ಹೊನ್ಕಲ್‍ಗೆ ಭಾರತೀಯ ಸಾಹಿತ್ಯ ರತ್ನ ರಾಷ್ಟ್ರ ಪ್ರಶಸ್ತಿ

ಯಾದಗಿರಿ,ಜೂ.9-ಕಲ್ಯಾಣ ಕರ್ನಾಟಕದ (ಯಾದಗಿರಿ) ಗಿರಿನಾಡು ಜಿಲ್ಲೆಯ ಲೇಖಕ ಡಾ.ಸಿದ್ಧರಾಮ ಹೊನ್ಕಲ್‍ರ ಒಟ್ಟು ಸಾಹಿತ್ಯ ಸಾಧನೆಯ ಹಿನ್ನೆಲೆಯಲ್ಲಿ ಅವರಿಗೆ ಜೀವಮಾನದ ಸಾಧನೆಗಾಗಿ ಬೆಂಗಳೂರಿನ ಅನ್ವೇಷಣೆ ಸಾಹಿತ್ಯ ಅಕಾಡೆಮಿ “ಭಾರತೀಯ ಸಾಹಿತ್ಯ ರತ್ನ ರಾಷ್ಟ್ರ ಪ್ರಶಸ್ತಿ” ನೀಡಿದೆ.
ಜೂ.20 ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಕನ್ನಡ ಭವನದಲ್ಲಿ ಇರುವ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಎಲ್.ಗುರುರಾಜ ಆಚಾರ್ಯರು ಉದ್ಘಾಟಿಸಲಿದ್ದಾರೆ. ಲೇಖಕ ರಾಗಂ ಅವರು ಅಧ್ಯಕ್ಷತೆ ವಹಿಸಿಲಿದ್ದಾರೆ. ಪ್ರಶಸ್ತಿ ಪ್ರದಾನವನ್ನು ದಿನೇಶ ಗುರೂಜಿ ಹಾಗೂ ಚಲನಚಿತ್ರÀ ನಿರ್ದೇಶಕÀ ಸಾಯಿ ಪ್ರಕಾಶ್ ಅವರು ಮಾಡಲಿದ್ದು ,ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕ ಬೇಲೂರು ರಾಮಮೂರ್ತಿ, ಖ್ಯಾತ ಕಾದಂಬರಿಕಾರ ಕೌಂಡಿನ್ಯ , ಖ್ಯಾತ ಜ್ಯೋತಿಷಿಗಳಾದ ಶಾರದಾ ಮಣಿಯವರು ಹಾಗೂ ಲೇಖಕ ಮತ್ತು ಪ್ರಶಸ್ತಿ ಪುರಸ್ಕøತ ಡಾ.ಸಿದ್ಧರಾಮ ಹೊನ್ಕಲ್ ಭಾಗವಹಿಸಲಿದ್ದಾರೆಂದು ಅನ್ವೇಷಣೆ ಸಾಹಿತ್ಯ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ, ಚಲನಚಿತ್ರ ನಿರ್ದೇಶಕರು, ಕರ್ನಾಟಕ ಸರ್ಕಾರದ ಉನ್ನತ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರು ಆದ ಭದ್ರಾವತಿ ರಾಮಾಚಾರಿ ತಿಳಿಸಿದ್ದಾರೆ.