ಔರಾದ್ :ಅ.17: ದೇಶಪ್ರೇಮ, ನಾಡ ಪ್ರೀತಿಯಿಂದ ಸದಾ ನಮ್ಮನ್ನು ಜಾಗೃತಗೊಳಿಸುವ ಹುಯಿಲಗೋಳ ನಾರಾಯಣರಾಯರ ಅಪೂರ್ವ ಚಿಂತನೆಗಳು ಐಕ್ಯತೆಯ ದಿವ್ಯ ಮಂತ್ರಗಳಾಗಿವೆ ಎಂದು ಹಿರಿಯ ವೈದ್ಯ ಡಾ. ವೈಜಿನಾಥ ಬುಟ್ಟೆ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಹುಯಿಲಗೋಳ ನಾರಾಯಣರಾಯರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಕವನದ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಅವರ ದೇಶಭಕ್ತಿ ಸಂಬಂಧಿತ ಕವನಗಳು, ನಾಟಕಗಳು, ಕೃತಿಗಳು ಇಂದಿಗೂ ಪ್ರಸ್ತುತವೆನಿಸಿವೆ ಎಂದರು.
ಸಾಂಸ್ಕøತಿಕ ಚಿಂತಕ ಜಗನ್ನಾಥ ಮೂಲಗೆ ಹುಯಿಲಗೋಳ ನಾರಾಯಣರಾಯರ ಕುರಿತು ಮಾತನಾಡಿದರು. ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ, ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಟಂಕಸಾಲೆ, ಜಗನ್ನಾಥ ದೇಶಮುಖ, ಸಂದೀಪ ಪಾಟೀಲ್, ಅಮರಸ್ವಾಮಿ ಸ್ಥಾವರಮಠ, ಗಜಾನನ ಮಳ್ಳಾ, ಸಂಜೀವ ಶಟಕಾರ, ಚಂದ್ರಕಾಂತ ಘುಳೆ, ಶಿವಕುಮಾರ ಮಜಗೆ, ಕೈಲಾಸಪತಿ ಕೇದಾರೆ, ರಮೇಶ ಪಾಂಚಾಳ, ಶಿವಕುಮಾರ್ ಪಾಟೀಲ್, ಗೋವಿಂದ ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.






















