ಸನ್ಮಾನ ಸಮಾರಂಭ

ಬಂಕಾಪುರ,ಜ26: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಶ್ರೀ ಯಂಕಮ್ಮ ಮತ್ತು ಸಂಕಮ್ಮ ದೇವಿಯ 4ನೇ ವರ್ಷದ ವಾರ್ಷಿಕೋತ್ಸವದಲ್ಲಿ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶೇಷ ಸನ್ಮಾನ ಸಮಾರಂಭವನ್ನು ಶ್ರೀ ಅರಳಲೇ ಹಿರೇಮಠದ ರೇವಣ ಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಕೆಂಡದ ಮಠ ಸಿದ್ದಯ್ಯ ಸ್ವಾಮಿಗಳು, ಪಿ ಎಸ್ ಐ ಡಿ.ಎನ್.ಕೂಡಲ್ ಮಾತನಾಡಿದರು. ಸೈಯದ್ ಷಾ ಮಹಮ್ಮದ್ ಕುತಬೆ ಅಲಂ ಸೈಯದ್ ಅಲ್ಲಾಉದ್ದೀನ್ ಶಾ ಖಾದ್ರಿ, ಡಾ. ಕಾವ್ಯಾ ಹೊಸಮನಿ, ಆಸ್ಮಾ ಎಸ್. ಕೆ., ನೀಲಪ್ಪ ಕೊಳಲು, ನನ್ನಸಾಬ್ ದೇವಗೇರಿ, ನಾಸಿರ್ ಅಹಮದ್ ಬಳಗೇರ್, ಬಾಲಿದ ಡಾಣೆಬಾಗ್, ಸೈಯದ್ ಜಮೀರ್ ಮಿರ್ಚೋಣಿ, ಸೋಮು ಆಜೂರ್ ಸೇರಿದಂತೆ ಮತ್ತಿತರರು ಮುಂತಾದ ಉಪಸ್ಥಿತರಿದ್ದರು. ಶಿಕ್ಷಕ ಎಂ. ಬಿ.ಉಂಕಿ ನಿರೂಪಿಸಿದರು.