ಸನ್ಮಾನ ಸಮಾರಂಭ

ಚನ್ನಮ್ಮನ ಕಿತ್ತೂರು,ಜೂ29: ರಾಜ್ಯದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಉಚಿತವಾಗಿ ಬಣ್ಣ ಹಚ್ಚುವದರ ಮೂಲಕ ಕನ್ನಡ ಶಾಲೆಗಳ ಉಳಿವು-ಬೆಳವಣಿಗೆಗಾಗಿ ಕ್ರಿಯಾಶೀಲರಾಗಿರುವ “ಕುಂಚ ನಮ್ಮದು – ಬಣ್ಣ ನಿಮ್ಮದು” ಗುಂಪಿನ ಕನ್ನಡಿಗ-ಕನ್ನಡತಿಯರ ಕಾರ್ಯ ಶ್ಲಾಘನೀಯ ಎಂದು ಕಸಾಪÀ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಹೇಳಿದರು.


ತಾಲೂಕಿನ ಶಿವನೂರ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ಉಚಿತವಾಗಿ ಬಣ್ಣ ಹಚ್ಚಿÀ ಶಾಲೆ ಅಂದ ಹೆಚ್ಚಿಸಿದ “ಕುಂಚ ನಮ್ಮದು-ಬಣ್ಣ ನಿಮ್ಮದು” ಗುಂಪಿನ ಕನ್ನಡಿಗ-ಕನ್ನಡತಿಯರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ತಂಡದವರ ಸರಕಾರಿ ಕನ್ನಡ ಶಾಲೆಗಳ ಪ್ರೇಮಕ್ಕೆ ಎಲ್ಲರ ಪರವಾಗಿ ಅಭಿನಂದನೆ ತಿಳಿಸಿದರು.


ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಚಂಗೋಲಿ ಮಾತನಾಡಿ ತಮ್ಮ ಶಾಲೆ ಅಂದ ಹೆಚ್ಚಿಸಿದ ಈ ಯುವಕರನ್ನು ಮತ್ತು ಉಚಿತವಾಗಿ ಬಣ್ಣ ಕೊಡಿಸಿ ಕೆಲಸದ ಎಲ್ಲ ಜವಾಬ್ದಾರಿ ನಿರ್ವಹಿಸಿದ ಶಿವನೂರಿನ ಶಿವಶಕ್ತಿ ಗ್ರಾಮಾಭಿವೃದ್ಧಿ ಸಂಘದ ಎಲ್ಲ ಸದಸ್ಯರಿಗೆ ಅಭಿನಂದನೆ ತಿಳಿಸಿದರು.
ಕಸಾಪ ಶಿವಶಕ್ತಿ ಗ್ರಾಮಾಭಿವೃದ್ಧಿ ಸಂಘ ಮತ್ತು ಶಾಲೆ ಪರವಾಗಿ ಕಲಾಕಾರರನ್ನು ಸನ್ಮಾನಿಸಿದರು. ಭಾಗ್ಯಾ,, ಸಂತೋಷ ಮಾತನಾಡಿ ತಮ್ಮ ವೃತ್ತಿಯ ಜೊತೆಗೆ ಬಿಡುವು ಮಾಡಿಕೊಂಡು ಕರ್ನಾಟಕದಾದ್ಯಂತ ಈ ಕೆಲಸ ಮಾಡುತ್ತಿರುವದಾಗಿ ಹೇಳಿದರು. ಪ್ರೊ.ಎನ್.ಜಿ.ಪಾಟೀಲ, ಶಿಕ್ಷಕ ಮಹಾಂತೇಶ ಪೂಜೇರ ಸ್ವಾಗತಿಸಿ ನಿರೂಪಿಸಿದರು. ಶಿವಾನಂದ ಮಾಟೊಳ್ಳಿ ವಂದಿಸಿದರು. ಯುವಕರು, ಶಾಲಾ ಸಿಬ್ಬಂದಿ, ಎಸ್.ಡಿ.ಎಂ.ಸಿ ಮತ್ತು ಪಂಚಾಯತಿ ಸದಸ್ಯರು,ವಿದ್ಯಾರ್ಥಿಗಳು ಇನ್ನಿತರರಿದ್ದರು.