Home ಜಿಲ್ಲೆ ಕಲಬುರಗಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭೆಗಳಿಗೆ ಗೌರವ

ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭೆಗಳಿಗೆ ಗೌರವ

ಜೇವರಗಿ,ಮೇ ೨: ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವಕರು, ವಿವಿಧ ಸಂಘಟಗಳ ಅಧ್ಯಕ್ಷರು,ಶಿಕ್ಷಣ ಪ್ರೇಮಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡರು
ಎಸ್‌ಎಸ್‌ಎಲ್‌ಸಿಯಲ್ಲಿ ನಿಸರ್ಗ ಶಂಕರ ದೇಸಾಯಿ ಇಜೇರಿ (೯೯.೨% ) ಮಂಜುನಾಥ ಸೈದಪ್ಪ ಹೊಸಮನಿ (೯೧%
),ಯಲ್ಲಮ್ಮ ಶರಣಬಸಪ್ಪ (೯೦.೨%),ತಸಲೀಮ್ ಸುಲೇಮನ್ ೮೮.೩% ,ಆಶಾ (೮೭.೫ ), ಅಂಜುಮ ಮೊಹ್ಮದಪಟೇಲ್ (೮೭%) ದ್ವಿತೀಯ ಪಿಯುಸಿಯಲ್ಲಿ ಅವಿನಾಶ ಯಮನಪ್ಪ ಗುತ್ತೇದಾರ (೯೬.೬% ), ಶಶಿಕಾಂತ ಪೀರಯ್ಯ ಗುತ್ತೇದಾರ( ೯೩.೩%),ರೋಹಿತ ಬಸವರಾಜ ಶಿರಸಗಿ (೮೯%), ಜ್ಯೋತಿ ಗುರಪ್ಪ ಅವರಾದಿ (೮೮%) ಸೇರಿದಂತೆ ೩೦ ವಿದ್ಯಾರ್ಥಿಗಳನ್ನನು ಗೌರವಿಸಲಾಯಿತು.