
ಕಲಬುರಗಿ : ನ.10:ನಗರದ ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ‘ಸುಜಯ್ ಎಜುಕೇಶನಲ್ & ವೆಲ್ಪೇರ್ ಸೊಸೈಟಿ’ ವತಿಯಿಂದ ಭಾನುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ‘ಕಲಿಕಾ ಸ್ನೇಹಿ ಶಿಕ್ಷಕ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಸಂಘಟನೆಯವರಾದ ಎಚ್.ಬಿ.ಪಾಟೀಲ್, ನರಸಪ್ಪ ಬಿರಾದಾರ ದೇಗಾಂವ, ನರಸಪ್ಪ ರಂಗೋಲಿ, ಎಂ.ಬಿ.ನಿಂಗಪ್ಪ, ದೇವೇಂದ್ರಪ್ಪ ಗಣಮುಖಿ, ಅಪ್ಪಾಸಾಬ ತೀರ್ಥೆ, ಭಾನುಕುಮಾರ ಗಿರೇಗೋಳ್ ಸೇರಿದಂತೆ ಇನ್ನಿತರ ಸಂಘಟನೆಯವರಿಗೆ ಸತ್ಕರಿಸಿ, ಗೌರವಿಸಲಾಯಿತು.
‘ಸುಜಯ್ ಎಜುಕೇಶನಲ್ & ವೆಲ್ಪೇರ್ ಸೊಸೈಟಿ’ಯ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಪ್ರಮುಖರಾದ ಜಯಶ್ರೀ ಎಸ್.ವಂಟಿ, ಸುಜಯ್ ಎಸ್.ವಂಟಿ, ಸಾಯಿಪ್ರಸಾದ ಎಸ್.ವಂಟಿ, ರವೀಂದ್ರರೆಡ್ಡಿ ಶಿಕಾರಿ, ರಾಜಕುಮಾರ ಕೋರಿ, ಲಕ್ಷ್ಮೀಕಾಂತ ಪಾಟೀಲ್, ಸಂಗಮೇಶ ಇಮ್ಡಾಪುರ ಸೇರಿದಂತೆ ಇನ್ನಿತರರಿದ್ದರು.
























