ಕೆಎಂಎಫ್ ಮಾದರಿಯಲ್ಲಿ ಹಾಪ್ಕಾಮ್ಸ್ ಇಂದಿನ ಅಗತ್ಯ

ಕಲಬುರಗಿ: ನ.20: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಾಗರ ಗಜ್ರೆ ಅವರಿಗೆ ಇತ್ತೀಚೆಗೆ ನಡೆದ ಸಿಯುಕೆ 9ನೇ ಘಟಿಕೋತ್ಸವದಲ್ಲಿ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.
ತೋಟಗಾರಿಕಾ ಉತ್ಪನ್ನಗಳಿಗೆ ನೈಜ ಮಾರುಕಟ್ಟೆ ದರ ಲಭಿಸುವ ಮೂಲಕ ರೈತರು ಆರ್ಥಿಕವಾಗಿ ಸಬಲತೆ ಸಾಧಿಸಬೇಕಾದರೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮಾದರಿಯಲ್ಲಿ ತೋಟಗಾರಿಕಾ ಉತ್ಪಾದಕರ ಸಹಕಾರಿ ಮಾರುಕಟ್ಟೆ ಮತ್ತು ಸಂ¸್ಕರಣಾ ಸಂಘವನ್ನು (ಹಾಪ್ಕಾಮ್ಸ್) ಸುಧಾರಣೆಗೆ ಒಳಪಡಿಸುವ ಅಗತ್ಯವಿದೆ ಎಂಬುದು ಗಜ್ರೆ ಅವರು ಮಂಡಿಸಿರುವ ಸಂಶೋಧನಾ ಅಧ್ಯಯನದ ಒಟ್ಟು ತಿರುಳಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ತರಕಾರಿ ಬೆಳೆಯುವ ರೈತರು ಪ್ರತಿಕೂಲ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಿಲುಕಿದ್ದಾರೆ. ಅವರು ತಮ್ಮ ಉತ್ಪನ್ನಗಳಿಗೆ ಚಿಲ್ಲರೆ ಮಾರುಕಟ್ಟೆ ಬೆಲೆಯಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಪಡೆಯುತ್ತಿದ್ದಾರೆ. ಮಧ್ಯವರ್ತಿಗಳು, ಹೆಚ್ಚಿನ ಸಾರಿಗೆ ವೆಚ್ಚಗಳು, ಸಂಗ್ರಹಣೆಯ ಕೊರತೆ ಮತ್ತು ಕಳಪೆ ಬೆಲೆ ಆವಿμÁ್ಕರ ಕಾರ್ಯವಿಧಾನ ಮತ್ತು ಬೆಲೆ ಮಾಹಿತಿಯು ಕೊರೆತೆ ಅವರ ಗಳಿಕೆ ಮತ್ತು ಆಯ್ಕೆಗಳನ್ನು ತೀವ್ರವಾಗಿ ಮಿತಿಗೊಳಿಸಿವೆ. ಈ ಸವಾಲುಗಳನ್ನು ನಿವಾರಿಸಲು ಮತ್ತು ತರಕಾರಿ ಬೆಳೆಯುವ ರೈತರಿಗೆ ನ್ಯಾಯಯುತ ಬೆಲೆಯನ್ನು ಒದಗಿಸಲು ನಿರ್ಮಿಸಬೇಕಾಗಿದೆ ಅಥವಾ ಅಂತಹುದೇ ಸಹಕಾರಿ ತೋಟಗಾರಿಕಾ ಸಂಘಟನೆಯನ್ನು ಸ್ಥಾಪಿಸುವ ಅವಶ್ಯಕತೆಯಿದೆ ಎಂದು ಗಜ್ರೆ ಹೇಳುತ್ತಾರೆ.
ಹಾಲಿನಂತೆ ತರಕಾರಿ ಬೆಲೆಯನ್ನು ಮೊದಲೇ ನಿರ್ಧರಿಸುವುದರಿಂದ ರೈತರಿಗೆ ಕೃಷಿಗೆ ಮುಂಚಿತವಾಗಿ ಬೆಲೆಯನ್ನು ತಿಳಿದುಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಈ ಮಾದರಿಯು ಬೆಲೆ ಸ್ಥಿರತೆ ಮತ್ತು ಗುಣಮಟ್ಟದ ತರಕಾರಿಗಳನ್ನು ಒದಗಿಸುವ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುತ್ತದೆ ಎಂದು ಸಾಗರ ಗಜ್ರೆ ಅವರು ಮಂಡಿಸಿರುವ ಡಾಕ್ಟರೇಟ್ ಸಂಶೋಧನಾ ಅಧ್ಯಯನವು ಹೇಳುತ್ತದೆ ಎಂದು ಗಜ್ರೆ ಅವರಿಗೆ ಮಾರ್ಗದರ್ಶನ ಮಾಡಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಸಹ ಪ್ರಾದ್ಯಾಪಕ ಡಾ. ಗಣಪತಿ ಬಿ ಸಿನ್ನೂರ ಪ್ರತಿಪಾದಿಸುತ್ತಾರೆ.
ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವು ಪ್ರಮುಖ ಸಮಸ್ಯೆಯಾಗಿದೆ. ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳ ನಡುವಿನ ತರಕಾರಿಗಳ ಬೆಲೆಯಲ್ಲಿನ ವ್ಯತ್ಯಾಸ ಮತ್ತು ವಿವಿಧ ಋತುಗಳಲ್ಲಿ ಬೆಲೆ ವ್ಯತ್ಯಾಸವನ್ನು ತಿಳೆಯಲು, ಏ.2020 ರಿಂದ ಏ.2022ರವರೆಗೆ ಕಲಬುರಗಿ ನಗರದಲ್ಲಿ 27 ಪ್ರಮುಖ ತರಕಾರಿಗಳ ಚಿಲ್ಲರೆ ಮತ್ತು ಸಗಟು ಬೆಲೆಯನ್ನು ಗಜ್ರೆ ಸಂಗ್ರಹಿಸಿದ್ದಾರೆ. ರೈತರು ಗ್ರಾಹಕರು ನೀಡುವ ಬೆಲೆಯ ಶೇ.50ಕ್ಕಿಂತ ಕಡಿಮೆ ಬೆಲೆ ಪಡೆಯುತ್ತಿದ್ದಾರೆ ಎಂದು ಸಾಗರ ಗಜ್ರೆ ಬೇಸರ ವ್ಯಕ್ತಪಡಿಸುತ್ತಾರೆ.
“ತರಕಾರಿ ಮಾರಾಟದಲ್ಲಿ ರೈತರ ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಅವರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು, 2023ರಲ್ಲಿ ಕಲಬುರಗಿ ಜಿಲ್ಲೆಯ 384 ರೈತರ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯು ತರಕಾರಿ ಮಾರಾಟದಲ್ಲಿ ರೈತರು ಎದುರಿಸುತ್ತಿರುವ ಅನೇಕ ಸವಾಲುಗಳನ್ನು ಬಹಿರಂಗಪಡಿಸಿದೆ. ಶೇ.80ಕ್ಕೂ ಹೆಚ್ಚು ರೈತರು ಶೀತಲ ಸಂಗ್ರಹಣೆ ಮತ್ತು ಕೊಯ್ಲು ನಂತರದ ಸೌಲಭ್ಯಗಳ ಕೊರತೆ ಗಂಭೀರ ಸಮಸ್ಯೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ ತರಕಾರಿ ಬೇಗ ಹಾಳಾಗುವುದರಿಂದ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸುಮಾರು ಶೇ.75ರಷ್ಟು ರೈತರು ಹೆಚ್ಚಿನ ಸಾರಿಗೆ ವೆಚ್ಚ ಮತ್ತು ಅಸಮರ್ಪಕ ಸಾರಿಗೆ ಸೌಲಬ್ಯಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅನೇಕರು ನಗರ ಮಾರುಕಟ್ಟೆಗಳನ್ನು ತಲುಪಲು ಬಾಡಿಗೆ ವಾಹನಗಳನ್ನು ಅವಲಂಬಿಸಿದ್ದಾರೆ, ಇದು ಅವರ ಲಾಭವನ್ನು ಕಡಿತಗೊಳಿಸುತ್ತದೆ. “ಎಪಿಎಂಸಿಯಲ್ಲಿ ಕಮಿಷನ್ ಏಜೆಂಟ್‍ಗಳು, ನಂತರ ಅವರು ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಹೀಗೆ ಅನೇಕ ಮಧ್ಯವರ್ತಿಗಳಿಂದಾಗಿ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಶೇ.85ಕ್ಕಿಂತ ಹೆಚ್ಚು ರೈತರು ಏಜೆಂಟರು ನಿರ್ದೇಶಿಸುವ ಬೆಲೆಯನ್ನು ಒಪ್ಪಿಕೊಳ್ಳಬೇಕಾಗಿರುವುದರಿಂದ ಅವರ ಚೌಕಾಶಿ ಶಕ್ತಿ ಕಡಿಮೆಯಿದೆ. ಬೆಲೆಗಳು ಪ್ರತಿದಿನವೂ ಏರಿಳಿತಗೊಳ್ಳುತ್ತವೆ ಮತ್ತು ರೈತರಿಗೆ ನೈಜ ಸಮಯದ ಮಾರುಕಟ್ಟೆ ಬೆಲೆ ಮಾಹಿತಿಯ ಕೊರತೆಯಿದೆ. ಶೇ.60ರಷ್ಟು ರೈತರು ಬೆಲೆ ಏರಿಳಿತವನ್ನು ಪ್ರಮುಖ ಅಪಾಯವೆಂದು ಉಲ್ಲೇಖಿಸಿದ್ದಾರೆ, ಹಠಾತ್ ಬೆಲೆ ಕುಸಿತವು ಲಾಭವನ್ನು ನುಂಗಿಹಾಕುತ್ತದೆ, ಏಕೆಂದರೆ ಅವರಿಗೆ ಉತ್ಪನ್ನಗಳನ್ನು ಹಿಡಿದಿಟ್ಟುಕೊಳ್ಳಲು ಸಾಧನಗಳಿಲ್ಲ” ಎಂದು ಸಾಗರ ಗಜ್ರೆ ಹೇಳುತ್ತಾರೆ.
“ನೇರವಾಗಿ ಮನೆಗೆ ತರಕಾರಿ ವಿತರಣೆಗೆ ಮಾರುಕಟ್ಟೆ ಅವಕಾಶಗಳನ್ನು ಗುರುತಿಸಲು ನಾನು ಕಲಬುರಗಿ ನಗರದ 384 ಮನೆಗಳನ್ನು ಸಮೀಕ್ಷೆ ಮಾಡಿದ್ದೇನೆ. ಫಲಿತಾಂಶಗಳು ವಿಭಜಿತ ಅನುಭವವನ್ನು ತೋರಿಸುತ್ತವೆ, ಶೇ. 48 ಜನರು ಆನ್‍ಲೈನ್ ತರಕಾರಿ ವಿತರಣೆಯಲ್ಲಿ ಸ್ವಲ್ಪ ಅನುಭವವನ್ನು ಹೊಂದಿದ್ದಾರೆ. ಆದರೆ ಶೇ. 52 ಜನರು ಎಂದಿಗೂ ಅದನ್ನು ಪ್ರಯತ್ನಿಸಿರಲಿಲ್ಲ. ಆದಾಗ್ಯೂ, ತಾಜಾ ತರಕಾರಿಗಳಿಗಾಗಿ ಆನ್‍ಲೈನ್ ಮೂಲಕ ತರಕಾರಿ ಖರಿದಿಸಲು ತ್ಯಾರಿದ್ದಾರೆ” ಎಂದು ಸಾಗರ ಗಜ್ರೆ ಹೇಳುತ್ತಾರೆ.
“ಈ ಅಧ್ಯಯನವು ರೈತ ಉತ್ಪಾದಕ ಸಂಸ್ಥೆಗಳು (ಈPಔಗಳು) ಅಥವಾ ಸಹಕಾರಿ ಸಂಸ್ಥೆಗಳ ಸಾಮಥ್ರ್ಯಗಳನ್ನು ಆಧುನಿಕ ಇ-ಕಾಮರ್ಸ್ ಲಾಜಿಸ್ಟಿಕ್ಸ್‍ನೊಂದಿಗೆ ಸಂಯೋಜಿಸುವ ಹೈಬ್ರಿಡ್ ನೇರ-ಮಾರ್ಕೆಟಿಂಗ್ ಮಾದರಿಯನ್ನು ಪ್ರಸ್ತಾಪಿಸುತ್ತದೆ. ರೈತ ಉತ್ಪಾದಕ ಸಂಸ್ಥೆಗಳು ಕಲಬುರಗಿಯ ಸುತ್ತಮುತ್ತಲಿನ ತರಕಾರಿ ಬೆಳೆಯುವ ಗ್ರಾಮಗಳಲ್ಲಿ ಗ್ರಾಮ ಮಟ್ಟದ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಬೇಕು. ಸಹಕಾರಿ ಸಾರಿಗೆಯು ಅದನ್ನು ಎತ್ತಿಕೊಂಡು ಕಲಬುರಗಿ ನಗರದ ಕೇಂದ್ರ ಸಂಗ್ರಹಗಾರಕ್ಕೆ ತರುತ್ತದೆ. ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕೇಂದ್ರೀಕೃತ ವಿಂಗಡಣೆ, ಶ್ರೇಣೀಕರಣ ಮತ್ತು ಸಂಸ್ಕರಣೆಯನ್ನು ಮಾಡಲಾಗುತ್ತದೆ. ರೈತ ಉತ್ಪಾದಕ ಸಂಸ್ಥೆಯು ನಗರದ ಎಲ್ಲಾ ಪ್ರದೇಶಗಳಲ್ಲಿ ಭೌತಿಕ ತರಕರಿ ಮಾಳಿಗೆ, (ಏಒಈ ಹಾಲಿನ ಅಂಗಡಿಗಳಂತೆಯೇ) ಮತ್ತು ಆನ್‍ಲೈನ್ ಆರ್ಡರ್‍ಗಳ ಮೂಲಕ ಮನೆ ಮನೇಗೆ ವಿತರಣೆ ಮಾಡುತ್ತದೆ. ಅಸ್ತಿತ್ವದಲ್ಲಿರುವ ತರಕಾರಿ ಬೀದಿ ವ್ಯಾಪಾರಿಗಳನ್ನು ಕೈಬಿಡದೆ ಅವರಿಗೆ “ತರಕಾರಿ ಮಳಿಗೆಗಳನ್ನು” ನಿರ್ವಹಿಸಲು ಅವಕಾಶ ನೀಡಬೇಕು. ಗ್ರಾಹಕರು ಸ್ವತಃ ತರಕಾರಿ ಅಂಗಡಿಗೆ ಬಂದು ಅಥವಾ ಮೊಬೈಲ್ ಅಪ್ಲಿಕೇಶನ್‍ಗಳ ಮೂಲಕ ತರಕಾರಿ ಖರಿದಿಸಬಹುದಾಗಿದೆ. ಇಂತಹ ಆರ್ಡರ್‍ಗಳನ್ನು ತರಕಾರಿ ಮಾರಾಟಗಾರರು ತರಕಾರಿಗಳನ್ನು ಗ್ರಾಹಕರ ಮನೆಗೆ ತಲುಪಿಸುತ್ತಾರೆ. ಹೀಗೆ ಹಾಪ್ಕಾಮ್ಸ್ ಅನ್ನು ಕೆಎಂಎಫ್ ಮಾದರಿಯಲ್ಲಿ ಸಹಕಾರಿ ತೋಟಗಾರಿಕೆ ಸಂಸ್ಥೆಯಾಗಿ ನಿರ್ಮಿಸುವುದರಿಂದ ರೈತರ ಸಮಸ್ಯೆಯನ್ನು ಬಗೆಹರಿಸಿ ಅವರ ಬೆಳೆಗೆ ಉತ್ತಮ ಬೆಲೆ ನೀಡಬಹುದಾಗಿದೆ” ಎಂದು ಸಾಗರ ಗಜ್ರೆ ಹೇಳುತ್ತಾರೆ.