
ಕಲಬುರಗಿ:ಮೇ.19: ನಗರದ ಕನ್ನಡ ಭವನದಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಘಟಕ ಹಾಗೂ ಸನರೈಸ್ ಆಸ್ಪತ್ರೆ ವತಿಯಿಂದ ಮಹಾತ್ಮ ಗೌತಮ ಬುದ್ಧ ಮತ್ತು ವಿಶ್ವಗುರು ಬಸವಣ್ಣ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಬುದ್ಧ ಬಸವ, ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಡಾ. ಐ. ಎಸ್. ವಿದ್ಯಾಸಾಗರ, ವಿಜಯಕುಮಾರ ತೇಗಲತಿಪ್ಪಿ, ರಾಜಕುಮಾರ ಪಾಟೀಲ, ಜೈ ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಚಿನ ಫರತಾಹಾಬಾದ, ಶರಣಗೌಡ ಅಲ್ಲಮಪ್ರಭು ಪಾಟೀಲ, ವಿಜಯಕುಮಾರ ಕಟ್ಟಿಮನಿ, ಸುರೇಶ ಬಡಿಗೇರ, ಧೂಳಪ್ಪ ದೊಡ್ಡಮನಿ, ಎಮ್.ಡಿ. ಸಿದ್ದಿಕ್ಕಿ, ಸುರೇಶ ಹನಗುಡಿ, ಲಕ್ಷ್ಮಣ ಮೂಲಭಾರತಿ, ಅಕ್ಷಯ, ಗುಡುಸಿಂಗ್, ಸತಿಶ ಫರತಾಹಾಬಾದ ಮಲ್ಲಿಕಾರ್ಜುನ ನಿಲೂರೆ ಸೇರಿದಂತೆ ಇತರರು ಇದ್ದರು.