Home ಜಿಲ್ಲೆ ಕಲಬುರಗಿ 5 ಬಡ ಕುಟುಂಬಗಳ ಮನೆಗಳ ತೆರವು ಕುಟುಂಬಗಳು ಬೀದಿಗೆ : ಅಯ್ಯಪ್ಪ ರಾಮತೀರ್ಥ

5 ಬಡ ಕುಟುಂಬಗಳ ಮನೆಗಳ ತೆರವು ಕುಟುಂಬಗಳು ಬೀದಿಗೆ : ಅಯ್ಯಪ್ಪ ರಾಮತೀರ್ಥ

ಕಲಬುರ್ಗಿ,ಆ ,28:ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಕ್ಷೇತ್ರ ನಾಗಾವಿ ಪಾರಂಪರಿಕ ಪ್ರದೇಶದ ನಂದಿ ಭಾವಿ ಪಕ್ಕದಲ್ಲಿ ಸುಮಾರು 21 ವರ್ಷಗಳಿಂದ ವಾಸವಿರುವ ಬಡ ಹಾಗೂ ನಿರ್ಗತಿಕ 5 ಕುಟುಂಬಗಳ ಮನೆಗಳನ್ನು ತಾಲೂಕು ಅಡಳಿತವು ರಾಜ್ಯ ಪುರಾತತ್ವ ಇಲಾಖೆಯ ಸೂಚನೆಯ ಮೇರೆಗೆ ಹಾಗೂ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಕಾರಣದಿಂದ ಈ 5 ಬಡ ಕುಟುಂಬಗಳ ಮನೆಗಳನ್ನು ತೆರವು ಗೊಳಿಸಬೇಕೆಂಬ ಸೂಚನೆಯಿಂದ ಯಾರ ಆಸರೆ ಇಲ್ಲದ ಇಲ್ಲಿನ ಕುಟುಂಬಗಳು ತೊಂದರೆಗೊಳಗಾಗಿ ಬೀದಿಗೆ ಬರುವಂತಾಗಿತ್ತು. ಈ ವಿಷಯವಾಗಿ ನಾನು ದಿನಾಂಕ 21-08-2026 ರಂದು ತಹಶೀಲ್ದಾರರ ಕಚೇರಿಗೆ ತೆರಳಿ ತಾಲೂಕ ದಂಡಾಧಿಕಾರಿಗಳಾದ ಮಾನ್ಯ ಶ್ರೀ ನಾಗಯ್ಯ ಸ್ವಾಮಿ ಹಿರೇಮಠ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡಲಾಯಿತು. ಮಾನವೀಯತೆಯ ದೃಷ್ಟಿಯಿಂದ ಈ ನಿರ್ಗತಿಕ ಕುಟುಂಬಗಳನ್ನೂ ಬೇರೆ ಕಡೆ ವಾಸಿಸಲು ಸಮಯವಕಾಶ ಹಾಗೂ ಸರ್ಕಾರದ ಯಾವುದಾದರೂ ನಗರ ವಸತಿ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು ಈ ಕುಟುಂಬಗಳಿಗೆ ಅವಕಾಶ ಕಲ್ಪಿಸಿ ಸಹಾಯ ಮಾಡಬೇಕೆಂದು ತಾಲೂಕ ಆಡಳಿತಕ್ಕೆ ಅಂದು ಮನವಿ ಮಾಡಿದ್ದೇನು. ಅಲ್ಲದೆ ಈ ವಿಷಯವನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಕಲ್ಬುರ್ಗಿ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೇಶಕರ ಗಮನಕ್ಕೂ ಸಹ ದೂರವಾಣಿ ಮುಖಾಂತರ ತಂದಿರುತ್ತೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ತಹಶೀಲ್ದಾರರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿ ಅಂದು ನನಗೆ ಭರವಸೆಯನ್ನು ನೀಡಿದ್ದರು. ಅದರಂತೆ ಇಂದು ದಿನಾಂಕ 27-08-2026 ರಂದು ಅವರು ಅವರ ಸಿಬ್ಬಂದಿಯೊಂದಿಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ವಾಸವಿರುವ ಈ 5 ಬಡ ಕುಟುಂಬಗಳಾದ 1) ಶ್ರೀಮತಿ ದೇವಕಿ ಗಂಡ ದೇವಪ್ಪ. 2) ಶ್ರೀಮತಿ ಸಾಯಮ್ಮ ಗಂಡ ದೇವಯ್ಯ 3) ಶ್ರೀಮತಿ ಪಾರ್ವತಿ ಗಂಡ ರಾಜು 4) ಶ್ರೀಮತಿ ಪದ್ಮ ಗಂಡ ನರಸಪ್ಪ 5) ಶ್ರೀ ಶಿವಪ್ಪ ತಂದೆ ಮಲ್ಲಪ್ಪ ಎಂಬುವವರ ಈ ಕುಟುಂಬಗಳು ಹಾಗೂ ಅವರ ಮಕ್ಕಳು ಸೇರಿದಂತೆ ಒಟ್ಟು 18 ಸದಸ್ಯರು ಇಲ್ಲಿ ನೆಲೆಸಿರುತ್ತಾರೆ. ಮಾನ್ಯ ತಸಿಲ್ದಾರರು ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತು ಕೇವಲ 3 ದಿನಗಳ ಒಳಗಾಗಿ ಇಲ್ಲಿನ ಮನೆಗಳನ್ನು ತೆರವುಗೊಳಿಸುವ ಅವರ ಆದೇಶವನ್ನು ಪುನರ್ ಪರಿಶೀಲಿಸಿ ಹೆಚ್ಚಿನ ಸಮಯಾವಕಾಶ ನೀಡಲು ಮನವಿ ಮಾಡಲಾಯಿತು. ಅದರಂತೆ ಮಾನವೀಯ ದೃಷ್ಟಿಯಿಂದ ಮತ್ತೊಂದು ವಾರದವರೆಗೆ ಮನೆಗಳ ತೆರವು ಕಾರ್ಯ ವಿಸ್ತರಿಸಿ, ಸಮಯವಕಾಶವನ್ನು ನೀಡಿದರು. ಅಲ್ಲದೆ ಮುಂಬರುವ ದಿನಗಳಲ್ಲಿ ಸರ್ಕಾರದ ಯಾವುದಾದರೂ ಒಂದು ವಸತಿ ಯೋಜನೆಯಲ್ಲಿ ಈ ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ತಹಶೀಲ್ದಾರ್ರು ಇಂದು ನನ್ನ ಸಮ್ಮುಖದಲ್ಲಿ ಭರವಸೆಯನ್ನು ನೀಡಿದ್ದರಿಂದ ಇಂದು ಆ ಬಡ ಕುಟುಂಬಗಳಿಗೆ ಅಲ್ಪ ಮಟ್ಟಿಗೆ ನೆಮ್ಮದಿ ತಂದಿದ್ದು ಅವರು ಮನೆಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿಕೊಳ್ಳುವುದಾಗಿ ಒಪ್ಪಿಕೊಂಡರು. ಬಹು ವರ್ಷಗಳಿಂದ ಚರ್ಚಿತ ಹಾಗೂ ವಿವಾದಾತ್ಮಕ ಈ ಪ್ರಕರಣವು ಇತ್ಯರ್ಥವಾಗದೆ ಎಲ್ಲರ ಸಮ್ಮುಖದಲ್ಲಿ ಇಂದು ಅಂತ್ಯಗೊಂಡಿದ್ದು ನನಗೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ತಾಲೂಕ್ ಆಡಳಿತವು ಕೊಟ್ಟ ಮಾತಿನಂತೆ ಆ ಕುಟುಂಬಗಳಿಗೆ ಆಸರೆ ಆಗಬೇಕೆಂದ ಅಯ್ಯಪ್ಪ ರಾಮತೀರ್ಥ ಬಿ.ಜೆ.ಪಿ ಹಿರಿಯ ಮುಖಂಡ ಚಿತ್ತಾಪುರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ