ಯಾದಗಿರಿ,ಆ.14 ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತಕುಂಟಾ ಗ್ರಾಮದಲ್ಲಿ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ವಾಸವಿದ್ದ ಮನೆ ಕುಸಿದು ಬಿದ್ದಿದೆ. ಗ್ರಾಮದಲ್ಲಿ ತಡರಾತ್ರಿ 1 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಪಕ್ಕದ ಮನೆಯಲ್ಲಿ ವಾಸವಿದ್ದ ವ್ಯಕ್ತಿಯೋರ್ವ g ಅವರ ಮೇಲೆ ಬಿದ್ದ ಕಲ್ಲು ಬಂಡೆಗಳನ್ನು ಸರಿಸಿ ಹೊರಗೆ ಎಳೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಅಶೋಕ್ ಮುತ್ಯಾಲ್ ಹಾಗೂ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಜನಕ್ಕೆ ಗಾಯಗಳಾಗಿವೆ. ದುರಂತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೆ ಹೆಚ್ಚು ಎಂದು ಗ್ರಾಮಸ್ಥರು ಸಾಂತ್ವನ ನೀಡಿದ್ದಾರೆ.























