ಚನ್ನಮ್ಮನ ಕಿತ್ತೂರು,ನ.೪: ನನ್ನ ಸಂಶೋಧನಾ ಪ್ರಯಾಣದ ಸಾರ್ಥಕತೆ ಕ್ಷಣವಾಗಿದೆ. ಎಂದು ಧಾರವಾಡದ ಕೆಎಲ್ ಶಿಕ್ಷಣ ಸಂಸ್ಥೆ ಶ್ರೀ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಪಧವಿ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕ ಬಾಬು ಬೆಣ್ಣಿ ಹೇಳಿದರು.
ಇವರು ಉತ್ತರ ಕನ್ನಡದ ಲಮಾಣಿ ಸಾಹಿತ್ಯದ “ವಸ್ತು ಮತ್ತು ವಿನ್ಯಾಸದ ಸ್ವರೂಪ” ಕುರಿತು ಪ್ರಬಂಧ ಮಂಡಿಸಿ ಹಂಪಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದು ಇವರನ್ನು ಪಟ್ಟಣದ ಕಲ್ಮಠ ಆವರಣದಲ್ಲಿ ಕಸಾಪ ವತಿಯಿಂದ ಅಧ್ಯಕ್ಷ ಡಾ. ಎಸ್.ಬಿ.ದಳವಾಯಿ ಸನ್ಮಾನಿಸಿ ಗೌರವಿಸಿದ ಸಂದರ್ಭದಲ್ಲಿ ಅವರು ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಣ್ಣಿಯವರು ನಾನು ಹುಟ್ಟಿದ ನಾಡಿನಲ್ಲಿ ಭವ್ಯವಾದ ಪರಂಪರೆಯುಳ್ಳ ಸಂಸ್ಥಾನ ಕಲ್ಮಠ ಆವರಣದಲ್ಲಿ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀಗಳು ಹಾಗೂ ನನಗೆ ಕಲಿಸಿದ ಗುರುಗಳು, ಸ್ನೇಹಿತರಿಂದ ದಂಪತಿ ಸಮೇತ ಸನ್ಮಾನ ಸ್ವೀಕರಿಸಿದ್ದು ನನ್ನ ಪೂರ್ವಜನ್ಮದ ಪುಣ್ಯ ಅದರ ಜೊತೆಯಲ್ಲಿ ನನ್ನ ಕಲಿಕೆ ಮತ್ತು ಜವಾಬ್ದಾರಿ ಹೆಚ್ಚಿಸಿದೆ ಮಾರ್ಗದರ್ಶಕರಾದ ಡಾ. ಎಚ್.ಬಿ ಕೋಲಕಾರ ಮತ್ತು ಇತರರನ್ನು ಸ್ಮರಿಸಿದರು.
ಕಸಾಪ ಅಧ್ಯಕ್ಷ ಎಸ್.ಬಿ. ದಳವಾಯಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಆತ್ಮೀಯ ವಿದ್ಯಾರ್ಥಿ ಸಾಧನೆ ಇತರರಿಗೂ ಸ್ಫೂರ್ತಿಯಾಗಲೆಂದರು.
ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರೆ ಸ್ವಾಮಿಜೀ ಸಾನಿಧ್ಯ ವಹಿಸಿ ಮಾತನಾಡಿ ತಾಲೂಕಿನ ಬೈಲೂರು ಗ್ರಾಮದ ಬಾಬು ಬೆಣ್ಣಿಯವರು ಗ್ರಾಮೀಣ ಭಾಗದಲ್ಲಿ ಜನಿಸಿ ಇಂತಹ ಸಾಧನೆ ಮಾಡಿರುವುದು ಈ ಐತಿಹಾಸಿಕ ಕಿತ್ತೂರು ನಾಡಿಗೆ ಹಿರಿಮೆ ಹೆಚ್ಚಿಸಲು ಕಾರಣವಾಗಿದೆ. ಇನ್ನೂ ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ಇವರು ಮುಂದುವರೆಯಲೆAದು ಆಶಿಸಿದರು.
ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈಶ್ವರ ಗಡಿಬಿಡಿ ಅವರಿಂದ ಪಾರ್ಥನಾ ಗೀತೆ, ಸಂಜೀವ ಲದ್ದಿಮಠ ಸ್ವಾಗತಿಸಿದರು, ಮಂಜುನಾಥ ಕಳಸನ್ನವರ ರಾಜ್ಯೋತ್ಸವ ಕುರಿತು ಮಾತನಾಡಿದರು. ಪ್ರಭಾವತಿ ಲದ್ದಿಮಠ ಸಾಧಕರನ್ನು ಪರಿಚಯಸಿದರು, ಬಸವರಾಜ ದಳವಾಯಿ ವಂದಿಸಿದರು, ವೀರಪ್ಪ ನಂದಿಹಳ್ಳಿ ನಿರೂಪಿಸಿದರು, ಕ್ಯೂರೇಟರ್ ರಾಘವೇಂದ್ರ, ಶ್ರೀಧರ ಕುರಗುಂದ, ಎಂ.ವಾಯ್. ಕಡಕೋಳ, ನಾಗಯ್ಯಾ ಹೂಲೇಪ್ಪನವರಮಠ, ಬಿಎಸ್ ಆಸಂಗಿಮಠ, ಗಂಗಾಧರ ಮೋಕಿ, ಭರತಕುಮಾರ ಕಡಬಿ, ಮಕ್ಕಳು ಇನ್ನಿತರಿದ್ದರು.























