ಮನೆ ಬೀಗ ಮುರಿದು 41 ಸಾವಿರ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ನ.4-ಮನೆ ಬೀಗ ಮುರಿದು 41 ಸಾವಿರ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಇಲ್ಲಿನ ಲಕ್ಷ್ಮೀನಾರಾಯಣ ನಗರದಲ್ಲಿ ನಡೆದಿದೆ.
ರೈಲ್ವೆ ಇಲಾಖೆಯಲ್ಲಿ ಹೆಲ್ತ್ ಇನ್ಸಪೆಕ್ಟರ್ ಆಗಿರುವ ಜಿತೇಂದ್ರಕುಮಾರ ಎಂಬುವವರ ಮನೆ ಬೀಗ ಮುರಿದು ಕಳ್ಳರು 15 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಚೈನ, 15 ಸಾವಿರ ರೂ.ಮೌಲ್ಯದ ತಲಾ 5 ಗ್ರಾಂ.ಬಂಗಾರದ 2 ಸುತ್ತುಂಗುರ, 1 ಸಾವಿರ ರೂ.ಮೌಲ್ಯದ 10 ಗ್ರಾಂ.ಬೆಳ್ಳಿಯ ಸುತ್ತುಂಗುರ, 10 ಸಾವಿರ ರೂ.ನಗದು ಸೇರಿ 41 ಸಾವಿರ ರೂ.ಮೌಲ್ಯದ ನಗನಾಣ್ಯವನ್ನು ಕಳವು ಮಾಡಿದ್ದಾರೆ.
ಜಿತೇಂದ್ರಕುಮಾರ ಅವರು ಮನೆಗೆ ಬೀಗ ಹಾಕಿಕೊಂಡು ಉತ್ತರ ಪ್ರದೇಶದ ಅಲಿಘಡದಲ್ಲಿರುವ ಪತ್ನಿ, ಮಕ್ಕಳನ್ನು ನೋಡಿಕೊಂಡು ಬರಲೆಂದು ಹೋದ ವೇಳೆ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.