
ಹುಬ್ಬಳ್ಳಿ,ಫೆ28: ನಗರದ ದಾಜಿಬಾನ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದ ಸಭಾಂಗಣದಲ್ಲಿ ,ಹೋಳಿ ಹುಣ್ಣಿಮೆ ನಿಮಿತ್ಯ ಶ್ರೀ ರತಿದೇವಿ ಶ್ರೀ ಕಾಮದೇವರ ಮೂರ್ತಿಗಳ ಪ್ರತಿಷ್ಠಾಪನೆ ವಿಷಯವಾಗಿ ಕರೆದ ಸಭೆಯು, ಎಸ್ ಎಸ್ ಕೆ ಪಂಚ ಟ್ರಸ್ಟ್ , ಶ್ರೀ ದುರ್ಗಾದೇವಿ ದೇವಸ್ಥಾನ , ದಾಜಿಬಾನ ಪೇಟ , ಹುಬ್ಬಳ್ಳಿ ಸಂಸ್ಥೆಯ ಜಾಯಿಂಟ್ ಚೀಫ್ ಟ್ರಸ್ಟಿ ನೀಲಕಂಠ ಪಿ. ಜಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಎಸ್ ಎಸ್ ಕೆ ಪಂಚ ಟ್ರಸ್ಟ್ ಶ್ರೀ ದುರ್ಗಾದೇವಿ ದೇವಸ್ಥಾನ, ದಾಜಿಬಾನ ಪೇಟ್ ಹುಬ್ಬಳ್ಳಿ ಇದರ ಗೌರವ ಕಾರ್ಯದರ್ಶಿ ಭಾಸ್ಕರ ಎನ್. ಜಿತೂರಿ ಇವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಜ್ಯೋತಿಷಿಗಳಾದ ಪ್ರವೀಣ ಬದ್ದಿ ಇವರು ಮಾತನಾಡಿ,ಚಂದ್ರ ಗ್ರಹಣದ ವೇದವು ಪ್ರಾರಂಭವಾಗುವ ಪೂರ್ವ ಮುಂಜಾನೆ 6 ಗಂಟೆ 50 ನಿಮಿಷದೊಳಗೆ ಹಾಗೂ ಚಂದ್ರ ಗ್ರಹಣ ಮುಗಿದ ನಂತರ ಸಾಯಂಕಾಲ 6 ಗಂಟೆ 48 ನಿಮಿಷದ ನಂತರ ಶ್ರೀ ರತಿದೇವಿ ಶ್ರೀ ಕಾಮದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕೆಂದು ಪಂಚಾಂಗದ ವಿವರವನ್ನು ಸಭೆಗೆ ತಿಳಿಹೇಳಿದರು.
ಎನ್‍ಎಂ ಮೆಹರವಾಡೆ, ಬಸವರಾಜ ಕುಂದಗೋಳ, ಎನ್. ಆರ್. ಹಬೀಬ, ನಾರಾಯಣ್ ಸಿಂಧೆ, ನಿಂಗಪ್ಪ ಉಪ್ಪಾರ್, ಭರತ ಊಟವಾಲೆ, ಮಂಜುನಾಥ ಪವಾರ, ಪ್ರಕಾಶ ಬುರುಬುರೆ ಉಪಸ್ಥಿತರಿದ್ದರು.



























