ಶಿವಶಂಕರ ಟೋಕರೆಗೆ ಗೌರವ ಡಾಕ್ಟರೇಟ್

ಬೀದರ :ಜ.30:ಜಿಲ್ಲೆಯಲ್ಲಿ ನೌಕರಿ ಸರ್ ಎಂದೆ ಕರೆಯಲಾಗುತ್ತಿರುವ ಜಿಲ್ಲಾ ಕಸಾಪ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ವತಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಷ್ಕರಿಸಲಾಗುತ್ತ್ತಿದೆ. ಶಿವಶಂಕರ ಟೋಕರೆ ಅವರ ಧಾರ್ಮಿಕ, ಸಮಾಜೋಸಾಂಸ್ಕøತಿಕ, ಶೈಕ್ಷಣಿಕ , ಕೌಶಲ್ಯ ಕ್ಷೇತ್ರದಲ್ಲಿ ಕಳೆದ ನಾಲ್ವತ್ತು ವರ್ಷಗಳಿಂದ ದುಡಿಯುತ್ತ ಬಂದಿದ್ದಾರೆ, ಅವರ ಬಸವತತ್ವ- ಕನ್ನಡತ್ವ ಹಾಗೂ ಕೌಶಲ್ಯ ಕ್ಷೇತ್ರಗಳ ಸೇವೆ ಪರಿಗಣಿಸಿ ಈ ಪದವಿ ನೀಡಲಾಗುತ್ತಿದೆ.
ದಿನಾಂಕ 31. 01. 2026 ರಂದು ಜರುಗುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‍ಪದವಿ ನೀಡಲಾಗುತ್ತಿದ್ದು, ಕಾರ್ಯಕ್ರಮಕ್ಕೆ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ರ ಗೆಲ್ಹೋಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ ಎಮ್ ಸಿ ಸುಧಾಕರ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದು, ಕೇಂದ್ರದ ಶಿಕ್ಷಣ ಮಂತ್ರಿಗಳಾದ ಡಾ ಸುಕಂತಾ ಮಜುಮಂದಾರ ಘಟಿಕೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಶರಣಪ್ಪ ವ್ಹಿ.ಹಲಸೆ, ಡಾ ಸಿ.ಎಸ್. ಆನಂದಕುಮಾರ ಕುಲಸಚಿವ( ಮೌಲ್ಯಮಾಪನ) ಹಾಗೂ ಪೆÇ್ರ.ನವೀನಕುಮಾರ ಕುಲಸಚಿವ ಪಾಲ್ಗೊಳ್ಳಲಿದ್ದಾರೆ.
ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಅತ್ಯಂತ ಕ್ರಿಯಾಶೀಲತೆಯಿಂದ ದುಡಿಯುತ್ತ, ಪ್ರತಿ ಕೆಲಸದಲ್ಲಿ ನಿಸ್ವಾರ್ಥ ವಾಗಿ ದುಡಿದÀ ಶಿವಶಂಕರ ಟೋಕರೆ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿರುವುದು ಅತ್ಯಂತ ಸಂತಸವಾಗಿದೆ ಎಂದು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಕ್ಷರಾದ ಸುರೇಶ ಚನ್ನಶೆಟ್ಟಿ ಹೇಳಿದ್ದಾರೆ. ಪೂಜ್ಯ ಡಾ ಗಂಗಾಂಬಿಕಾ ಅಕ್ಕ ಅಧ್ಯಕ್ಷರು ಬಸವ ಸೇವಾ ಪ್ರತಿμÁ್ಠನ, ಪೂಜ್ಯ ಶ್ರೀ ಡಾ ಬಸವಲಿಂಗ ಅವಧೂರು, ಜಹೀರಾಬಾದ, ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿಗಳು ಹಿರೇಮಠ ಸಂಸ್ಥಾನ ಭಾಲ್ಕಿ. ದಾವಣಗೆರೆ ಪೂಜ್ಯರಾದ ಪ್ರಭುದೇವರು, ನಿಷ್ಕಲ ಮಂಟಪ ಬೈಲೂರಿನ ಪೂಜ್ಯ ನಿಜಗುಣಾನಂದ ಪ್ರಭು ಸ್ವಾಮಿಗಳು ಅಭಿನಂದಿಸಿ ಆಶೀರ್ವಾದಿಸಿದ್ದಾರೆ. ಹಾಗೇ ಜೊತೆಗೆ ಸೋಮಶೇಖರ ಬಿರಾದಾರ ಚಿದ್ರಿ ಅಧ್ಯಕ್ಷರು ಕ.ರಾ.ಸ.ನೌ.ಸಂ. ಬೀದರ. ಪಾಂಡುರಂಗ ಬೆಲ್ದಾರ ರಾಜ್ಯಧ್ಯಕ್ಷರು ಪ್ರೌಢ ಶಾಲಾ ಶಿಕ್ಷಕರ ಸಂಘ. ಬೀದರ. ಶರಣಪ್ಪ ಮಿಠಾರೆ ಅಧ್ಯಕ್ಷರು ಬಸವ ಕೇಂದ್ರ ಬೀದರ, ಆನಂದ ದೇವಪ್ಪ ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಘ ಬೀದರ, ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಬೀದರ, ಬಾಬು ವಾಲಿ ರಾಜ್ಯಾಧ್ಯಕ್ಷರು ಭಾರತೀಯ ಬಸವ ಬಳಗ ಬೀದರ ಬಸವರಾಜ ಧನ್ನೂರ ಅಧ್ಯಕ್ಷರು ಜಾಗತಿಕ ಲಿಂಗಾಯತ ಸಮಾಜ ಬೀದರ, ಸುಮಂತ ಕಟ್ಟಿ ಮನಿ ಅಧ್ಯಕ್ಷರು ಮಾದಾರ ಚೆನ್ನಯ್ಯ ನೌಕರರ ಸಂಘ ಬೀದರ ಶಿವರಾಜ ಕಪಲಾಪೂರೆ ರಾಜ್ಯಾಧ್ಯಕ್ಷರು ಲಿಂಗಾಯತ ನೌಕರರ ಸಂಘ ಬೀದರ ಅಲ್ಲಮಪ್ರಭು ನಾವದಗೇರೆ ವ್ಯವಸ್ಥಾಪಕ ನಿರ್ದೇಶಕರು ವಚನ ಸಮೂಹ ಸಂಸ್ಥೆ ಬೀದರ ಯುಸುಫ್ ಮಿಯ್ಯ ಜೋಜನಾ ಅಧ್ಯಕ್ಷರು ಐಟಿಐ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ ಸಂಘ ಬೀದರ ರೇವಣಪ್ಪ ಮೂಲಗೆ ಅಧ್ಯಕ್ಷರು ವಚನ ವೈಭವ ಸಮಿತಿ ಬೀದರ ಬಾಬು ದಾನಿ ರಾಜ್ಯ ಸಂಯೋಜಕರು ವೈಜ್ಞಾನಿಕ ಸಂಶೋಧನಾ ಪರಿಷತ್ತು ಸುನೀತಾ ದಾಡಗೆ ಅಧ್ಯಕ್ಷರು ವಚನ ಸಾಹಿತ್ಯ ಪರಿಷತ್ತು ಬೀದರ ಶಿವಕುಮಾರ ಘಾಟೆ ಜಿಲ್ಲಾ ಪಿ ಡಿ ಓ ಸಂಘ ಬೀದರ ಬಾಲಾಜಿ ಬಿರಾದಾರ ಅಧ್ಯಕ್ಷರು ಎನ್ ಜಿ ಓ ಗೃಹ ನಿರ್ಮಾಣ ಸಂಘ, ಪ್ರಮುಖರಾದ ಡಾ ಬಸವರಾಜ ಬಲ್ಲೂರ, ಟಿ ಎಮ್ ಮಚ್ಚೆ, ಎಮ್ ಎಸ್ ಮನೋಹರ, ಶಿವಕುಮಾರ ಕಟ್ಟೆ, ಇಲಾಖೆಯ ಜಂಟಿ ನಿರ್ದೇಶಕರಾದ ವೈಜಗೊಂಡ, ಸಹಾಯಕ ನಿರ್ದೇಶಕರಾದ ಡಾ ಶರಣಬಸಪ್ಪ ಸಡ್ಡು, ಸುಭಾಷ ಯಾವಳೆ ಪ್ರಾಚಾರ್ಯರು ಮೊದಲಾದವರು ಶುಭಕೋರಿ ಪತ್ರಿಕಾ ಪ್ರಕಟಣೆ ಮೂಲಕ ಅಭಿನಂದಿಸಿದ್ದಾರೆ.