ಧಾರಾಕಾರ ಮಳೆ ಮನೆ ಕುಸಿತ


ಲಕ್ಷೆ÷್ಮÃಶ್ವರ,ಆ.೭: ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಅನೇಕ ಕಡೆ ಹಳ್ಳ ಕೊಳ್ಳಗಳು ತುಂಬಿ ಹರಿದಿದ್ದು ಮತ್ತು ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.
ತಾಲೂಕಿನ ಹರದಗಟ್ಟಿಯಿಂದ ಮುನಿಯನತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರೈತ ಸಂಪರ್ಕ ರಸ್ತೆಯೂ ಹಳ್ಳದ ನೀರು ಹರಿದು ಕೊಚ್ಚಿಕೊಂಡು ಹೋಗಿದ್ದು ಈಗ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.


ಕೊಚ್ಚಿ ಹೋಗಿರುವ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹಾಗೂ ಈ ನಿಟ್ಟಿನಲ್ಲಿ ತಾಲೂಕ ಆಡಳಿತ ಕೊಡಲೇ ಹಾಳಾಗಿರುವ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆನಂದ ಲಮಾಣಿ ಮೊತ್ತಪ್ಪ ಲಮಾಣಿ ಶಂಕ್ರಪ್ಪ ಲಮಾಣಿ ಶಂಕರ ಲಮಾಣಿ ಶಂಕರ ಕಾರಬಾರಿ ರಾಜು ಮಾಳಗಿಮನಿ ಫಕ್ಕೀರಪ್ಪ ಮಾಳಗಿಮನಿ ಒತ್ತಾಯಿಸಿದ್ದಾರೆ.
ತಾಲೂಕಿನಾದ್ಯಂತ ರಾತ್ರಿ ಸುರಿದ ರಭಸದ ಮಳೆಗೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ೧೧ ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದ ಬಗ್ಗೆ ವರದಿಯಾಗಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ.
ಕಂದಾಯ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಟ್ಟಣದ ಹುಲಗೇರಿ ಬಣದಲ್ಲಿ ನಾಲ್ಕು ಮನೆಗಳು ಪೇಠಬಣದಲ್ಲಿ ಎರಡು ಮನೆಗಳು ಹಾಗೂ ತಾಲೂಕಿನ ಸುರ್ಣಗಿರಿಯಲ್ಲಿ ಒಂದು ಹರದಗಟ್ಟಿ ಗ್ರಾಮದಲ್ಲಿ ಎರಡು ಬಟ್ಟೂರ ಗ್ರಾಮದಲ್ಲಿ ಎರಡು ಹೀಗೆ ಒಟ್ಟು೧೧ ಮನೆಗಳು ಹಾನಿಗೀಡಾಗಿದೆ.