಾ ಕೊರಬು ಸರೋಜಾ ಕ್ಷತ್ರಿ ಇತರರಿದ್ದರು