ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ


ಬಾದಾಮಿ,ಮೇ.೨೧: ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಸಾಮಾಜದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು” ಎಂದು ಮಾಜಿ ಜಿ.ಪಂ.ಸದಸ್ಯ ಎಂ.ಬಿ.ಹAಗರಗಿ ಹೇಳಿದರು.


ತಾಲೂಕಿನ ದತ್ತು ಗ್ರಾಮ ಮಹಾಕೂಟದಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾದಾಮಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡ ೨೦೨೪-೨೫ ನೇ ಸಾಲಿನ ವಾರ್ಷಿಕ ವಿಶೇ?À ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು “ವಿದ್ಯಾರ್ಥಿಗಳು ಈ ಶಿಬಿರದಿಂದ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸಮಾಜವನ್ನು ಮುನ್ನಡೆಸುವ ಪ್ರಜೆಗಳಾಗಬೇಕು ” ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.


ಕಾರ್ಯಕ್ರಮದಲ್ಲಿ ಮತ್ತೋರ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪಿ.ಎ.ಹಿರೇಮಠರವರು “ವಿದ್ಯಾರ್ಥಿಗಳು ಸಮರ್ಪಣಾ ಭಾವವನ್ನು ಬೆಳೆಸಿಕೊಳ್ಳಲು ಇಂತಹ ಶಿಬಿರಗಳು ಅಗತ್ಯವಾಗಿವೆ ” ಎಂದು ಹೇಳಿದರು.


ಪ್ರಾಚಾರ್ಯ ಡಾ.ಎಂ.ಎನ್.ಸಿದ್ಧಲಿAಗಪ್ಪನವರ ಅಧ್ಯಕ್ಷತೆ ವಹಿಸಿ ಮಾತನಾಡಿ “ದೈವೀಕ್ಷೇತ್ರವಾಗಿರುವ ಮಹಾಕೂಟದ ಸುಂದರ ಪ್ರಕೃತಿಯ ಮಧ್ಯೆ ನಡೆಯುತ್ತಿರುವ ಈ ವಿಶೇ?À ಶಿಬಿರವು ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಯೋಗ್ಯವಾದ ಸ್ಥಳವಾಗಿದೆ. ಏಳು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ನಿಮ್ಮ ವ್ಯಕ್ತಿತ್ವವನ್ನು ರೂಪಿಸಬಲ್ಲ ಹತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಎಲ್ಲ ವಿದ್ಯಾರ್ಥಿಗಳು ಇವುಗಳಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಮಾರ್ಗದರ್ಶನ ಮಾಡಿದರು. ಎನ್.ಎಸ್.ಎಸ್.ಸಂಯೋಜನಾಧಿಕಾರಿ ಪ್ರೊ.ಗೋವರ್ಧನ ಪಿ.ಬಿ. ರವರು ಸ್ವಾಗತಿಸಿದರು. ಪ್ರೊ.ಜಯಪ್ರಕಾಶ ಬೀಳಗಿ, ಡಾ.ಬಾಬುರಾಯಣ್ಣ ಧನ್ನೂರ, ಪ್ರೊ.ಕವಿತಾ ಜಂಗವಾಡ, ಆರ್.ವಿ.ಸಂಕನಗೌಡರ, ಡಾ.ವಿ.ಬಿ.ಸಣ್ಣಸಕ್ಕರಗೌಡರ, ಜಗದೀಶ ಹಳ್ಳೂರ, ರಾಜೇಶ ಚಲವಾದಿ ಮತ್ತಿತರರು ಉಪಸ್ಥಿತರಿದ್ದರು. ಸಹಶಿಬಿರಾಧಿಕಾರಿ ಪ್ರೊ.ಚಂದ್ರಶೇಖರ ಹೆಗಡೆ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೊ. ಇರ್ಫಾನ್ ಬಾ?Á ವಂದಿಸಿದರು.