
ಕಲಬುರಗಿ:ಜೂ.೩೦: ನಗರದ ಸಾರ್ವಜನಿಕ ಉದ್ಯಾನವನದಲ್ಲಿ ವೀರಶೈವ ಕಲ್ಯಾಣ ಮಂಟಪದಲ್ಲಿ ಸವಿತಾ ಸಮಾಜ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ದಶಮಾನೋತ್ಸವ ನಿಮಿತ್ಯ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸ್ನಾತಕ, ಸ್ನಾತಕೋತ್ತರ, ಪಿಎಚ್‌ಡಿ, ವಯೋನಿವೃತ್ತಿ, ನೂತನ ಸೇವೆಗೆ ಸೇರಿದ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಿತು.
ರಾಜ್ಯ ಸವಿತಾ ಸಮಾಜ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣಾ ಕೆ.ವಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಬಳೂಂಡಗಿ, ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಅಜಯಕ ಕುಮಾರ್ ಎ. ದಾಮರಗಿದ್ದಾ, ಎಸ್‌ಬಿಐ ಬ್ಯಾಂಕ್ ವೈದ್ಯಾಧಿಕಾರಿ ಡಾ. ಅಶ್ವಿನಿ ಎಸ್. ಧನವಾಡಕರ್, ಮಹಾ ನಗರ ಪಾಲಿಕೆಯ ಸದಸ್ಯೆ ತೃಪ್ತಿ ಎಸ್. ಲಾಖೆ, ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಪಟೇಲ್, ಸಂಘದ ಜಿಲ್ಲಾಧ್ಯಕ್ಷ ಮಹೇಶ ಉಚ್ಚೇಲಿಕರ್, ರಾಜೇಂದ್ರ ಅಷ್ಟಗೀಕರ್, ಮಲ್ಲಪ್ಪಾ ಆರ್. ಗೋಗಿ, ಆನಂದ್ ವಾರಿಕ್, ಜ್ಯೋತಿ ಆಡಕಿ, ಗಣೇಶ್ ಚಿನ್ನಾಕಾರ್, ಶ್ರೀನಾಥ ಕಾನಾಗಡ್ಡಿ, ಗಿರಿಜಾಶಂಕರ್ ಗೋಗಿ, ಡಾ.ದತ್ತಾತ್ರೇಯ ಸೂರ್ಯವಂಶಿ, ಡಾ.ನಾಗಪ್ಪಾ ಟಿ.ಗೋಗಿ, ರಾಜಶೇಖರ ಮಾನೆ, ಕು.ಐಶ್ವರ್ಯ ಆರ್.ಮಾನೆ ಸೇರಿದಂತೆ ಲ್ಲಿ ಸವಿತಾ ಸಮಾಜ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು ಇದ್ದರು.