Home ಜಿಲ್ಲೆ ಕಲಬುರಗಿ ಕರಜಗಿ ಬಸ್ ನಿಲ್ದಾಣದ ಮುಂದೆ ಭರ್ಜರಿ ಕುರಿ ಸಂತೆ : ಟ್ರಾಫಿಕ್ ಸಮಸ್ಯೆಗೆ ಸಾರ್ವಜನಿಕರ ಆಕ್ರೋಶ

ಕರಜಗಿ ಬಸ್ ನಿಲ್ದಾಣದ ಮುಂದೆ ಭರ್ಜರಿ ಕುರಿ ಸಂತೆ : ಟ್ರಾಫಿಕ್ ಸಮಸ್ಯೆಗೆ ಸಾರ್ವಜನಿಕರ ಆಕ್ರೋಶ

ಕರಜಗಿ :ಮೇ.23:ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಪ್ರತಿ ಶನಿವಾರ ನಡೆಯುವ ಭರ್ಜರಿ ಕುರಿ ಸಂತೆಯಿಂದ ಬಸ್ ನಿಲ್ದಾಣದ ಬಳಿ ಭಾರೀ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ನೂರಾರು ಕುರಿಗಳ ಖರೀದಿ-ಮಾರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್‍ಗಳು ತಿರುಗಾಡಲು ಹಾಗೂ ನಿಲ್ಲಲು ಸ್ಥಳವಿಲ್ಲದಂತಾಗಿದೆ.
ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಕುರಿಗೆ ?50 ರಂತೆ ರಸೀದಿ ನೀಡಲಾಗುತ್ತಿದ್ದು, ಪ್ರತೀ ವಾರ ದೊಡ್ಡ ಮಟ್ಟದಲ್ಲಿ ವ್ಯಾಪಾರ ನಡೆಯುತ್ತಿದೆ. ಆದರೆ ಸಂತೆಗೆ ಆಗಮಿಸುವ ವಾಹನಗಳಿಗಾಗಿ ಸಮರ್ಪಕ ಪಾಕಿರ್ಂಗ್ ವ್ಯವಸ್ಥೆ ಮಾಡದೇ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ಸೊನ್ನ ಬ್ಯಾರೇಜ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಇಂಡಿ-ಗುಲ್ಬರ್ಗ ಮಾರ್ಗದ ಬಸ್‍ಗಳು ಕರಜಗಿ ಮಾರ್ಗವಾಗಿ ಸಂಚರಿಸುತ್ತಿವೆ. ಇದರಿಂದ ಬಸ್ ನಿಲ್ದಾಣದ ಬಳಿ ಜನಸಂದಣಿ ಮತ್ತು ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ.
ಶಾಲಾ ಮಕ್ಕಳು, ಮಹಿಳೆಯರು ಹಾಗೂ ಪ್ರಯಾಣಿಕರು ರಸ್ತೆ ದಾಟಲು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಅಪಘಾತ ಸಂಭವಿಸುವ ಭೀತಿ ಎದುರಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸಿ, ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


  • ಕರಜಗಿಯಲ್ಲಿ ಪ್ರತಿ ಶನಿವಾರ ಭರ್ಜರಿ ಕುರಿ ಸಂತೆ
  • ಪ್ರತಿ ಕುರಿಗೆ ?50 ರಸೀದಿ ವಸೂಲಿ ಮಾಡುತ್ತಿರುವ ಗ್ರಾಮ ಪಂಚಾಯಿತಿ
  • ನೂರಾರು ಕುರಿಗಳ ಖರೀದಿ-ಮಾರಾಟದಿಂದ ಟ್ರಾಫಿಕ್ ಸಮಸ್ಯೆ
    *ಬಸ್‍ಗಳಿಗೆ ತಿರುಗಾಡಲು, ನಿಲ್ಲಲು ಜಾಗವಿಲ್ಲ
  • ಸೊನ್ನ ಬ್ಯಾರೇಜ್ ಕಾಮಗಾರಿಯಿಂದ ಇಂಡಿ-ಗುಲ್ಬರ್ಗ ಬಸ್ ಸಂಚಾರ ಹೆಚ್ಚಳ
  • ಪಾಕಿರ್ಂಗ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರ ಪರದಾಟ
    *ಸಂತೆ ಸ್ಥಳಾಂತರಕ್ಕೆ ಗ್ರಾಮಸ್ಥರ ಒತ್ತಾಯ