
ಕಲಬುರಗಿ,ಜ.20-ಮನೆ ಬೀಗ ಮುರಿದು 9.22 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ನಡೆದಿದೆ.
ನಗರದ ಸಿದ್ಧಾರ್ಥ ಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಚಂದ್ರಶೇಖರ್ ಅವರ ಮನೆ ಬೀಗ ಮುರಿದು ಕಳ್ಳರು 1 ಲಕ್ಷ ರೂ.ಮೌಲ್ಯದ 25 ಗ್ರಾಂ.ಬಂಗಾರದ 20 ಕಿವಿಯೋಲೆಗಳು, 1.20 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ ಲಾಂಗ್ ಚೈನ್, 1.80 ಲಕ್ಷ ರೂ.ಮೌಲ್ಯದ ತಲಾ 15 ಗ್ರಾಂ.ಬಂಗಾರದ 3 ಲಕ್ಷ್ಮೀ ಸರ, 16 ಸಾವಿರ ರೂ.ಮೌಲ್ಯದ 4 ಗ್ರಾಂ.ಬಂಗಾರದ ಪೆಂಡೆಂಟ್, 8 ಸಾವಿರ ರೂ.ಮೌಲ್ಯದ 20 ಗ್ರಾಂ.ಬಂಗಾರದ ರಿಂಗ್, 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಬ್ರಾಸ್‍ಲೈಟ್, 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಎರಡು ಉಂಗುರ, 80 ಸಾವಿರ ರೂ.ಮೌಲ್ಯದ 20 ಗ್ರಾಂ.ಬಂಗಾರದ ಅವಲಕ್ಕಿ ಸರ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಚೈನ್, 88 ಸಾವಿರ ರೂ.ಮೌಲ್ಯದ 22 ಗ್ರಾಂ.ಬಂಗಾರದ ಎರಡು ಬಳೆ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ರೋಸ್ ಕಟ್‍ರಿಂಗ್ ಸೇರಿ 7.92 ಲಕ್ಷ ರೂ.ಮೌಲ್ಯದ 198 ಗ್ರಾಂ.ಬಂಗಾರದ ಆಭರಣ,50 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಡೈಮಂಡ್ ತಾಳಿ, 80 ಸಾವಿರ ರೂ.ನಗದು ಸೇರಿ 9.22 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಇವರು ತಮ್ಮ ಸಹೋದರಿ ಡಾ.ಅನ್ನಪೂರ್ಣ ಅವರು ಮೃತಪಟ್ಟಿದ್ದರಿಂದ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿ ಮೃತದೇಹವನ್ನು ಸಹೋದರಿಯ ಗಂಡನ ಊರಾದ ಬೆಳಗಾವಿಗೆ ತರಲು ಹೋಗಿದ್ದ ವೇಳೆ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.






















