ಸಿಲಿಂಡರ್ ಸೋರಿಕೆಯಿಂದ ಸ್ಪೋಟ್ ಮನೆ ಸಂಪೂರ್ಣ ಜಖಂ

ತಾಳಿಕೋಟೆ : ನ.28: ಮನೆಯಲ್ಲಿಯ ಸಿಲಿಂಡರ್ ಸೋರಿಕೆಯಿಂದ ಸಂಬವಿಸಿದ ಸ್ಪೋಟದಿಂದ ಮನೆಯು ಸಂಪೂರ್ಣ ಜಖಂ ಗೊಳ್ಳುವದರೊಂದಿಗೆ ಲಕ್ಷ 3 ಲಕ್ಷ 80 ಸಾವಿರ ಹಣ ಸೇರಿ ದಿನಬಳಿಕೆ ವಸ್ತುಗಳು ಅಲ್ಲದೇ ಕೆಲವು ಪ್ರಮುಖ ದಾಖಲೆಗಳು ಸುಟ್ಟು ಬಸ್ಮವಾದ ಘಟನೆ ಗುರುವಾರ ಮದ್ಯಾಹ್ನ 1 ಗಂಟೆಯ ಸುಮಾರಿಗೆ ತಾಳಿಕೋಟೆ ಪಟ್ಟಣದಲ್ಲಿ ಸಂಬವಿಸಿದೆ.
ಗಣೇಶ ನಗರ ಬಡಾವಣೆಯ ರವಿಸೋಮರಡ್ಡಿ ಕೊಳೂರ ಎಂಬವರ ಮನೆಯೇ ಸಿಲಿಂಡರ್ ಸೋರಿಕೆಯಿಂದ ಸ್ಪೋಟಗೊಂಡಿದ್ದು ರವಿಸೋಮರಡ್ಡಿ ಕೊಳೂರ ಅವರು ಕಳೆದ 20 ವರ್ಷಗಳಿಂದ ತಾಳಿಕೋಟೆ ನಗರದ ಗಣೇಶ ನಗರ ಬಡಾವಣೆಯಲ್ಲಿ ಸ್ವಂತ ಮನೆ ಕಟ್ಟಿಸಿಕೊಂಡು ವಾಸವಾಗಿದ್ದು ಅವರು ಕಲಕೇರಿ ಗ್ರಾಮದ ಹೆಸ್ಕಾ ಕಚೇರಿಯಲ್ಲಿ ಸರ್ಕಾರಿ ನೌಕರರಾಗಿ ಕೆಲಸ ಮಾಡುತ್ತಿದ್ದು ಪತ್ನಿಯೂ ಕೂಡಾ ತಾಳಿಕೋಟೆ ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ಗುರುವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮನೆಗೆ ಬೀಗ ಹಾಕಿ ರವಿಸೋಮರಡ್ಡಿ ಹೆಸ್ಕಾಂ ಕೆಲಸಕ್ಕೆ ಮತ್ತು ಪತ್ನಿ ಶಿಕ್ಷಕಿ ಮಕ್ಕಳೊಂದಿಗೆ ಶಾಲೆಗೆ ತೆರಳಿದ್ದರಿಂದ ಮನೆಯಲ್ಲಿಯ ಸಿಲಿಂಡರ್ ಸೋರಿಕೆಗೊಂಡಿದೆ ಮದ್ಯಾಹ್ನ 1 ಗಂಟೆಯ ಸುಮಾರಿಗೆ ಏಕಾ ಏಕಾ ಆಕಸ್ಮೀಕವಾಗಿ ಸ್ಪೋಟಗೊಂಡಿದ್ದರಿಂದ ಮನೆಯ ಕಿಟಕಿ ಗಾಜು ಬಾಗಿಲು ಒಡೆದು ಚೂರ ಚೂರಗೊಂಡಿದ್ದು ಮನೆಯ ಸುತ್ತಲಿನ ಗೋಡೆಗಳು ಕುಸಿದು ಬಿದ್ದಿದ್ದು ಅಲ್ಲದೇ ಮನೆಯ ಮೇಲ್ಚಾವಣೆಯೂ ಕೂಡಾ ಸಂಪೂರ್ಣ ಕಿತ್ತು ಪಕ್ಕಕ್ಕೆ ಸರಿದಿದೆ ಸ್ಪೋಟತೆಯ ತೀವ್ರತೆಯ ಶಬ್ದವನ್ನು ಅರೀತ ಅಕ್ಕಪಕ್ಕದ ಮನೆಯವರು ಹೊರಗಡೆ ಬಂದು ನೋಡುವಷ್ಟರಲ್ಲಿಯೇ ದಟ್ಟವಾದ ಹೋಗೆ ಮನೆಯಿಂದ ಚಿಮ್ಮಲಾರಂಬಿಸಿದ್ದರಿಂದ ಕೂಡಲೇ ಅಗ್ನಿ ಶಾಮಕ ಠಾಣೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಮುಂದಾಗಿದ್ದಾರೆ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಗಳು ವಾಹನದೊಂದಿಗೆ ಆಗಮಿಸುವದರೊಂದಿಗೆ ಮನೆಯಲ್ಲಿ ಆವರಿಸಿದ್ದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರೂ ಕೂಡಾ ಅಷ್ಟರೊಳಗೆ ದಿನಬಳಿಕೆ ವಸ್ತುಗಳು ಸೇರಿದಂತೆ ಕಾಟಾದ ಲಾಕರ್‍ನಲ್ಲಿ ಇಟ್ಟಿದ್ದ 3.80 ಲಕ್ಷ ಹಣ ಸೇರಿ ಕೆಲವು ಸ್ವಂತ ಆಸ್ತಿಗೆ ಸಂಬಂದಿಸಿದ ಪ್ರಮುಖ ದಾಖಲೆಗಳು ಸುಟ್ಟು ಬಸ್ಮವಾಗಿ ಹೋಗಿವೆ.
ಸಿಲಿಂಡರ್ ಸೋರಿಕೆಯಿಂದ ಸಂಬವಿಸಿದ ಸ್ಪೋಟತೆಗೆ ಆ ಸಮಯದಲ್ಲಿ ಗಣೇಶ ನಗರ ಬಡಾವಣೆಯಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆ ನಡೆಸಿತ್ತು ಸಿಲಿಂಡರ್ ಸೋರಿಕೆಯ ಸಮಯದಲ್ಲಿ ವಿದ್ಯುತ್ ಸ್ಪಷ್ಟಕೂಡಿರಬಹುದು ಇದರಿಂದ ಸ್ಟೊಟತೆಗೊಂಡಿರಬಹುದು ಎಂದು ಬಡಾವಣೆಯ ನಾಗರಿಕರು ಶಂಕೆ ವ್ಯಕ್ತಪಡಿಸಿದ್ದು ಇನ್ನೂ ಚಳಿಗಾಲವಿರುವದರಿಂದ ಮನೆಯ ಕಿಡಕಿಗಳನ್ನು ಸಂಪೂರ್ಣ ಮುಚ್ಚಿದ್ದರಿಂದ ಮನೆಯ ಬಾಗಿಲೂಕೂಡಾ ಮುಚ್ಚಿದ್ದರಿಂದ ಸಿಲಿಂಡರ್ ಸೋರಿಕೆ ಹೊರಗಡೆ ಹೋಗದೇ ಈ ಸ್ಪೋಟತೆಗೆ ಕಾರಣವಾಗಿದೆ ಎನ್ನಲಾಗುತ್ತಿದ್ದು ಆದರೆ ಈ ಸಿಲಿಂಡರ್ ಸೋರಿಕೆಯಿಂದ ಸಂಬವಿಸಿದ ಸ್ಪೋಟತೆಗೆ ಕಾರಣವೇನೆಂಬುದು ಅಧಿಕಾರಿಗಳ ಪರಿಸೀಲನೆ ಬಳಿಕ ತನಿಖೆಯಿಂದ ತಿಳಿಯಬೇಕಾಗಿದೆ.
ಅಗ್ನಿ ಶಾಮಕ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ
ಸಿಲಿಂಡರ್ ಸೋರಿಕೆಯಿಂದ ಸಂಬವಿಸಿದ ಸ್ಟೋತೆಯ ಸುದ್ದಿ ಮುಟ್ಟಿದ ಕೆಲವೇ ಸಮಯದಲ್ಲಿ ದಾವಿಸಿ ಬಂದ ಅಗ್ನಿ ಶಾಮಕ ಸಿಬ್ಬಂದಿಗಳು ಮನೆಯಲ್ಲಿ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಪಕ್ಕದ ಮನೆಗಳಿಗೆ ಚಾಚುವ ಮುಂಚೆಯೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರಿಂದ ಮುಂದೆ ಆಗಬಹುದಾದ ದೊಡ್ಡ ಅನಾಹುತವು ತಪ್ಪಿದಂತಾಗಿದೆ ಸಿಲಿಂಡರ್ ಸೋರಿಕೆಯಿಂದ ಸ್ಟೋಟತೆಗೊಂಡ ಮನೆಯಲ್ಲಿಯೇ ಇನ್ನೂ ಒಂದು ಸಿಲಿಂಡರ್ ತುಂಬಿದ್ದು ಹಾಗೇ ಇತ್ತು ಬೆಂಕಿಯ ಕೆನ್ನಾಲಿಗೆಯಿಂದ ಆ ಸಿಲಿಂಡರ್‍ಗೆ ಹೊತ್ತಿ ಸ್ಟೊಟತೆಗೊಂಡಿದ್ದರೆ ಅಕ್ಕ ಪಕ್ಕದ ಸುಮಾರು ಹತ್ತಾರು ಮನೆಗಳಿಗೆ ಹಾನಿಗೀಡಾಗುತ್ತಿದ್ದವು ಅಗ್ನಿ ಶಾಮಕ ಸಿಬ್ಬಂದಿಗಳ ತೀವ್ರತೆಯ ಕಾರ್ಯಚರಣೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಸ್ಟೊಟತೆಯಿಂದ ಆತಂಕಗೊಂಡ ಜನ
ಪಟ್ಟಣದ ಗಣೇಶ ನಗರ ಬಡಾವಣೆಯಲ್ಲಿ ಸಿಲಿಂಡರ್ ಸ್ಟೊಟಗೊಂಡಿದೆ ಎಂಬ ಸುದ್ದಿಯು ಪಟ್ಟಣದ ತುಂಬೆಲ್ಲಾ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ತಂಡೋಪ ತಂಡವಾಗಿ ಆಗಮಿಸಿದ ಜನರು ಜಖಂಗೊಂಡಿದ್ದ ಮನೆಯನ್ನು ವಿಕ್ಷೀಸಿದರಲ್ಲದೇ ಒಬ್ಬರಿಗೊಬ್ಬರು ಸಿಲಿಂಡರ್ ದಿಂದ ಆಗುವ ಅನಾಹುತ ಕುರಿತು ಮಾತನಾಡಿಕೊಳ್ಳುವದರೊಂದಿಗೆ ಸಿಲಿಂಡರ್ ಉಪಯೋಗಿಸಿದ ನಂತರ ಸಂಪೂರ್ಣ ಬಂದ್ ಮಾಡಿದ್ದರ ಬಗ್ಗೆ ಏಚ್ಚರವಹಿಸಿಕೊಳ್ಳಬೇಕೆಂಬ ಮಾತುಗಳು ಸಹ ಕೇಳಿಬಂದವು.
ಸುಮಾರು 60 ಲಕ್ಷಕ್ಕೂ ಅಧಿಕ ಹಾನಿ

ಸಿಲಿಂಡರ್ ಸೋರಿಕೆಯಿಂದ ಸಂಬವಿಸಿದ ಸ್ಟೋಟತೆಗೆ ಸಂಬಂದಿಸಿದ ಸಂಪೂರ್ಣ ಮನೆಯೂ ಕೂಡಾ ಜಖಂ ಗೊಂಡಿದ್ದರಿಂದ ಹಣ ಸೇರಿದಂತೆ ಪೀಠೋಪಕರಣಗಳು ಬಟ್ಟೆ ದಿನಬಳಿಕೆ ವಸ್ತುಗಳು ಸೇರಿ ಸುಮಾರು 60 ಲಕ್ಷಕ್ಕೂ ಅಧಿಕ ಹಾನಿ ಸಂಬವಿಸಿದೆ ಎಂದು ಮನೆಯ ಮಾಲಿಕ ರವಿಸೋಮರಡ್ಡಿ ಕೊಳೂರ ಅವರು ಪತ್ರಿಕೆಗೆ ತಿಳಿಸಿದ್ದು ಅಧಿಕಾರಿಗಳ ಪರಿಶೀಲನೆಯ ಬಳಿಕ ಸ್ಪೋಟತೆಗೆ ಕಾರಣ ಮತ್ತು ಹಾನಿಯ ಕುರಿತು ಸಂಪೂರ್ಣ ಮಾಹಿತಿ ತಿಳಿದು ಬರಲಿದೆ.

ಸಿಲಿಂಡರ್ ಸ್ಪೋಟದ ಸುದ್ದಿ ಅರೀತು ವಾಹನದೊಂದಿಗೆ ಆಗಮಿಸಿ ಬೆಂಕಿಯ ಕೆನ್ನಾಲಿಗೆ ಪಕ್ಕದ ಮನೆಗಳಿಗೆ ತಗಲುವ ಮುಂಚೆ ಬೆಂಕಿ ನಂದಿಸಲು ಸಿಬ್ಬಂದಿಗಳೊಂದಿಗೆ ಯಶಸ್ವಿಯಾಗಿದ್ದೇವೆ ಸಿಲಿಂಡರ್ ಸೋರಿಕೆಗೊಂಡು ಈ ಸ್ಟೊಟಗೊಂಡಿದ್ದು ಕಂಡುಬಂದಿದೆ ಜೀವ ಹಾನಿಯಾವುದು ಸಂಬವಿಸಿಲ್ಲಾ ಮನೆಯಲ್ಲಿಯ ಸಿಲಿಂಡರ್ ಸೋರಿಕೆ ಸ್ಟೊಟತೆ ತೀವ್ರತೆ ಇರುವದರಿಂದ ಮನೆಯಲ್ಲಿಯ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ.
                                    ಚಿದಾನಂದ ವಾಲಿಕಾರ 
                                                                ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ