ಬೆಂಕಿಗೆ ಆಹುತಿಯಾದ ಮನೆ

ಜೇವರ್ಗಿ :ಫೆ.1:ತಾಲೂಕಿನ ಕಾಸರಭೋಸಗ ಗ್ರಾಮದ ರೈತರಾದ ಬಲಭೀಮ ಸಿದ್ದಪ್ಪ ಚೌಡಾಪುರ ರವರ
ಮನೆಗೆ ತಡರಾತ್ರಿ ಭೇಟಿ ನೀಡಿ ಸಾಂತ್ವನ ಹೇಳಿ ಮೇಲಾಧಿಕಾರಿಗಳಿಗೆ
ಮಾತನಾಡಿ ಸೂಕ್ತ ನೆರವಿಗೆ ಆಗ್ರಹಿಸಿ
ಸಂತ್ರಸ್ತ ಕುಟುಂಬದ ಜೊತೆ ನಿಂತ ಕ್ಷೇತ್ರದ ನಾಯಕರು
ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ ರವರು..

ಬೆಂಕಿಗೆ ಆಹುತಿಯಾಗಿ ಅಪಾರ ಹಾನಿ ಸಂಭವಿಸಿದ ಸ್ಥಳಕ್ಕೆ ಭೇಟಿನೀಡಿ ಕುಟುಂಬಕ್ಕೆ ನೈತಿಕ ಬಲ ತುಂಬಿದ ನಾಯಕರ ಜೊತೆಗೆ ಹಿರಿಯರಾದ ಹಳ್ಳೆಪ್ಪ ಆಚಾರ್ಯ ಜೋಷಿ,
ಸುರೇಶ ಪಾಟೀಲ ನೇದಲಗಿ, ತಿಪ್ಪಣ್ಣ ರಾಠೋಡ,ಸಾಗರ ಬಡಿಗೇರ,ಭಗವಂತರಾಯ ನಾರಾಯಣಪುರ,ಹುಲ್ಲೇಶ ಮದರಿ,ಈರಣ್ಣ ಚೌಡಾಪುರ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು