ಜೇವರ್ಗಿ:ಅ.೧೯: ಶಹಾಪೂರ ತಾಲೂಕಿನ ಬೀರನೂರು ಗ್ರಾಮದ ರಮೇಶ ಕುಮಾರ್ ತಂದೆ.ಗುರಪ್ಪ ದಂಡAಬಳಿ ರವರು ಯೂನಿವರ್ಸಿಟಿ ಆಫ್ ಟೊಲಸಾ-ಮೆಕ್ಸಿಕೋ (ಅಮೇರಿಕ) ಅಂಡ್ ಇಂಟರ್ನ್ಯಾಷನಲ್ ಪ್ರೋಪೋಷನಲ್ ಅಕಾಡೆಮಿ ಯುಕೆ, ಲಿಮಿಟೆಡ್ ೨೦೨೫ ರ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಸಾಮಾಜಿಕ ಹಾಗೂ ಉದ್ಯಮ ಸೇವಾ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಕಾರಣ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ ಇವರ ಆಯ್ಕೆಗೆ ಕರ್ನಾಟಕ ಜನತೆ ಹಾಗೂ ಗ್ರಾಮಸ್ಥರು ಇವರ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.ಡಾಕ್ಟರೇಟ್ ಪ್ರಶಸ್ತಿಯನ್ನು ಮಹಾರಾಷ್ಟ್ರದ ಸೋಲಾಪುರ ಪಟ್ಟಣದಲ್ಲಿರುವ ಚೈತ್ರಲ್ಲಿ ಬ್ಯಾಕ್ವಟ ಹಾಲ್ ನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಆಯ್ಕೆ ಹಿನ್ನೆಲೆ ಹರ್ಷ ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಮರೆಪ್ಪ ಬೇಗಾರ ಅಖಂಡೇಶ ದಂಡಮಳಿ ನಿಂಗಪ್ಪ ದಂಡಬಳ್ಳಿ ರವಿ ಕುಮಾರ್ ದಂಡಬಳ್ಳಿ ಕುಟುಂಬದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.























